ಬೇಡವಾಗಿದ್ದು ಇಲ್ಲಿಡಿ, ಬೇಕಾಗಿದ್ದು ಕೊಂಡೊಯ್ಯಿರಿ : ಹೊಟ್ಟೆ ಹಸಿದವರಿಗೂ ಇಲ್ಲಿದೆ ಆಹಾರ

ಇದು ಬಡವರ ಸೇವಾ ಸಿಂಧು,ಇಲ್ಲದವರ ನೆರವಿಗೆ ವ್ಯವಸ್ಥೆ

Team Udayavani, Mar 15, 2021, 3:32 PM IST

ಬೇಡವಾಗಿದ್ದು ಇಲ್ಲಿಡಿ, ಬೇಕಾಗಿದ್ದು ಕೊಂಡೊಯ್ಯಿರಿ : ಹೊಟ್ಟೆ ಹಸಿದವರಿಗೂ ಇಲ್ಲಿದೆ ಆಹಾರ

ಗದಗ: ಉಳ್ಳವರಿಗೆ ಬೇಡವಾದ ವಸ್ತುಗಳನ್ನು ಇಲ್ಲದವರಿಗೆ ತಲುಪಿಸುವ ನಿಟ್ಟಿನಲ್ಲಿ ಇಲ್ಲೊಂದು”ಬಡವರ ಸೇವಾ ಸಿಂಧು’ ಸದ್ದಿಲ್ಲದೇಕಾರ್ಯನಿರ್ವಹಿಸುತ್ತಿದೆ. ಯಾರು ಬೇಕಾದರೂ ತಮಗೆ ಬೇಡವಾದ ವಸ್ತುಗಳನ್ನು ಇಲ್ಲಿತಂದಿಡಬಹುದು. ಬೇಕಾದವರು ಅವುಗಳನ್ನು ಯಾರಹಂಗಿಲ್ಲದೇ ಉಚಿತವಾಗಿ ಕೊಂಡೊಯ್ಯಬಹುದು.

ಅರೆ, ಇದೇನಪ್ಪಾ ಇಂದಿನ ದುಬಾರಿ ಕಾಲದಲ್ಲಿ ಉಚಿತವಾಗಿ ಎಲ್ಲಿ ಸಿಗುತ್ತದೆ ಎಂದು ಹುಬ್ಬೇರಿಸಬೇಡಿ.ಲಾಯನ್ಸ್‌ ಕ್ಲಬ್‌ ಸದಸ್ಯರ ಪ್ರಯತ್ನದಿಂದ ನಗರದಹಳೇ ಕೋರ್ಟ್‌ ಸಮೀಪದಲಾಯನ್ಸ್‌ ಕ್ಲಬ್‌ಸಭಾಂಗಣದ ಮುಂದೆ ಇಂಥದ್ದೊಂದು ವೇದಿಕೆತಲೆ ಎತ್ತಿದೆ. ಕ್ಲಬ್‌ನ ಮುಂಭಾಗದಲ್ಲಿ ಸುಮಾರು 6ಅಡಿ ಎತ್ತರ ಹಾಗೂ 4 ಅಡಿ ಅಗಲದಷ್ಟು ಗೋಡೆಹಾಗೂ ಅದರಲ್ಲಿ 2×2 ಅಳತೆಯ 8 ಗೂಡುಗಳನ್ನುನಿರ್ಮಿಸಿದ್ದಾರೆ. ಜೊತೆಗೆ ಆಹಾರ ಪದಾರ್ಥಗಳು ಕೆಡದಂತಿರಲಿ ಎಂಬ ಉದ್ದೇಶದಿಂದ 180ಲೀ. ಸಾಮರ್ಥ್ಯದ ಫ್ರಿಜ್ಡ್ ಕೂಡಾ ಅಳವಡಿಸಿದ್ದಾರೆ. ಜೊತೆಗೆ “ಹೊಟ್ಟೆ ಹಸಿವರು ಅನ್ನ ತೆಗೆದುಕೊಳ್ಳಿ.ಅನ್ನದಾನ ಮಾಡುವವರು ಇಲ್ಲಿ ದಾನ ಮಾಡಿ’ ಎಂಬಘೋಷವಾಕ್ಯವುಳ್ಳ ಫಲಕವನ್ನೂ ಅಳವಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.

