ಅಧಿಕಾರಿಗಳ ಕಿರುಕುಳ: ದಯಾಮರಣಕ್ಕೆ ಅರ್ಜಿ

Team Udayavani, Apr 5, 2021, 5:45 PM IST

ಅಧಿಕಾರಿಗಳ ಕಿರುಕುಳ: ದಯಾಮರಣಕ್ಕೆ  ಅರ್ಜಿ

ಗದಗ: ಜಿಲ್ಲಾ ಆಯುಷ್‌ ಅಧಿಕಾರಿ ಡಾ|ಸುಜಾತಾ ಪಾಟೀಲ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಅಧಿಕಾರಿ ಡಾ|ಸತೀಶ್‌ ಬಸರಿಗಿಡದ ಅವರ ಕಿರುಕುಳದಿಂದ ಮನನೊಂದಿರುವ ಇಬ್ಬರು ಮಹಿಳಾ ಸಿಬ್ಬಂದಿ ದಯಾಮರಣಕ್ಕೆ ಅರ್ಜಿಸಲ್ಲಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಟಗೇರಿ ಆಯುಷ್‌ ಆಸ್ಪತ್ರೆಯಲ್ಲಿ ಸಿಎಸ್‌ಎಸ್‌(ಕೇಂದ್ರ ಪ್ರಾಯೋಜಿತ ಯೋಜನೆ) ಅಡಿ ಕೆಲಸ ಮಾಡುತ್ತಿದ್ದ ಕ್ಷಾರ ಸೂತ್ರ ಸಹಾಯಕಿಯಾಗಿದ್ದ ಪಾರ್ವತಿ ಹುಬ್ಬಳ್ಳಿ ಮತ್ತು ಸ್ತ್ರೀ ರೋಗ ಆರೋಗ್ಯಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಂದಾ ಖಟವಟೆ ಅವರು ಜಿ.ಪಂ. ಸಿಇಒ ಮೂಲಕದಯಾಮರಣಕ್ಕೆ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದಾರೆ.

ಸಿಬ್ಬಂದಿ ಆರೋಪವೇನು?: ಬೆಟಗರಿಯ ಆಯುಷ್‌ಆಸ್ಪತ್ರೆಯಲ್ಲಿ ಕ್ಷಾರ ಸೂತ್ರ ಸಹಾಯಕಿಯಾಗಿ ಕಳೆದ 2018ರಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ರೀತಿಯ ರೋಗಿಗಳಿಗೆ ಮಸಾಜ್‌ ಮಾಡುವುದು,ಆಹಾರ ತಯಾರಿಸಿಕೊಡುವು ದು, ಅಗತ್ಯಬಿದ್ದಾಗ ಕಸಗುಡಿಸುವುದೂ ಸೇರಿದಂತೆ ವಹಿಸಿದ ಎಲ್ಲ ರೀತಿಯ ಕೆಲಸವನ್ನೂ ನಿರ್ವಹಿಸಿದ್ದೇನೆ. ಆಯುಷ್‌ ಅಧಿಕಾರಿಗಳ ಆದೇಶದಂತೆ ಜಿಮ್ಸ್‌ ಆಸ್ಪತ್ರೆಯಲ್ಲಿ 1-5-2020 ರಿಂದ 12-1-2021ರ ವರೆಗೆ(8 ತಿಂಗಳು) ಕೋವಿಡ್‌ ಕರ್ತವ್ಯ ನಿರ್ವಹಿಸಿದ್ದೇನೆ. ಅಂದು ಸಂಜೆಯೇ ಆಯುಷ್‌ ಆಸ್ಪತ್ರೆಗೆಆಗಮಿಸುತ್ತಿದ್ದಂತೆ ತಮ್ಮ ಕಚೇರಿಗೆ ಕರೆಯಿಸಿಕೊಂಡುಸುಮಾರು 1 ಗಂಟೆ ಕಾಲ ಅವಾಚ್ಯವಾಗಿ ನಿಂದಿಸಿದ್ದಾರೆ. ಇದಾದ 24 ಗಂಟೆಯಲ್ಲಿ ಇಟಗಿಆಯುಷ್‌ ಚಿಕಿತ್ಸಾಲಯಕ್ಕೆ ನಿಯೋಜಿಸಿದ್ದಾರೆ. ಸಿಎಸ್‌ಎಸ್‌ ಅಡಿ ಸಿಬ್ಬಂದಿಯನ್ನು ಯಾವುದೇ ರೀತಿಯಲ್ಲಿನಿಯೋಜನೆ, ವರ್ಗಾವಣೆ ಹಾಗೂ ಬೇರೆ ಆಸ್ಪತ್ರೆಗಳಿಗೆನಿಯೋಜಿಸಲು ಅವಕಾಶವಿಲ್ಲ ಎಂಬುದು ಆದೇಶದಲ್ಲಿಉಲ್ಲೇಖೀವಿದೆ. ಆದರೂ, ನಿಯೋಜನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಇಲಾಖೆಯಿಂದ ಟಿಎ, ಡಿಎ ಇಲ್ಲದೇ, ನಿಯೋಜನೆ ಮಾಡಿದ್ದರಿಂದ ಪ್ರತಿ ನಿತ್ಯ ಇಟಗಿಗೆ ಹೋಗಿಬರಲು ಮಾಸಿಕ 6 ಸಾವಿರ ರೂ. ಖರ್ಚಾಗುತ್ತದೆ. ಇಲಾಖೆಯಿಂದ ಬರುವ 11,206 ರೂ. ಸಂಬಳದಲ್ಲಿಉಳಿಯುವುದೇನ ಎಂದು ಪಾರ್ವತಿ ಎಸ್‌.ಹುಬ್ಬಳ್ಳಿಅವರು 18-02-2021ರಂದು ಬರೆದಪತ್ರದಲ್ಲಿ ಬೇಸರ ತೋಡಿಕೊಂಡಿದ್ದಾರೆ.

