ಕೃಷಿಯಲ್ಲಿ ಆಧುನಿಕ ಉಪಕರಣ ಬಳಕೆಗೆ ಸಲಹೆ
Team Udayavani, Feb 19, 2020, 1:20 PM IST
ಮುಳಗುಂದ: ಕೃಷಿಯಲ್ಲಿ ಆಧುನಿಕ, ಸುಧಾರಿತ ಹಾಗೂ ನವೀನ ತಾಂತ್ರಿಕ ಬೇಸಾಯದಿಂದ ಹೆಚ್ಚು ಬೆಳವಣಿಗೆ ಸಾಧ್ಯ. ನೀರಿನ ಸದ್ಬಳಕೆ ಹಾಗೂ ಸಿರಿಧಾನ್ಯಗಳನ್ನು ಬೆಳೆದು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರವನವರ ಹೇಳಿದರು.
ಸಮೀಪದ ನೀಲಗುಂದ ಗ್ರಾಮದ ಗುದ್ನೇಶ್ವರ ಮಠದಲ್ಲಿ ದಿವ್ಯ ಚೇತನ ಟ್ರಸ್ಟ್ ವತಿಯಿಂದ ಆಯೋಜಿಸಲಾದ ಕೃಷಿ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ,ಬರಗಾಲದಲ್ಲಿಯೂ ಕೂಡ ಕನಿಷ್ಟ ಇಳುವರಿ ಕೊಟ್ಟು ರೈತನ ಆರ್ಥಿಕತೆಗೆ ಹಾಗೂ ನಮ್ಮ ಹವಾಮಾನಕ್ಕೆ ಕೊಂದಿಕೊಂಡು ಬೆಳೆಯುವ ಬೆಳೆಗಳನ್ನು ಹೆಚ್ಚು ಬೆಳೆಯುವುದಲ್ಲದೆ ನಮ್ಮ ಆಹಾರವನ್ನು ಉತ್ಪಾದಿಸುವ ಕೆಲಸ ರೈತರು ಮಾಡಬೇಕು. ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗೆಗೆ ನಮ್ಮ ತಾಲೂಕು ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಮಾಡಿದಂಥಾ ಜಲಾನಯನ ಆಧಾರದಡಿ ಎನ್‌ಆರ್‌ಇಜಿ ಯೋಜನೆಯಡಿ ಉದ್ಯೋಗ ಖಾತರಿಯಲ್ಲಿ ವಿಶಿಷ್ಟ ಸಾಧನೆ ಮಾಡಿ ಇಲಾಖೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಆಕಾರಣಕ್ಕಾಗಿ ಮಳೆ ನೀರನ್ನು ಸಂರಕ್ಷಣೆ ಮಾಡುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಮಾತನಾಡಿ, ಕೃಷಿಯಿಂದ ವಿಮುಖರಾಗುತ್ತಿರುವ ಯುವಕರು ಇಂದು ಅವಿಷ್ಕಾರಗೊಂಡಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕ್ಷೇತ್ರವನ್ನು ಹೆಚ್ಚಿಸಿ ದೇಶಕ್ಕೆ ಅನ್ನ ನೀಡುವ ಮಹತ್ಕಾರ್ಯ ಮಾಡಲು ಮುಂದಗಬೇಕು. ಇದರ ಜೊತೆಗೆ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಎಂದರು.
ಸಹಾಯಕ ಕೃಷಿ ಅಧಿಕಾರಿ ಎಂ.ಬಿ. ಸುಂಕಾಪುರ, ರವಿ ವಗ್ಗನವರ, ರಾಚನಗೌಡ ಅಜ್ಜನಗೌಡ್ರ, ಕುಬೇರಡ್ಡಿ ಬಂಗಾರಿ, ಪ್ರವೀಣ ಬಂಗಾರಿ, ಫಕೀರಪ್ಪ ಬಾಲರಡ್ಡಿ, ಮಹೇಶ ಬಾಲರಡ್ಡಿ, ಬೂದಯ್ಯ ಬಾಗವಾಡಮಠ, ಬಸಪ್ಪ ಪೂಜಾರ, ನವೀನ ಬಂಗಾರಿ, ಪ್ರಭು ಅಂಗಡಿ, ಗಣೇಶ ಟ್ರೇಡಿಂಗ್ ಕಂಪನಿ, ಓಂಕಾರ, ಪ್ರಗತಿ, ಮೆಹರವಾಡೆ ಅಗ್ರೋಟೆಕ್ ಕಂಪನಿ ಕೃಷಿ ಪರಿಕರಗಳು ಸೇರಿದಂತೆ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.