ಸಾರ್ವಜನಿಕ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಮಾಡಿ

Team Udayavani, Jun 19, 2019, 10:22 AM IST

gadaga-tdy-2..

Arrange water for public toilet

ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್‌ ನಂ-13ರ ಗೌರಿ ಓಣಿಯಲ್ಲಿರುವ ಸಾರ್ವಜನಿಕ ಶೌಚಾಲಯ ನೀರಿನ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದಿದ್ದರಿಂದ ಬೀಗ ಹಾಕಿರುವುದನ್ನು ಪ್ರಶ್ನಿಸಿ ಮಂಗಳವಾರ ವಾರ್ಡ್‌ನ ಮಹಿಳೆಯರು ಪುರಸಭೆಗೆ ದೌಡಾಯಿಸಿ, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಮುಕ್ತವಾಗಿಸಬೇಕು ಎಂದು ಒತ್ತಾಯಿಸಿದರು.

ವಾರ್ಡ್‌ನಲ್ಲಿರುವ ಜನರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಸಾರ್ವಜನಿಕ ಶೌಚಾಲಯವು ನೀರು ಮತ್ತು ನಿರ್ವಹಣೆ ವ್ಯವಸ್ಥೆ ಇಲ್ಲದಿದ್ದರಿಂದ ಕಳೆದ 8-10 ದಿನಗಳಿಂದ ಬಾಗಿಲು ಹಾಕಿದೆ. ಇದರಿಂದ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿರುವ ಬಹುತೇಕ ನಿವಾಸಿಗಳು ಮುಖ್ಯವಾಗಿ ಮಹಿಳೆಯರು, ವೃದ್ಧರಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ. ಓಣಿ ಕಿಷ್ಕಿಂಧೆಯಂತಿದ್ದು, ಇಲ್ಲಿನ ನಿವಾಸಿಗರಿಗೆ ವೈಯಕ್ತಿಕ ಶೌಚಾಲಯ ಹೊಂದಲು ಸ್ಥಳಾವಕಾಶದ ಕೊರತೆಯಿದೆ.

ನಿರ್ವಹಣೆ-ನೀರಿನ ವ್ಯವಸ್ಥೆ ಇಲ್ಲದ್ದರಿಂದ ಶೌಚಾಲಯ ಗಬ್ಬು ನಾರುತ್ತಿದ್ದು, ಇಡೀ ವಾತಾವರಣ ಹದಗೆಟ್ಟಿದೆ. ಆದ್ದರಿಂದ ಕೂಡಲೇ ಶೌಚಾಲಯ ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪುರಸಭೆ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಅವರಿಗೆ ಮನವಿ ಮಾಡಿದರು. ಈ ಸಮಯದಲ್ಲಿ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಆಗಿರುವ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಸಲಹೆ ಸೂಚನೆ ನೀಡಿದರು.

ಮಹಿಳೆಯರ ಸಮಸ್ಯೆ ಆಲಿಸಿದ ಕಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್ ಮಾತನಾಡಿ, ಸಾರ್ವಜನಿಕರ ಶೌಚಾಲಯಕ್ಕೆ ನೀರಿನ ಸಂಪರ್ಕ ಒದಗಿಸಿದ್ದ ಬೋರ್‌ವೆಲ್ನ ಮೋಟರ್‌ ಹಾಳಾಗಿದೆ. ಕೂಡಲೇ ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡುತ್ತೇವೆ ಎಂದ ಅವರು, ಪುರಸಭೆಯಿಂದ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ಅನುದಾನ ಕಲ್ಪಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಲು ಆದ್ಯತೆ ನೀಡಿ ಎಂದು ಮನವಿ ಮಾಡಿದರು.

ಗಂಗಮ್ಮ ಬಾಳಿಕಾಯಿ, ಸುಜಾತಾ ಸವಣೂರ, ಅಕ್ಕಮ್ಮ ಯತ್ನಳ್ಳಿ, ಅನ್ನಪೂರ್ಣ ತೆಗ್ಗಳ್ಳಿ, ಸುನಂದಾ ಜಬಡಿ, ಲತಾ ಸವಣೂರ, ಲಲಿತಾ ಕನವಳ್ಳಿ ಸೇರಿದಂತೆ ಅನೇಕರು ಇದ್ದರು.

ಟಾಪ್ ನ್ಯೂಸ್

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Kadaba: ಪ್ಲಾಟಿಂಗ್‌ ಸಮಸ್ಯೆ ಶೀಘ್ರ ಪರಿಹಾರ ಸಾಧ್ಯತೆ

Kadaba: ಪ್ಲಾಟಿಂಗ್‌ ಸಮಸ್ಯೆ ಶೀಘ್ರ ಪರಿಹಾರ ಸಾಧ್ಯತೆ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

1-ao

Australian Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌, ಫ್ರಿಟ್ಜ್  ಮೂರನೇ ಸುತ್ತಿಗೆ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; Shirahatti Constituency MLA Chandru Lamani car driver ends his life

Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ

1-lokk

Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Mangaluru ಸಹಿತ 5 ಕಡೆ ಆರೋಗ್ಯ ವಿವಿ ಪ್ರಾದೇಶಿಕ ಕೇಂದ್ರ

Holehonnur

ಹೊಳೆಹೊನ್ನೂರು ಸುತ್ತಮುತ್ತಲು ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ

Kadaba: ಪ್ಲಾಟಿಂಗ್‌ ಸಮಸ್ಯೆ ಶೀಘ್ರ ಪರಿಹಾರ ಸಾಧ್ಯತೆ

Kadaba: ಪ್ಲಾಟಿಂಗ್‌ ಸಮಸ್ಯೆ ಶೀಘ್ರ ಪರಿಹಾರ ಸಾಧ್ಯತೆ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Mangaluru ತಣ್ಣೀರುಬಾವಿ ಬೀಚ್‌: ಜ.18, 19: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.