ಖಾಕಿ ಸರ್ಪಗಾವಲಿನ ಮಧ್ಯೆಯೇ ಪ್ರಾಣಿ ಬಲಿ!
•ದಂಡಿನ ದುರ್ಗಾ ದೇವಿ ಜಾತ್ರಾ ಮಹೋತ್ಸವದಲ್ಲಿ ನಿರಾತಂಕವಾಗಿ ಸಾಗಿದ ಅನಿಷ್ಠ ಪದ್ಧತಿ
Team Udayavani, May 29, 2019, 10:32 AM IST
ಗದಗ: ಬೆಟಗೇರಿಯ ರೋಣ ರಸ್ತೆಯಲ್ಲಿ ಮಂಗಳವಾರ ನಡೆದ ದಂಡಿನ ದುರ್ಗಾ ದೇವಿ ಜಾತ್ರಾ ಮಹೋತ್ಸವದಲ್ಲಿ ಖಾಕಿ ಸರ್ಪಗಾವಲಿನ ಮಧ್ಯೆಯೇ ಪ್ರಾಣಿ ಬಲಿ ಸೇರಿದಂತೆ ಇನ್ನಿತರೆ ಅನಿಷ್ಠ ಆಚರಣೆಗಳು ನಿರಾತಂಕವಾಗಿ ಸಾಗಿದವು!
ಮೈಗೆ ಬೇವಿನ ಸೊಪ್ಪು ಸುತ್ತಿಕೊಂಡು ದೀಡ್ ನಮಸ್ಕಾರ ಹಾಕುವುದು, ಪ್ರಾಣಿ ಬಲಿ ನೀಡುವ ಅನಿಷ್ಠ ಹಾಗೂ ಅನಾಗರಿಕತೆಯ ಸಂಪ್ರದಾಯಗಳು ಇಂದಿಗೂ ಜೀವಂತವಾಗಿದೆ ಎನ್ನುವುದಕ್ಕೆ ಬೆಟಗೇರಿಯ ದಂಡಿನ ದುರ್ಗಾ ದೇವಿ ಜಾತ್ರೆ ಸಾಕ್ಷಿಯಾಯಿತು. ಅನಿಷ್ಠ ಪದ್ಧತಿಗಳಿಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ಅಧಿಕಾರಿಗಳು ಜಾತ್ರೆಯಲ್ಲಿ ಕಂಡೂ ಕಾಣದಂತೆ ಮೌನಕ್ಕೆ ಶರಣಾದರು.
ಪ್ರತೀ ವರ್ಷದಂತೆ ಬದಾಮಿ ಅಮಾವಾಸ್ಯೆಯಾದ ಮೊದಲ ಮಂಗಳವಾರದಂದು ಬೆಟಗೇರಿ ಸಮೀಪದ ದಂಡಿನ ದುರ್ಗಾದೇವಿ ಜಾತ್ರೆ ಸಂಭ್ರಮ-ಸಡಗರದಿಂದ ನಡೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಬೆಳಗಿನಜಾವ ತಾಯಿ ದುರ್ಗಾದೇವಿಗೆ ಜಲಾಭಿಷೇಕ, ಕ್ಷೀರಾಭಿಷೇಕ ನೆರವೇರಿಸಲಾಯಿತು. ಬಳಿಕ ಹೂವಿನ ಅಲಂಕಾರ ಮಾಡಿ ದುರ್ಗಾ ಮಾತೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
ರಾಜ್ಯದ ವಿಜಯಪುರ, ಬಾಗಲಕೋಟೆ ಹಾಗೂ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಿಗೆ ಕುರಿ, ಕೋಳಿ ಬಲಿ ನೀಡಿ ಭಕ್ತಿ ಸಮರ್ಪಿಸಿದರು. ತಾವು ಇಳಿದಿದ್ದ ಸ್ಥಳದಿಂದ ದೇವಸ್ಥಾನದವರೆಗೆ ನೀರು ತುಂಬಿದ್ದ ಪ್ಲಾಸ್ಟಿಕ್ ಕೊಡಗಳನ್ನು ಹೊತ್ತುಕೊಂಡು ಪೂರ್ಣಕುಂಭ ಸೇವೆ ಸಲ್ಲಿಸಿದರು. ಈ ಮಧ್ಯೆ ಹಿರಿ-ಕಿರಿಯರೆಂಬ ಭೇದಭಾವವಿಲ್ಲದೇ ನೂರಾರು ಜನರು ಬೆಳಗ್ಗೆಯಿಂದ ಮಧ್ಯಾಹ್ನ 12ರ ವರೆಗೆ ಉರಿ ಬಿಸಿಲನ್ನೂ ಲೆಕ್ಕಿಸಿದೇ, ಉರುಳು ಸೇವೆ, ದೀಡ್ ನಮಸ್ಕಾರ ಹಾಕಿ ತಾಯಿಗೆ ಹರಕೆ ತೀರಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ದೇವರ ಹೆಸರಲ್ಲಿ ಪ್ರಾಣಿ ಬಲಿ:
ದಂಡಿನ ದುರ್ಗಮ್ಮ ದೇವಿ ಜಾತ್ರೆಯಲ್ಲಿ ಪ್ರಾಣಿ ಹಿಂಸೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಅದರಂತೆ ಮಂಗಳವಾರವೂ ಜಾತ್ರೆ ಅಂಗವಾಗಿ ಭಕ್ತರು ದೇವಿಯ ಹೆಸರಲ್ಲಿ ನೂರಾರು ಆಡು, ಕುರಿ ಹಾಗೂ ಕೋಳಿಗಳನ್ನು ಬಲಿ ನೀಡಿದರು. ದೇವಸ್ಥಾನದ ಮುಂಭಾಗದಲ್ಲಿ ಕೋಳಿ, ಕುರಿಗಳನ್ನು ಬಲಿ ನೀಡಿದ್ದರಿಂದ ನೆತ್ತರು ಚೆಲ್ಲಿತ್ತು. ಇನ್ನೂ ಕೆಲವರು ತಾವು ಇಳಿದುಕೊಂಡಿದ್ದ ಜಾಗೆಯಲ್ಲೇ ದೇವರ ಹೆಸರಲ್ಲಿ ಬಲಿ ನೀಡಿದ್ದರು. ಅವುಗಳ ಮಾಂಸವನ್ನು ಬಟ್ಟೆಯಲ್ಲಿ ಸುತ್ತಿ ತಮ್ಮ ಟೆಂಟ್‌ಗಳಲ್ಲಿ ತೂಗು ಹಾಕಿದ್ದರು. ದೇವಸ್ಥಾನ ಮುಂಭಾಗದ ಖಾಲಿ ಜಮೀನುಗಳಲ್ಲಿ ಇಳಿದಿದ್ದ ಜನರು ಅಲ್ಲಲ್ಲಿ ಗುಂಡಿಗಳನ್ನು ತೋಡಿ, ಅದರಲ್ಲಿ ಕುರಿ, ಕೋಳಿಗಳ ಮಾಂಸದ ತ್ಯಾಜ್ಯವನ್ನು ಸುರಿದಿರುವುದು ಕಣ್ಣಿಗೆ ರಾಚುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.