ರಂಗನವಾಡಿಯಲ್ಲಿ 2ನೇ ಪ್ರಕರಣ

Team Udayavani, Apr 17, 2020, 4:57 PM IST

ರಂಗನವಾಡಿಯಲ್ಲಿ 2ನೇ ಪ್ರಕರಣ

ಗದಗ: ಇಲ್ಲಿನ ರಂಗನವಾಡಿ ಮಹಿಳೆಯೊಬ್ಬರಿಗೆ ಗುರುವಾರ ಮತ್ತೂಂದು ಕೋವಿಡ್ 19 ಸೋಂಕು ದೃಢ ಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಎರಡಕ್ಕೇರಿದೆ. ಗದಗ ನಗರದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಅವಳಿ ನಗರದ ಜನತೆಯಲ್ಲಿ ಆತಂಕ ಹೆಚ್ಚಿಸಿದೆ.

ಒಂದು ವಾರದ ಬಳಿಕ ನಗರದಲ್ಲಿ ಎರಡನೇ ಪ್ರಕರಣ ಪತ್ತೆಯಾಗಿದೆ. ಏ.7ರಂದು ಇಲ್ಲಿನ ರಂಗನವಾಡಿ ಓಣಿಯಲ್ಲಿ 82 ವರ್ಷದ ವೃದ್ಧೆಯಲ್ಲಿ (ಪಿ-166) ಪತ್ತೆಯಾಗಿತ್ತು. ಇದಾದ ನಂತರ ಸುಮಾರು ಅವಳಿ ನಗರ ಸೇರಿದಂತೆ ಯಾವುದೇ ಪ್ರಕರಣಗಳು ದೃಢಪಟ್ಟಿರಲಿಲ್ಲ. ಆದರೆ ಪಿ.166 ರೋಗಿಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 82 ಜನರನ್ನು ಕೋವಿಡ್ 19 ತಪಾಸಣೆ ನಡೆಸಿದರೂ ಎಲ್ಲ ವರದಿಗಳು ನಕಾರಾತ್ಮಕವಾಗಿ ಬಂದಿವೆ. ಆದರೆ ದ್ವಿತೀಯ ಸಂಪರ್ಕದಲ್ಲಿದ್ದ 59 ವರ್ಷ ಮಹಿಳೆಯಲ್ಲಿ (ಪಿ.304) ಗುರುವಾರ ಕೊರೊನಾ ಸೋಂಕು ಖಚಿತವಾಗಿದೆ.

ಗೆಳತಿಯಿಂದ ಸೋಂಕು: ಜಿಲ್ಲೆಯಲ್ಲಿ ಮೊದಲ  ಕೋವಿಡ್ 19 ದೃಢಪಟ್ಟು, ಮೃತಪಟ್ಟಿರುವ ವೃದ್ಧೆ ಹಾಗೂ ಗುರುವಾರ ಸೋಂಕು ಖಚಿತವಾಗಿರುವ ಅಕ್ಕಪಕ್ಕದ ನಿವಾಸಿಗಳು ಕೆಲ ವರ್ಷಗಳಿಂದ ಒಂದೇ ಓಣಿಯಲ್ಲಿ ಜೀವನ ನಡೆಸುತ್ತಿದ್ದರಿಂದ ಸಂಬಂಧಿಕರಿಗಿಂತ ಹೆಚ್ಚು ಆತ್ಮೀಯತೆ ಬೆಳೆದಿತ್ತು. ಅಲ್ಲದೇ ಪಿ.166 ನಂತರ ನೆರೆ ಮನೆಯ 59 ವರ್ಷ ಮಹಿಳೆಗೆ ಸೋಂಕು ಕಂಡು ಬಂದಿದೆ. ಹೀಗಾಗಿ ವೃದ್ಧೆ ಯಿಂದಲೇ ಸೋಂಕು ಹರಡಿದೆ ಎನ್ನಲಾಗಿದೆ.

