ಹೊಳೆಆಲೂರಲ್ಲೂ ಆತಂಕದ ಛಾಯೆ
Team Udayavani, May 7, 2020, 4:42 PM IST
ಹೊಳೆಆಲೂರ: ನೆರೆಯ ಬಾದಾಮಿ ತಾಲೂಕಿನ ಚಿಕ್ಕ ಗ್ರಾಮ ಡಾಣಕಶಿರೂರನಲ್ಲಿ 13 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಹೊಳೆಆಲೂರ ಹೋಬಳಿಯ ಹಲವು ಗ್ರಾಮಗಳು ಡಾಣಕಶಿರೂರ ಗ್ರಾಮದಿಂದ ಕೇವಲ 3-4 ಕಿ.ಮೀ. ಅಂತರದಲ್ಲಿದ್ದು, ಗ್ರಾಮದಲ್ಲೂ ಆತಂಕ ಮನೆ ಮಾಡಿದೆ.
ಡಾಣಕಶಿರೂರ ರೈತ ಮಹಿಳೆಯರು ಹಾಲು, ಮೊಸರು, ತರಕಾರಿ ಮಾರಲು ಹಾಗೂ ಅಗತ್ಯ ವಸ್ತು, ಮದ್ಯ ಖರೀದಿಸಲು ಹೊಳೆಆಲೂರಿಗೆ ನಿತ್ಯ ಬರುತ್ತಾರೆ. ಹೀಗಾಗಿ ಗ್ರಾಮದಲ್ಲೂ ಆತಂಕ ಮನೆಮಾಡಿದೆ. ಡಾಣಕಶಿರೂರ ಗ್ರಾಮದಲ್ಲಿ ಬುಧವಾರ ಒಂದೇ ದಿನ 12 ಜನರಿಗೆ ಕೋವಿಡ್ 19 ದೃಢಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆ ರೋಣ ತಹಶೀಲ್ದಾರ್ ಜೆ.ಬಿ. ಜಕ್ಕನಗೌಡ್ರ, ಸಿಪಿಐ ಸುನೀಲ ಸವದಿ ಬುಧವಾರ ಮಧ್ಯಾಹ್ನ ಹೊಳೆಆಲೂರ, ಬಿ.ಎಸ್. ಬೇಲೇರಿ, ಅಮರಗೋಳ, ಬಸರಕೋಡ ಗ್ರಾಮಗಳಿಗೆ ಭೇಟಿ ನೀಡಿ, ಅಮರಗೋಳ ಹಾಗೂ ಹೊಳೆಆಲೂರ ಗ್ರಾಪಂ ಪಿಡಿಒ ಹಾಗೂ ಆರೋಗ್ಯ ಅ ಧಿಕಾರಿಗಳ ಸಭೆ ನಡೆಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಹೊಳೆಆಲೂರ-ಬದಾಮಿ ಸಂಪರ್ಕಿಸುವ ಮಲಪ್ರಭಾ ನದಿ ಹತ್ತಿರ ಚೆಕ್‌ಪೋಸ್ಟ್ ಬಿಗಿಗೊಳಿಸಲು ಹಾಗೂ ಮಾಡಲಗೇರಿ ಹತ್ತಿರ ನೂತನ ಚೆಕ್‌ಪೋಸ್ಟ್ ಆರಂಭಿಸಲು ಹಾಗೂ ಬಿ.ಎಸ್. ಬೇಲೇರಿ ಗ್ರಾಮದಲ್ಲಿ ಮನೆ ಮನೆಯಲ್ಲೂ ಆರೋಗ್ಯ ತಪಾಸಣೆ ಮಾಡಲು ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.