ಇನಾಮು ರದ್ಧತಿಗೆ ಸರ್ಕಾರದಿಂದ ಮಹತ್ವದ ಹೆಜ್ಜೆ
ನರಗುಂದ ಅರಿಷಿಣಗೋಡಿ ರಸ್ತೆ ಪಕ್ಷದಲ್ಲಿ ಕೊರತೆ ತಡೆಗಟ್ಟಲು ಕಾಮಗಾರಿಗೆ ಚಾಲನೆ ನೀಡಲಾಗಿದೆ.
Team Udayavani, Jan 22, 2022, 6:06 PM IST
ನರಗುಂದ: ರೈತರ ಪಹಣಿ ಮಾಲೀಕತ್ವದ ಕಾಲಂನಲ್ಲಿ ಇನಾಮು ಎಂದು ನಮೂದಾಗಿದ್ದರಿಂದ ಆ ಜಮೀನಿನ ಮೇಲೆ ರೈತರಿಗೆ ಯಾವುದೇ ಹಕ್ಕುಗಳು ಇರಲಿಲ್ಲ. ಹೀಗಾಗಿ, ಅಂತಹ ಇನಾಮು ರದ್ದತಿಗೆ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಅರಿಷಿಣಗೋಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ, ಗ್ರಾಮದ ಬಯಲು ರಂಗ ಮಂದಿರದಲ್ಲಿ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ರೈತರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ರಾಜ್ಯದ ಹಲವಾರು ಮತಕ್ಷೇತ್ರಗಳಲ್ಲಿ ಬೇಡಿಕೆ ಇತ್ತು. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರ ಗಮನಕ್ಕೆ ತಂದಾಗ ಎಲ್ಲ 224 ಮತಕ್ಷೇತ್ರಗಳಲ್ಲಿ ರೈತರ ಪಹಣಿಯಲ್ಲಿ ಇನಾಮು ರದ್ದತಿಗೆ ಆದೇಶ ಮಾಡಿದ್ದು ಮಹತ್ವದ ನಿರ್ಧಾರವಾಗಿದೆ ಎಂದು ಹೇಳಿದರು.
ಮುಂದಿನ 1 ವರ್ಷದ ಅವಧಿಯೊಳಗೆ ಸಂಬಂಧಿಸಿದ ರೈತರು ಅರ್ಜಿ ಸಲ್ಲಿಸುವ ಮೂಲಕ ಇನಾಮು ಜಾಗದಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಒಂದು ವರ್ಷ ಮೀರಿದರೆ ಇದರ ಪ್ರಯೋಜನ ಸಿಗಲಾರದು ಎಂದು ಸಚಿವ ಸಿ.ಸಿ.ಪಾಟೀಲ ರೈತರಿಗೆ ಕರೆ ನೀಡಿದರು. ರಸ್ತೆಗಳ ಬದಿಗೆ ಮಳೆಗಾಲ ಸಂದರ್ಭದಲ್ಲಿ ಕೊರೆತ ಉಂಟಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ.ನರಗುಂದ ಅರಿಷಿಣಗೋಡಿ ರಸ್ತೆ ಪಕ್ಷದಲ್ಲಿ ಕೊರತೆ ತಡೆಗಟ್ಟಲು ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಈ ರಸ್ತೆಯಲ್ಲಿ ಇದಕ್ಕಾಗಿ ಇನ್ನೂ 73 ಲಕ್ಷ ರೂ. ಅನುದಾನಕ್ಕೆ ಅ ಧಿಕಾರಿಗಳು ಬೇಡಿಕೆ ಇಟ್ಟಿದ್ದು, ಮುಂಬರುವ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೇಡಿಕೆ ಈಡೇರಿಕೆ ಭರವಸೆ: ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದ ಎಸ್‌ಸಿ ರಸ್ತೆ ಬದಿ ಸಿಸಿ ಚರಂಡಿ ನಿರ್ಮಾಣ, ಚಿಕ್ಕನರಗುಂದ ರಸ್ತೆ ಸಿಸಿ ನಿರ್ಮಾಣ, ಆಂಜನೇಯ ದೇವಸ್ಥಾನ ಪುನರುಜ್ಜೀವನ, ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಸಲ್ಲಿಕೆಯಾದ ಪ್ರಸ್ತಾವನೆಗೆ ಮಂಜೂರಾತಿ, ವಕ್ಫ್ ಮಂಡಳಿಯಿಂದ ಮಸೀದಿಗೆ ಅನುದಾನ ಮುಂತಾದ ಬೇಡಿಕೆಗಳಿಗೆ ಸಚಿವ ಸಿ.ಸಿ.ಪಾಟೀಲ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಹಂಗಾಮಿ ಅಧ್ಯಕ್ಷ ಶಿವರಡ್ಡಿ ಪೆಟೂರ ಮಾತನಾಡಿ, ಹಿರೇಕೊಪ್ಪ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವರು ಸಾಕಷ್ಟು ಸಹಕಾರ ನೀಡಿದ್ದಾರೆ. ಇನ್ನೂ ಹಲವಾರು ಬೇಡಿಕೆಗಳಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿ ದರು. ಶಿವಲಿಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಗುರಪ್ಪ ಆದೆಪ್ಪನವರ, ಬಿ.ಎಸ್.ಪಾಟೀಲ, ಶಂಕರಗೌಡ ಪಾಟೀಲ, ಎನ್.ವಿ.ಮೇಟಿ, ಮಲ್ಲಪ್ಪ ಮೇಟಿ, ಚಿದಾನಂದ ಶೆಟ್ಟರ, ಗಿರಡ್ಡಿ ನೀಲರಡ್ಡಿ, ಹನಮಂತಪ್ಪ ಮೇಟಿ, ಚಿಕ್ಕಯ್ಯ ಹಿರೇಮಠ, ಗುರುಪಾದಯ್ಯ ಹಿರೇಮಠ ಮುಂತಾದವರು ವೇದಿಕೆಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.