ಕಳೆದ ಒಂದು ವಾರದಿಂದ ಆರಂಭಗೊಂಡಿರುವ”ಬಡವರ ಸೇವಾ ಸಿಂಧು’ ಅನೇಕರಿಗೆ ಉಪಯುಕ್ತವಾಗುತ್ತಿದೆ. ಅನೇಕರು ತಮಗೆ ಬೇಡವಾದ ಹೊಸ ಮತ್ತು ಹಳೆ ಬಟ್ಟೆ, ಚಳಿ ಮತ್ತು ಮಳೆಗಾಲದ ಉಡುಪುಗಳು, ಹೊದಿಕೆ, ಚಾಪೆ,ಪಾತ್ರೆ, ಹಳೆಯ ಪಠ್ಯ ಪುಸ್ತಕ, ಭಾಗಶಃ ಖಾಲಿಉಳಿದಿರುವ ನೋಟ್‌ ಬುಕ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಸ್ವತ್ಛಗೊಳಿಸಿಯೇ ತಂದು ಇಡುತ್ತಿದ್ದಾರೆ.ಸ್ಥಳೀಯ ಬಟ್ಟೆ ವ್ಯಾಪಾರಿಗಳು, ಟೇಲರ್‌ಗಳು ತಮ್ಮ ಬಳಿ ಗ್ರಾಹಕರು ಕೊಂಡೊಯ್ಯದ ಹೊಸ ಅಂಗಿ, ಪ್ಯಾಂಟ್‌ಗಳನ್ನೂ ತಂದಿಡುತ್ತಿದ್ದಾರೆ. ಅದರೊಂದಿಗೆಕೆಲವರು ಅನ್ನ, ಸಾಂಬರ್‌ ಮತ್ತಿತರೆ ಆಹಾರಪದಾರ್ಥಗಳನ್ನೂ ತಂದಿಡುತ್ತಿದ್ದಾರೆ. ಈ ಮೂಲಕ ಹಸಿದವರ ಹೊಟ್ಟೆ ತುಂಬಿಸುವ ಕೆಲಸವಾಗುತ್ತಿದೆ ಎಂಬುದು ಗಮನಾರ್ಹ. ಆ ಪೈಕಿ ಬಹುತೇಕವಸ್ತುಗಳು ದಿನವಿಡೀ ಇಲ್ಲಿನ ಕಪಾಟುಗಳಲ್ಲಿದ್ದರೂಬೆಳಗಾಗುವುದರೊಳಗೆ ಖಾಲಿಯಾಗಿರುತ್ತವೆ ಎನ್ನುತ್ತಾರೆ ಸ್ಥಳೀಯ ವರ್ತಕರು.

ಒಟ್ಟಾರೆ ಲಾಯನ್ಸ್‌ ಕ್ಲಬ್‌ನ ಸಾಮಾಜಿಕಕಳಕಳಿಯಿಂದ ಅತ್ಯಲ್ಪ ಮೊತ್ತದಲ್ಲಿ ತಲೆ ಎತ್ತಿರುವ ಬಡವರ ಸೇವಾ ಸಿಂಧು ಹಲವರಿಗೆ ನೆರವಾಗುತ್ತಿದೆ ಎಂಬುದು ಸುಳ್ಳಲ್ಲ.

ಈಗಾಗಲೇ ವಿವಿಧೆಡೆ ಈ ರೀತಿಯ ವ್ಯವಸ್ಥೆಗಳಿರುವುದನ್ನು ಮನಗಂಡು ನಗರದಲ್ಲಿ ಲಾಯನ್ಸ್‌ ಕ್ಲಬ್‌ನಿಂದ ನಿರ್ಮಿಸಿದ್ದೇವೆ.ಓರ್ವ ಸದಸ್ಯ ಫ್ರಿಜ್ಡ್, ಮತ್ತಿತರರು ಇಟ್ಟಿಗೆ, ಸಿಮೆಂಟ್‌ ಹೀಗೆ ವಿವಿಧವಸ್ತುಗಳನ್ನು ದೇಣಿಗೆ ನೀಡಿದ್ದರಿಂದ ಇದು ಸಾಧ್ಯವಾಗಿದೆ. ಪಕ್ಕದಲ್ಲೇ ಇರುವ ನಮ್ಮ ಶಾಲೆಯ ಶಿಕ್ಷಕರು ಪ್ರತಿನಿತ್ಯ ಪ್ರಿಜ್ಡ್ ಸ್ವತ್ಛಗೊಳಿಸುತ್ತಾರೆ. ಅನೇಕ ಸದಸ್ಯರುಪ್ರತಿನಿತ್ಯ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಈ ವ್ಯವಸ್ಥೆಯಿಂದ ಅನೇಕರಿಗೆ ಉಪಯುಕ್ತವಾಗುತ್ತಿದ್ದು, ತೃಪ್ತಿ ತಂದಿದೆ. -ಅಶ್ವತ್ಥ ಸುಲಾಖೆ ಲಾಯನ್ಸ್‌ ಕ್ಲಬ್‌ ಅಧ್ಯಕ್ಷ

ಟಾಪ್ ನ್ಯೂಸ್

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadaga

Diesel theft; ಗದಗ: ಕೆ.ಎಸ್.‌ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

Protest: ಅಂಬೇಡ್ಕರ್‌ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.