ನೆರೆ ಬಂದು ಹೋದ ಮೇಲೆ
Team Udayavani, Aug 13, 2019, 12:20 PM IST
ರೋಣ: ಹೊಳೆಆಲೂರ ಗ್ರಾಮದೊಳಗೆ ಪೂರ್ಣ ಪ್ರಮಾಣದಲ್ಲಿ ಇಳಿಯದ ಮಲಪ್ರಭಾ ನದಿ ನೀರು.
ರೋಣ: ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕಿ ಅಕ್ಷರಸಃ ನಲುಗಿ ಹೋಗಿರುವ ನೆರೆ ಸಂತ್ರಸ್ತರು ಮರಳಿ ತಮ್ಮ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಇನ್ನೂ ಹೆಚ್ಚು ನೀರು ಬರುವ ಸಂಭಂವವಿದೆ, ಯಾರೂ ಹಳೆಯ ಗ್ರಾಮಗಳಿಗೆ ತೆರಳಬೇಡಿ, ಇಲ್ಲಿಯೇ ವಾಸಿಸಿ ಎನ್ನುತ್ತಿದ್ದಾರೆ. ವಿಪರ್ಯಾಸವೆಂದರೆ ಸ್ಥಳಾಂತರಗೊಂಡ ‘ಆಸರೆ ಗ್ರಾಮ’ದಲ್ಲಿ ಈಗಿರುವ ಕುಟುಂಬಕ್ಕೆ ಅನುಗುಣವಾಗಿ ಮನೆಗಳಿಲ್ಲ.
2007-08ರ ಪ್ರವಾಹಕ್ಕೆ ಸಿಲುಕಿ ಮನೆಗಳನ್ನು ಕಳೆದುಕೊಂಡವರಿಗೆ ಅಂದು ಸರ್ಕಾರ ‘ಆಸರೆ ಗ್ರಾಮ’ವೆಂಬ ನಾಮಕರಣದೊಂದಿಗೆ ಹೊಸ ಗ್ರಾಮ ನಿರ್ಮಿಸಿಕೊಟ್ಟಿತು. ಅಮರಗೋಳ ಗ್ರಾಮದವರಿಗೆ 415 ಮನೆ, ಬಸರಕೋಡ-234, ಬಿ.ಎಸ್. ಬೇಲೆರಿ-389, ಹೊಳೆಆಲೂರ-473, ಹೊಳೆ ಮಣ್ಣೂರ-554, ಮಾಳವಾಡ-605, ಮೆಣಸಗಿ-1102, ಗಾಡ ಗೋಳಿ-504, ಯಾ.ಸ. ಹಡಗಲಿ-593, ಹೊಳೆಹಡಗಲಿ- 305, ಕುರವಿನಕೊಪ್ಪ-121 ಸೇರಿ ಒಟ್ಟು 5295 ಮನೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಹೊಳೆಆಲೂರಿನಲ್ಲಿ 2300 ಕುಟುಂಬ, ಬಸರಕೋಡ-300, ಬಿ.ಎಸ್. ಬೇಲೆರಿ-400, ಅಮರಗೋಳ- 450, ಬಸರಕೋಡ-350, ಮೇಣಸಗಿ-1250, ಹೊಳೆಹಡಗಲಿ- 385, ಕುರವಿನಕೊಪ್ಪ-150, ಗಾಡಗೋಳಿ-350, ಯಾ.ಸ.ಹಡಗಲಿ-650, ಹೊಳೆಮಣ್ಣೂರ- 664, ಮಾಳವಾಡ-710 ಕುಟುಂಬಗಳಿವೆ. ಗ್ರಾಮಗಳಲ್ಲಿ ಇರುವ ಕುಟುಂಬಗಳ ಸಂಖ್ಯೆ ಹತ್ತು ವರ್ಷದಲ್ಲಿ ಅಧಿಕವಾಗಿದ್ದು, ಸರ್ಕಾರ ನೀಡಿರುವ ಮನೆಗಳ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಸಂತ್ರಸ್ತರಿಗೆ ಇಲ್ಲಿ ಇರಲು ಜಾಗವಿಲ್ಲ. ಅಲ್ಲಿ ಇರಲು ಪ್ರವಾಹ ಮತ್ತು ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಎಲ್ಲಿರಬೇಕು ಎಂಬ ಚಿಂತೆಯಲ್ಲಿ ನೆರೆ ಸಂತ್ರಸ್ತರಿದ್ದಾರೆ. ಇದರಿಂದ ನಿರಾಶ್ರೀತರಿಗೆ ಹೊಸ ಗ್ರಾಮದಲ್ಲಿದ್ದರು ನೋವೆ, ಹಳೆ ಗ್ರಾಮಕ್ಕೆ ಹೋದರು ನೋವೆ. ಇದರಿಂದಾಗಿ ಸಂತ್ರಸ್ತರ ಬದುಕು ನುಂಗಲಾದರ ಬಿಸಿ ತುಪ್ಪವಾಗಿದೆ.
ಹೊಳೆಮಣ್ಣೂರ ಪಿಡಿಒ ಬಿ.ಎಸ್. ತೋಟಗಂಟಿ ಹಾಗೂ ಗ್ರೇಡ್-2 ಕಾರ್ಯದರ್ಶಿ ಎಂ.ಆರ್. ತಿಮ್ಮನಗೌಡ್ರ ಅವರನ್ನು ಅಮಾನತುಗೊಳಿಸಲಾಗಿದೆ. ಮಲಪ್ರಭಾ, ಬೆಣ್ಣಿಹಳ್ಳ ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿದ್ದು, ಸೂಚಿತ ಕಾರ್ಯಕ್ಕೆ ಗೈರು ಹಾಜರಾಗಿ ಕರ್ತವ್ಯ ಲೋಪ ಎಸಗಿದ್ದರಿಂದ ಅವರನ್ನು ಅಮಾನತುಗೊಳಿಸಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಚವ್ಹಾಣ ಆದೇಶ ಹೊರಡಿಸಿದ್ದಾರೆ.
ನಮ್ಮ ಬಳಿ 2008ರಲ್ಲಿ ನೆರೆಹಾವಳಿಗೆ ಮನೆಯನ್ನು ಕಳೆದುಕೊಂಡವರ ಪಟ್ಟಿಯಿದೆ. ಆ ಪ್ರಕಾರ ಅವರಿಗೆ ಈಗಾಗಲೇ ನಿರ್ಮಿಸಿರುವ ಮನೆಗಳನ್ನು ಹಂಚಿಕೆ ಮಾಡಿ, ಆ ಮನೆಗಳಿಗೆ ಮೂಲ ಸೌಕರ್ಯ ನೀಡುತ್ತೇವೆ. ನಂತರ ಪಟ್ಟಿಯಲ್ಲಿ ಯಾರಿಗೆ ವಸತಿ ಸಿಗುವುದಿಲ್ಲ ಅಂತವರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಟ್ಟು, ನಂತರ ಅವರಿಗೂ ಮನೆ ಕಟ್ಟಿಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಲಿದೆ.•ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ
•ಯಚ್ಚರಗೌಡ ಗೋವಿಂದಗೌಡ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.