ಇಡೀ ರಂಗನವಾಡಿ ಖಾಲಿ: ಇಲ್ಲಿನ ರಂಗನವಾಡಿ ಓಣಿಯಲ್ಲೇ ಎರಡು ಕೋವಿಡ್ 19 ಪ್ರಕರಣಗಳು ಕಂಡು ಬಂದಿವೆ. ಹೀಗಾಗಿ ಇಡೀ ಓಣಿಯಲ್ಲಿರುವ ಎಲ್ಲರನ್ನೂ ವೈದ್ಯಕೀಯ ತಪಾಸಣೆ ನಡೆಸಿ, ಕ್ವಾರಂಟೈನ್‌ನಲ್ಲಿಡಲು ಜಿಲ್ಲಾಡಳಿತ ನಿರ್ಧರಿಸಿದೆ.ಪಿ-166 ಪ್ರರಕಣ ದೃಢವಾಗುತ್ತಿದ್ದಂತೆ ರಂಗನವಾಡಿ ಹಾಗೂ ಎಸ್‌.ಎಂ. ಕೃಷ್ಣಾ ನಗರದಲ್ಲಿ ಆರೋಗ್ಯ ಇಲಾಖೆ ಸಮೀಕ್ಷೆಚುರುಕುಗೊಳಿಸಿತ್ತು.ಅದರಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ82 ಜನರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ದ್ವಿತೀಯಸಂಪರ್ಕದಲ್ಲಿದ್ದವರ ತಪಾಸಣೆ ನಡೆಸುತ್ತಿದ್ದಾಗ ಈ ಪ್ರಕರಣಕಂಡು ಬಂದಿದೆ. ಇದರ ಬೆನ್ನಲ್ಲೇ ಬುಧವಾರ ತಡರಾತ್ರಿ ಪಿ.304 ಕುಟುಂಬಸ್ಥರನ್ನು ಆಸ್ಪತ್ರೆಗೆ ಸಾಗಿಸಿದ್ದು, ಐಸೋಲೇಷನ್‌ನಲ್ಲಿ ಇಡಲಾಗಿದೆ. ಪಿ.304 ಖಚಿತವಾಗುತ್ತಿದ್ದಂತೆ ಗುರುವಾರಮಧ್ಯಾಹ್ನ 1 ಗಂಟೆ ಸುಮಾರಿಗೆ ಮೂರು ಆಂಬ್ಯುಲನ್ಸ್‌ಗಳಲ್ಲಿ ರಂಗನವಾಡಿಗೆ ಧಾವಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಮನೆಯನ್ನುಜಾಲಾಡಿದರು. ಮನೆಯಲ್ಲಿದ್ದವರನ್ನು ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಟಾಪ್ ನ್ಯೂಸ್

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

Bellary

Bellary: ಐದು ವರ್ಷದ ಮಗುವಿನ ಅತ್ಯಾಚಾರ ನಡೆಸಿದ್ದ ಆರೋಪಿಗೆ ಗುಂಡೇಟು

Ranji Trophy: ಭಾರತ ಕ್ರಿಕೆಟ್‌ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?

Ranji Trophy: ಭಾರತ ಕ್ರಿಕೆಟ್‌ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

4-gundlupete

Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ

3-Tulu-language

Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; Shirahatti Constituency MLA Chandru Lamani car driver ends his life

Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ

ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್‌ ಸದಸ್ಯರ ಸೆರೆ

ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್‌ ಸದಸ್ಯರ ಸೆರೆ

Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ

Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ

Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್‌ ಮಹಿಳೆ ಸೆರೆ

Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್‌ ಮಹಿಳೆ ಸೆರೆ

Lalbagh Flower Show: ಲಾಲ್‌ಬಾಗ್‌ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ

Lalbagh Flower Show: ಲಾಲ್‌ಬಾಗ್‌ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.