ಗದುಗಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು!
Team Udayavani, Apr 28, 2019, 2:49 PM IST
ಗದಗ: ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೂರ್ಯನ
ಪ್ರಖರ ಹೆಚ್ಚುತ್ತಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಗರಿಷ್ಠ 40 ಡಿಗ್ರಿ ಸಲ್ಸಿಯಸ್‌ನಷ್ಟು ತಾಪಮಾನ ದಾಖಲಾಗುತ್ತಿದೆ. ಅಲ್ಲದೇ ಮೂರು
ದಿನಗಳ ಹಿಂದೆಯಷ್ಟೇ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಏಳೂವರೆ ದಶಕದ ಹಿಂದಿನ ಸಾರ್ವಕಾಲಿಕ ದಾಖಲೆಯನ್ನು
ಸರಿಗಟ್ಟಿದೆ.
ಹೌದು. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿ ತಾಪಮಾನವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಏಪ್ರಿಲ್‌ನಲ್ಲಿ ಸಹಜವಾಗಿ ಗರಿಷ್ಠ 38ರಿಂದ 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿತ್ತು. ಆದರೆ, ಗುರುವಾರ 41 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಬಳಿಕ ಶುಕ್ರವಾರ ಮತ್ತು ಶನಿವಾರವೂ ಗರಿಷ್ಠ 40 ಡಿಗ್ರಿ ಉಷ್ಣಾಂಶ
ದಾಖಲಾಗಿದೆ. ಏಳೂವರೆ ದಶಕಗಳ ಹಿಂದೆ(1941ರಲ್ಲಿ)
ಗದಗ-ಬೆಟಗೇರಿ ಅವಳಿ ನಗರದಲ್ಲಿ 41.01 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ
ದಾಖಲಾಗಿತ್ತು. ಇದೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. 2016ರ ಏಪ್ರಿಲ್‌ನಲ್ಲಿ 40.5 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು.
ಕಳೆದ ಕಳೆದೊಂದು ದಶಕದಲ್ಲಿ ದಾಖಲಾಗಿರುವ ಗರಿಷ್ಠ ತಾಪಮಾನ ಇದಾಗಿತ್ತು. ಆದರೆ, ಈ ಬಾರಿಬಿಸಿಲು ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಗದಗ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗಿತ್ತು. ಆನಂತರ ಒಂದೆರಡು ದಿನ ಮಳೆಯಾಗಿದ್ದರೂ ತಾಪಮಾನ ಕಡಿಮೆಯಾಗಲಿಲ್ಲ. ಹೀಗಾಗಿ ಬೆಳಗ್ಗೆ 9ರಿಂದಸಂಜೆ 5ರ ವರೆಗೂ ಸೂರ್ಯನ ಪ್ರಖರ ಮುಂದುವರೆಯುತ್ತದೆ. ಮಧ್ಯಾಹ್ನ 1ರಿಂದ4ರ ವರೆಗೆ ಬರೋಬ್ಬರಿ 3 ಗಂಟೆಗಳ ಕಾಲ ರಣ ಬಿಸಿಲಿನಿಂದ ಭೂಮಿ ಕಾದ ಕಾವಲಿಯಂತಾಗುತ್ತಿದೆ. ಬಿರು ಬಿಸಿಲು, ಬಿಸಿಗಾಳಿಯಿಂದಾಗಿ ಜನರು ಹೊರ ಬರಲು ಹಿಂದೇಟು ಹಾಕುವಂತಾಗಿದೆ.
ಗದಗ-ಬೆಟಗೇರಿ ಅವಳಿ ನಗರದ ವಾಣಿಜ್ಯ ಪ್ರದೇಶಗಳೂ ಮಧ್ಯಾಹ್ನದ ಸಮಯದಲ್ಲಿ ಜನರಿಲ್ಲದೇ ಬಣಗುಡುತ್ತಿವೆ. ಇನ್ನೂ ಕೆಲವರು ಅನಿವಾರ್ಯ ಕಾರ್ಯಗಳಿಂದ ಹೊರಬಿದ್ದರೂ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿಗಳ ಆಶ್ರಯ ಪಡೆಯುವಂತಾಗುತ್ತದೆ. ಅಲ್ಲದೇ, ಬಿಸಿಲಿನಝಳದಿಂದ ದೇಹವನ್ನು ತಂಪಾಗಿಸಲು ಎಳನೀರು, ಕಬ್ಬಿನ ಹಾಲು, ವಿವಿಧ ರೀತಿಯಸೋಡಾ ಹಾಗೂ ತಂಪು ಪಾನೀಯಗಳಿಗೆ ಮೊರೆ ಹೋಗುವಂತಾಗಿದೆ.
ಬಿಸಿಲಿನ ಹಿನ್ನೆಲೆಯಲ್ಲಿ ದೇಹವನ್ನು ತಂಪಾಗಿಸಿಕೊಳ್ಳಲು ಚಿಣ್ಣರು, ಯುವಕರು ಇಲ್ಲಿನ
ರಾಜೀವಗಾಂಧಿ ನಗರ, ವಸಂತನಗರದಲ್ಲಿರುವ ಈಜುಕೊಳ ಸೇರಿದಂತೆ ವಿವಿಧ ಬಾವಿಗಳತ್ತ ಮುಖ ಮಾಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನಿರಂತರ ಮಳೆ
ಕೊರತೆಯಿಂದ ಬರಗಾಲ ಆವರಿಸಿರುವುದೂತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಈ ಬಾರಿ ಏಪ್ರಿಲ್ ಆರಂಭದಿಂದಲೇ ಸರಾಸರಿ 37-39ರಷ್ಟುಸರಾಸರಿ ಉಷ್ಣಾಂಶ ಮುಂದುವರೆಯುತ್ತಿದೆ. ಕಳೆದ ಮೂರು ದಿನಗಳಿಂದ ಬಿಸಲಿನ ತಾಪಹೆಚ್ಚುತ್ತಲೇ ಇದೆ. ಇದೀಗ 40, 41 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗುತ್ತಿದ್ದು, ಮೇ ತಿಂಗಳ
ಮೊದಲ ವಾರದೊಳಗಾಗಿ ಒಂದೆರಡು ದೊಡ್ಡ ಮಳೆಯಾಗದಿದ್ದರೆ, 42-43ರಷ್ಟು
ಉಷ್ಣಾಂಶ ದಾಖಲಾದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.