ಅದರಂತೆ ಪತ್ರ ಬರೆದಿರುವ ನಂದಾ ಖಟವಟೆ, 19-9-2020 ರಂದು ರೋಣ ತಾಲೂಕಿನಯಾವಗಲ್‌ ಆಯುಷ್‌ ಆಸ್ಪತ್ರೆಗೆ ನಿಯೋಜನೆ ಮಾಡಿದ್ದಾರೆ. ಇದರಿಂದ ತುಂಬಾ ನೊಂದುಕೊಂಡಿದ್ದ ನನಗೆ ಆರೋಗ್ಯದಲ್ಲಿ ವ್ಯಾತ್ಯಾಸವಾಗಿತ್ತು. ಸೇವೆಗೆಹಾಜರಾಗಲು ಕೆಲ ದಿನ ತಡವಾಯಿತು. ಮೂರು ದಿನಗಳಲ್ಲಿ ಸೇವೆಗೆ ಹಾಜರಾಗುವಂತೆ 8-12-2020 ರಂದು ಇಲಾಖೆ ನೋಟಿಸ್‌ ನೀಡಿತ್ತು. ನೋಟಿಸ್‌ ತಲುಪಿದ ಮರುದಿನವೇ ಯಾವಗಲ್‌ ಆಸ್ಪತ್ರೆಗೆ ತೆರಳಿದರೆ, ಅಲ್ಲಿನ ವೈದ್ಯರು ಸೇವೆಗೆ ಹಾಜರಾಗಲು ಅವಕಾಶ ನೀಡಿಲ್ಲ. ಜಿಲ್ಲಾ ಆಯುಷ್‌ ಅಧಿಕಾರಿಗಳು ಹಾಜರುಪಡಿಸಿಕೊಳ್ಳದಂತೆ ಸೂಚಿಸಿದ್ದಾಗಿ ತಿಳಿಸಿದರು.

ಈ ಬಗ್ಗೆ ವಿಚಾರಿಸಲು ಪುನಃ ಆಯುಷ್‌ ಅಧಿಕಾರಿಗಳನ್ನು ಭೇಟಿ ಮಾಡಿದರೆ, ಗೇಟ್‌ ಹೊರಗೆ ನಿಲ್ಲುವಂತೆ ಹೇಳಿ ಅವಾಚ್ಯವಾಗಿ ನಿಂದಿಸಿದ್ದಾರೆ.ನಾಯಿ ಎಂದೆಲ್ಲಾ ಜರಿದಿದ್ದಾರೆ. ಅಲ್ಲದೇ, ಸೇವೆಗೂಸೇರಿಸಿಕೊಳ್ಳದೇ ಸತಾಯಿಸಿ ಅತಂತ್ರಗೊಳಿಸಿದ್ದಾರೆಎಂದು 18-01-2021 ರಂದು ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ, ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಸತೀಶ್‌ ಬಸರೀಗಿಡದ ಅವರ ಗಮನಕ್ಕೆ ತಂದರೆ, ನೀವು ದಯಾಮರಣಕ್ಕೆ ಅರ್ಜಿ ಕೋರಿದ್ದೀರಿ. ನೀವೇ ಸಾಯಿರಿ. ಇಲ್ಲವೇ, ನಾನೇ ಚುಚ್ಚಿ ಸಾಯಿಸುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಮ್ಮ ಸಂಬಳವನ್ನೇ ನಂಬಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ತಮ್ಮನ್ನುಕರ್ತವ್ಯಕ್ಕೆ ನಿಯೋಜಿಸಿಕೊಳ್ಳಬೇಕು. ಇಲ್ಲವೇ, ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ಇದು ಅವರಾಗಿಯೇ ಮಾಡಿಕೊಂಡ ಸಮಸ್ಯೆ.ಅವರ ದುರ್ವರ್ತನೆಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದರಿಂದ ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಇಲಾಖೆ ಮಾರ್ಗಸೂಚಿ ಹಾಗೂ ಮೇಲಧಿಕಾರಿಗಳ ಆಜ್ಞೆ ಪಾಲಿಸುವುದು ಸಿಬ್ಬಂದಿ ಕರ್ತವ್ಯ. ಅದನ್ನು ಅವರು ಮಾಡಿದ್ದರೆ ಸಮಸ್ಯೆಯೇ ಬರುತ್ತಿರಲಿಲ್ಲ. – ಡಾ|ಸುಜಾತಾ ಪಾಟೀಲ, ಜಿಲ್ಲಾ ಆಯುಷ್‌ ಅಧಿಕಾರಿ

ಟಾಪ್ ನ್ಯೂಸ್

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

15-crime

Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ

CT Ravi ಭದ್ರತೆ ವ್ಯವಸ್ಥೆ,ನ್ಯಾಯಾಂಗ ತನಿಖೆಗೆ ರಾಜ್ಯಪಾಲರಿಗೆ ಬಿಜೆಪಿ ಮನವಿ: ಆರ್.ಅಶೋಕ್

CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.