ಎಪಿಎಂಸಿ ವಹಿವಾಟು ಆರಂಭ
Team Udayavani, Apr 18, 2020, 4:32 PM IST
ಸಾಂದರ್ಭಿಕ ಚಿತ್ರ
ಗಜೇಂದ್ರಗಡ: ಕೋವಿಡ್ 19 ತಡೆಗಟ್ಟಲು ಕೇಂದ್ರ ಸರ್ಕಾರ ಮತ್ತೂಮ್ಮೆ ಲಾಕ್‌ಡೌನ್ ಮುಂದುವರಿಸಿದೆ. ಇದರ ಮಧ್ಯೆಯೇ ಪಟ್ಟಣದ ಎಪಿಎಂಸಿಯಲ್ಲಿ ಶುಕ್ರವಾರದಿಂದ ವಹಿವಾಟು ಕಾರ್ಯ ಆರಂಭಗೊಂಡಿದೆ.
ರಾಜ್ಯ ಸರ್ಕಾರ ಕೃಷಿ ಚಟುವಟಿಕೆಗಳಿಗೆ ವಿನಾಯತಿ ಮತ್ತು ಎಪಿಎಂಸಿ ವಹಿವಾಟಿಗೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ವಾರದಲ್ಲಿ ಸೋಮವಾರ, ಗುರುವಾರ ಮತ್ತು ಶನಿವಾರ ಸೇರಿ ಮೂರು ದಿನಗಳ ಕಾಲ ತೆರೆಯಲಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೆ ರೈತರಿಂದ ಬೆಳೆ ಪಡೆದುಕೊಳ್ಳಬಹುದು. ಬೆಳಗ್ಗೆ 11ರಿಂದ 12 ಗಂಟೆವರೆಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಎಪಿಎಂಸಿ ವಹಿವಾಟು ಶುಕ್ರವಾರದಿಂದ ಆರಂಭವಾಗಿರುವ ಹಿನ್ನೆಲೆಯಲ್ಲಿ ಶೇಂಗಾ ಆವಕ ಹೆಚ್ಚಾಗಿ ಬಂದಿದ್ದು, ವರ್ತಕರು ಖರೀದಿಸುವಲ್ಲಿ ತಲ್ಲೀನರಾಗಿದ್ದಾರೆ. ಆದರೆ ಎಪಿಎಂಸಿ ಆವರಣದಲ್ಲಿ ಬಹುತೇಕ ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಆತಂಕ ಸೃಷ್ಟಿಸಿದೆ.
ಪಕ್ಕದ ಜಿಲ್ಲೆ ಬಾಗಲಕೋಟೆಯಲ್ಲಿ ಕೋವಿಡ್ 19 ತೀವ್ರ ಸ್ವರೂಪ ಪಡೆದಿದೆ. ಆ ಜಿಲ್ಲೆಯ ಹಲವಾರು ಗ್ರಾಮಗಳ ರೈತರು ಪಟ್ಟಣದ ಎಪಿಎಂಸಿಗೆ ಬೆಳೆ ಮಾರಾಟಕ್ಕೆ ತರುತ್ತಾರೆ. ಹೀಗಾಗಿ ಇಲ್ಲಿನ ವರ್ತಕರು ಮತ್ತು ಶ್ರಮಿಕರು ಅಗತ್ಯ ಮಾಸ್ಕ್ ಧರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ
Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್ ಆದೇಶ
UK ಚೆವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.