ಪದಕ ಬೇಟೆಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

17ನೇ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್‌ ಚಾಂಪಿಯನ್‌ಶಿಪ್, 2ನೇ ದಿನವೂ ಮುಂದುವರಿದ ಪದಕ ಬೇಟೆ

Team Udayavani, Feb 21, 2021, 5:08 PM IST

ಪದಕ ಬೇಟೆಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

ಗದಗ: ಇಲ್ಲಿನ ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ನಡೆಯುತ್ತಿರುವ17ನೇ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸೈಕ್ಲಿಸ್ಟ್‌ಗಳ ಪದಕಗಳ ಬೇಟೆ ಮುಂದುವರಿದಿದೆ.

2 ದಿನಗಳಿಂದ ಅತೀ ಹೆಚ್ಚು ಪದಕ ಪಡೆಯುವ ಮೂಲಕ ಕರ್ನಾಟಕ ಸಮಗ್ರ ವೀರಾಗ್ರಣಿಯತ್ತಮುನ್ನುಗ್ಗುತ್ತಿದ್ದು, ಕರ್ನಾಟಕದ ಸ್ಪರ್ಧಾಳುಗಳು ಪದಕ ಬೇಟೆಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿಪಂ ಹಾಗೂ ಸೈಕ್ಲಿಂಗ್‌ ಫೆಡರೇಶನ್‌ ಆಫ್‌ ಇಂಡಿಯಾ, ಕರ್ನಾಟಕ ರಾಜ್ಯ ಸೈಕ್ಲಿಂಗ್‌ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಆರಂಭಗೊಂಡ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಮೊದಲ ದಿನವೇ ಕರ್ನಾಟಕದ ಸೈಕ್ಲಿಸ್ಟ್‌ಗಳು 3 ಚಿನ್ನ, ತಲಾ 2 ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಬಾಚಿಕೊಂಡರು.

ಸ್ಪರ್ಧೆಯ ಎರಡನೇ ದಿನವಾದ ಶನಿವಾರವೂ ಪದಕಗಳ ಗಳಿಕೆ ಮುನ್ನಡೆದಿದೆ. ಶನಿವಾರ ಆರರಲ್ಲಿಮೂರು ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಕರ್ನಾಟಕದ ಸೈಕ್ಲಿಸ್ಟ್‌ಗಳಿಗೆ 1ಚಿನ್ನ, 2ಬೆಳ್ಳಿ ಹಾಗೂ1 ಕಂಚಿನ ಪದಕಗಳು ಒಲಿದು ಬಂದಿವೆ. ಎರಡು ದಿನಗಳಲ್ಲಿ ಒಟ್ಟು 4 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನಪದಕಗಳು ಕನ್ನಡಾಂಬೆಯ ಮುಡಿಗೇರಿವೆ. ಇತರೆರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಪದಕಗಳೇ ಹೆಚ್ಚಿದ್ದು, ರವಿವಾರ ನಡೆಯುವ ಸ್ಪರ್ಧೆಗಳು ಕುತೂಹಲ ಕೆರಳಿಸಿದೆ.

ವಿಜೇತರ ವಿವರ: ಶನಿವಾರ ನಡೆದ 18 ವರ್ಷದೊಳಗಿನ ಬಾಲಕಿಯರ ವೈಯಕ್ತಿಕ 13.8 ಕಿ.ಮೀ. ಟೈಮ್‌ ಟ್ರಾಯಲ್‌ ವಿಭಾಗದಲ್ಲಿ ಕರ್ನಾಟಕದಅಕ್ಷತಾ ಬಿರಾದಾರ 1.04 ಗಂಟೆಯಲ್ಲಿ ಗುರಿ ತಲುಪಿಪ್ರಥಮ ಸ್ಥಾನ ಅಲಂಕರಿಸಿದರು. ಕೇರಳದ ಬಿನಿಲಾಮೊಲ್‌ ಗಿಬಿ 1.05 ಗಂಟೆ, ಕರ್ನಾಟಕದ ಸ್ಟಾರ್‌ನರಜರಿ1.07 ಗಂಟೆಯಲ್ಲಿ ಗುರಿ ತಲುಪಿ ಕ್ರಮವಾಗಿದ್ವಿತೀಯ-ತೃತೀಯ ಸ್ಥಾನ ಗಳಿಸಿದರು.ಪುರುಷರ 18.4 ಕಿ.ಮೀ. ಮಿಕ್ಸಡ್‌ ಟೀಮ್‌ರಿಲೇಯಲ್ಲಿ ಮಹಾರಾಷ್ಟ್ರದ ವಿಠಲ್‌ ಭೂಸಲೆ, ಭೀಮ ರೊಕಯಾ, ಪ್ರಣೀತಾ ಸೊಮನ್‌, ಪ್ರಿಯಾಂಕಾ ಕರಾಂಡೆ ಅವರ ತಂಡ 1.05 ಗಂಟೆಯಲ್ಲಿ ಗುರಿ ಮುಟ್ಟಿ ಪ್ರಥಮ ಸ್ಥಾನ ತಮ್ಮದಾಗಿಸಿಕೊಂಡರು. ಕರ್ನಾಟಕದ ವೈಶಾಕ ಕೆ.ವಿ., ಕೆ.ಕಿರಣ್‌ ಕುಮಾರ ರಾಜು, ಜೋಯಾÕ$° ನರಜರಿ, ದಾನೇಶ್ವರಿ ಪಾಯಣ್ಣವರ ತಂಡ 1.06 ಗಂಟೆ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು. ಉತ್ತರಾಖಂಡದ ರಮೇಶ ಭಾರತಿ, ಪ್ರಿಯಾಂಕಾ ಮೆಹತಾ, ಆಸ್ತಾ ಬಿಸ್ಟ್‌ ಮತ್ತು ಅರ್ಜುನ ರಾಠೊಡ ಅವರ ತಂಡ 1.13 ಗಂಟೆಯಲ್ಲಿ ಗುರಿ ತಲುಪಿ, ತೃತೀಯ ಸ್ಥಾನ ಗಳಿಸಿತು.

ಮಹಿಳೆಯರ 18.4 ಕಿ.ಮೀ. ವೈಯಕ್ತಿಕ ಟೈಮ್‌ ಟ್ರಾಯಲ್‌ ವಿಭಾಗದಲ್ಲಿ ಮಹಾರಾಷ್ಟ್ರದ ಪ್ರಣಿತಾ ಸೋಮನ್‌ 51.46 ನಿಮಿಷದಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಕರ್ನಾಟಕದ ಜೋಯಾ ನರಜರಿ 56.39 ನಿಮಿಷದಲ್ಲಿ, ಮಹಾರಾಷ್ಟ್ರದಪ್ರಿಯಾಂಕ ಕರಾಂಡೆ 57.06 ನಿಮಿಷದಲ್ಲಿ ಗುರಿ ತಲುಪಿ, ಕ್ರಮವಾಗಿ ದ್ವಿತೀಯ-ತೃತೀಯ ಸ್ಥಾನಕ್ಕೆ ಪಡೆದರು.

-ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

CT-Ravi-BJP

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

ABV3

A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.