ಆಟೋ ಚಾಲಕರ ಮುಷ್ಕರ
•ಆರಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುವಂತಿಲ್ಲ ಆದೇಶಕ್ಕೆ ವಿರೋಧ
Team Udayavani, Jun 25, 2019, 8:11 AM IST
ಗದಗ: ಶಾಲಾ ಆಟೋ ಚಾಲಕರ ಮುಷ್ಕರದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದೊಯ್ಯಲು ಶಾಲೆಯೊಂದರ ಬಳಿ ಪೋಷಕರು ಕಾದು ನಿಂತಿರುವುದು.
ಗದಗ: ಆಟೋಗಳಲ್ಲಿ ಆರಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಕರೆದೊಯ್ಯುವಂತ್ತಿಲ್ಲ ಎಂಬ ಜಿಲ್ಲಾ ಪೊಲೀಸ್ ಇಲಾಖೆ ಆದೇಶವನ್ನು ಖಂಡಿಸಿ ಗದಗ-ಬೆಟಗೇರಿ ಅವಳಿ ನಗರದ ವಿವಿಧ ಆಟೋ ಚಾಲಕರ ಸಂಘಟನೆಗಳು ಕರೆ ನೀಡಿದ್ದ ಮುಷ್ಕರದಿಂದಾಗಿ ಸೋಮವಾರ ವಿದ್ಯಾರ್ಥಿಗಳ ಪೋಷಕರು ಪರದಾಡಿದರು.
ಅವಳಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುವು ಒತ್ತು ನೀಡುವುದರೊಂದಿಗೆ ವಾಹನ ಸಂಚಾರಿ ನಿಮಯಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಆಟೋಗಳಲ್ಲಿ ಕುರಿ ಹಿಂಡಿನಂತೆ 10-20 ಮಕ್ಕಳನ್ನು ತುಂಬು ಆಟೋ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿತ್ತು. ಆದರೂ, ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜೀವಗಾಂಧಿ ನಗರ ಪೊಲೀಸ್ ಠಾಣೆ, ಶಹರ ಪೊಲೀಸ್ ಠಾಣೆ ಹಾಗೂ ಸಂಚಾರಿ ಠಾಣೆ ಪೊಲೀಸರು ಕೆಲ ಆಟೋಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ, 6ಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಸಾಗಿಸುವ ಆಟೋಗಳನ್ನು ವಶಕ್ಕೆ ಪಡೆಯುವುದಾಗಿ ಪೊಲೀಸರ ಕಟ್ಟುನಿಟ್ಟಿನ ಎಚ್ಚರಿಕೆ ಹಿನ್ನೆಲೆಯಲ್ಲಿ ಸೋಮವಾರ ಶಾಲಾ ಮಕ್ಕಳನ್ನು ಕರೆದೊಯ್ಯದೇ ಆಟೋ ಚಾಲಕರು ಮುಷ್ಕರ ನಡೆಸಿದರು. ಪರಿಣಾಮ ಮಕ್ಕಳ ಪೋಷಕರೇ ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟು ಬರುವಂತಾಯಿತು.
ಪೋಷಕರ ಪರದಾಟ: ವಿವಿಧ ಆಟೋ ಚಾಲಕರು ಮತ್ತು ಮಾಲೀಕರ ಸಂಘಟನೆಗಳ ಕರೆ ಮೇರೆಗೆ ಸೋಮವಾರ ಶಾಲಾ ಮಕ್ಕಳನ್ನು ಕೊರೆದೊಯ್ಯುವ ಆಟೋಗಳು ಸೇವೆ ಒದಗಿಸಲಿಲ್ಲ. ಈ ಕುರಿತು ಪೂರ್ವ ಪರ ಮಾಹಿತಿಯಿದ್ದ ಪೋಷಕರು, ಮುಂಜಾಗ್ರತೆಯಿಂದ ತಾವೇ ಖುದ್ದಾಗಿ ಶಾಲೆಗಳಿಗೆ ತಲುಪಿಸಿದರು. ಇನ್ನೂ, ಕೆಲವರು ನೆರೆ-ಹೊರೆಯರ ದ್ವಿಚಕ್ರ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಿದರು. ಆಟೋ ಚಾಲಕರು ಮುಷ್ಕರ ನಡೆಸಿದ್ದರಿಂದ ಕೆಲವರು ಒಂದೇ ಬೈಕ್‌ನಲ್ಲಿ ಗರಿಷ್ಠ 6 ಮಕ್ಕಳು, ಅವರ ಊಟದ ಡಬ್ಬಿಗಳೊಂದಿಗೆ ಬೈಕ್ ಚಲಾಯಿಸಲಾಗದೇ ಹೈರಾಣಾದರು.
ಇನ್ನುಳಿದಂತೆ ಒಂದೇ ಬೈಕ್‌ನಲ್ಲಿ ಇಬ್ಬರು, ಮೂವರು ಮಕ್ಕಳನ್ನು ಕರೆದೊಯ್ಯುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿತ್ತು. ಸ್ವಂತ ವಾಹನದ ಸೌಲಭ್ಯ ಇಲ್ಲದ ಹಾಗೂ ಅನತಿ ದೂರದಲ್ಲಿ ಮನೆ ಇರುವ ಮಕ್ಕಳು ಅಜ್ಜಿ, ಚಿಕ್ಕಮ್ಮ, ಅತ್ತೆ, ಅದೇ ಮಾರ್ಗದಲ್ಲಿ ಸಾಗುವ ಶಿಕ್ಷಕಿಯರೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಿದರು.
ಅನಿರೀಕ್ಷಿತವಾಗಿ ಆಟೋ ಚಾಲಕರು ಮುಷ್ಕರ ನಡೆಸಿದ್ದರಿಂದ ಕೆಲ ಪೋಷಕರು ಪೇಚಿಗೆ ಸಿಲುಕಿದರು. ಮಕ್ಕಳನ್ನು ದೂರದ ಶಾಲೆಗಳಿಗೆ ತಲುಪಿಸಿ, ಎದ್ದೂ ಬಿದ್ದು ತಮ್ಮ ಕೆಲಸ ಕಾರ್ಯಗಳತ್ತ ಓಡಿದರು. ಸಂಜೆ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆ ತರುವಾಗಗಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಶಾಲೆ ಬಿಡುವುದಕ್ಕೂ ಮುನ್ನವೇ ಅನೇಕರು ತಮ್ಮ ಬೈಕ್, ಕಾರುಗಳಲ್ಲಿ ಬಂದು ತಮ್ಮ ಮಕ್ಕಳಿಗಾಗಿ ಕಾದು ನಿಲ್ಲುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.