ಬಡ ಕಾರ್ಮಿಕರಿಗೆ 4 ಸಾವಿರ ಕಿಟ್ ವಿತರಣೆ: ಮಾಳಶೆಟ್ಟಿ
Team Udayavani, Apr 27, 2020, 5:45 PM IST
ಗದಗ: ಮಹಾಮಾರಿ ಕೋವಿಡ್ 19 ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ತೊಂದರೆಯಲ್ಲಿರುವ ಬಡವರು ಹಾಗೂ ನಿರ್ಗತಿಕರಿಗೆ ಗದಗ ಗ್ರೇನ್ ಮಾರ್ಕೆಟ್ ಸಗಟು ವ್ಯಾಪಾರಸ್ಥರ ಸಂಘ, ದಲಾಲ ವರ್ತಕರ ಸಂಘ, ಗ್ರೇನ್ ಮಾರ್ಕೆಟ್ ಕಿರುಕುಳ ವ್ಯಾಪಾರಸ್ಥರು ಹಾಗೂ ಇತರೆ ಜನರ ಸಹಕಾರದಿಂದ ನಾಲ್ಕು ಸಾವಿರ ಕಿಟ್ ವಿತರಿಸಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದರು.
ನಗರದ ತೇರಾಪಂಥ ಸಭಾಂಗಣದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 1500 ಕಿಟ್‌ಗಳನ್ನು ವಿತರಿಸಿದ್ದು, ಸದ್ಯ ಸಾವಿರ ಕಿಟ್ ಗಳು ಸಿದ್ಧಗೊಳುತ್ತಿವೆ. ಅವಳಿ ನಗರದಲ್ಲಿ ಪ್ರದೇಶವಾರು ಬಡವರನ್ನು ಗುರುತಿಸಿ, ಕಿಟ್‌ಗಳನ್ನು ಆಯಾ ಪ್ರದೇಶದ ಹಿರಿಯರ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವರ್ತಕರ ಸಂಘಟನೆಗಳೊಂದಿಗೆ ವಿವಿಧ ಬ್ಯಾಂಕ್‌ಗಳು ಕೂಡ ಕೈಜೋಡಿಸಿವೆ. ಕೆನರಾ ಬ್ಯಾಂಕ್‌ನವರು 50 ಸಾವಿರ ರೂ., ಅರ್ಬನ್ ಮರ್ಚಂಟ್ಸ್ ಬ್ಯಾಂಕ್‌ನವರು 10 ಸಾವಿರ ರೂ. ಹಾಗೂ ಸ್ಟೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್‌ನ ವ್ಯವಸ್ಥಾಪಕರು ಕೂಡ ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆ ಎಂದು ಹೇಳಿದರು.
ಆಹಾರ ಸಾಮಗ್ರಿಗಳ ಕಿಟ್ ಪಡೆಯುವಾಗ ಕೆಲವರಿಗೆ ಮುಜುಗರವಾಗುತ್ತದೆ. ಇದನ್ನು ತಪ್ಪಿಸಲು ಕಿಟ್ ವಿತರಣೆ ವೇಳೆ ´ಫೋಟೋ ತೆಗೆಯುತ್ತಿಲ್ಲ. ಆದರೆ, ಫಲವಾನುಭವಿಗಳ ಸಮಗ್ರ ಮಾಹಿತಿ ನಮ್ಮಲ್ಲಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಕಿರುಕುಳ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಮೇಲಗಿರಿ ಮಾತನಾಡಿದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಧೀರಜ ಜೈನ್, ದಲಾಲ ವರ್ತಕರ ಸಂಘದ ಅಧ್ಯಕ್ಷ ಹುಚ್ಚಣ್ಣ ಶಹಾಪೂರ, ಖಜಾಂಚಿ ಈರಣ್ಣ ಬಾಳಿಕಾಯಿ, ವಿಶ್ವನಾಥ ರಾಮನಕೊಪ್ಪ, ಮಂಜುನಾಥ ವೀರಲಿಂಗಯ್ಯನಮಠ, ಶಂಭು ಕಾರಕಟ್ಟಿ, ಸಿದ್ದಣ್ಣ ಮಲ್ಲಾಡದ ಸೇರಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.