21ರಂದು ಮಹದಾಯಿಗಾಗಿ ಬೆಂಗಳೂರು ಚಲೋ

ಧಾರವಾಡದಿಂದ ರೈಲಿನಲ್ಲಿ ಹೋರಾಟಗಾರರ ಪ್ರಯಾಣ-ಅಂದು ರಾತ್ರಿಯಿಂದಲೇ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ

Team Udayavani, Jun 17, 2022, 2:18 PM IST

13

ನರಗುಂದ: ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಚಾಲನೆ ಸೇರಿದಂತೆ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆ ಗಳ ಪರಿಹಾರಕ್ಕೆ ಒತ್ತಾಯಿಸಿ ಮಹದಾಯಿ ಹೋರಾಟಗಾರರು ಜೂ.21ರಂದು ಬೆಂಗ ಳೂರು ಚಲೋಗೆ ನಿರ್ಧರಿಸಿದ್ದಾರೆ.

ಗುರುವಾರ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ 2527ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ 4 ಜಿಲ್ಲೆ, 11 ತಾಲೂಕುಗಳ ರೈತರ ಸಭೆಯ ಬಳಿಕ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಸ್ವಾಮೀಜಿ, ವೇದಿಕೆಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಖ್ಯೆಯ ಮಹದಾಯಿ ಹೋರಾಟ ಗಾರರನ್ನುದ್ದೇಶಿಸಿ ಮಾತನಾಡುತ್ತ ಈ ವಿಷಯ ಘೋಷಿಸಿದರು.

ರೈತರಿಗೆ ಸೂಚನೆ: ಜೂ.21ರಂದು ಬೆಂಗಳೂರು ಚಲೋನಲ್ಲಿ ಪಾಲ್ಗೊಳ್ಳುವ ರೈತರು ಅಗತ್ಯ ಬಟ್ಟೆ, ಎರಡು ದಿನಕ್ಕೆ ಬೇಕಾಗುವಷ್ಟು ರೊಟ್ಟಿ ಬುತ್ತಿಯೊಂದಿಗೆ ಅಂದು ಮ.12 ಗಂಟೆಯೊಳಗೆ ಧಾರವಾಡದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಸೇರಬೇಕು. ಅಂದು ಮ.12.45ಕ್ಕೆ ಹೊರಡುವ ರೈಲ್ವೆ ಮೂಲಕ ಬೆಂಗಳೂರಿಗೆ ತೆರಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ರಾತ್ರಿಯಿಂದಲೇ ಧರಣಿ: ಜೂ.21ರಂದು ತಡರಾತ್ರಿ 12 ಗಂಟೆಗೆ ಬೆಂಗಳೂರು ತಲುಪಲಿದ್ದು, ಅಲ್ಲಿನ ರೈಲ್ವೆ ನಿಲ್ದಾಣದಿಂದ ಪಾದಯಾತ್ರೆ ಮೂಲಕ ಬೆಂಗಳೂರಿನ ನೀರಾವರಿ ಮುಖ್ಯ ಕಚೇರಿವರೆಗೆ ತೆರಳಿ ಅಂದು ರಾತ್ರಿಯಿಂದಲೇ ಧರಣಿ ಪ್ರಾರಂಭಿಸಲಾಗುವುದು. ಸುಮಾರು 1 ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು. ಮೇ 30ರಂದು ಬೆಂಗಳೂರಿಗೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಮಹದಾಯಿ ಯೋಜನೆಗೆ ಶೀಘ್ರ ಚಾಲನೆ ನೀಡಬೇಕೆಂಬ ಬೇಡಿಕೆಯೊಂದಿಗೆ 10 ದಿನಗಳ ಗಡುವು ನೀಡಲಾಗಿತ್ತು. ತಪ್ಪಿದಲ್ಲಿ ಬೆಂಗಳೂರಿನ ನೀರಾವರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಅಂದೇ ಮನವಿ ಪತ್ರದಲ್ಲಿ ತಿಳಿಸಿದಂತೆ ಇದೀಗ ಬೆಂಗಳೂರು ಚಲೋ ನಡೆಸಲಾಗುತ್ತಿದೆ ಎಂದು ವೀರೇಶ ಸೊಬರದಮಠ ಸ್ವಾಮೀಜಿ ತಿಳಿಸಿದರು. ಕಷ್ಟದ ಕಾಲದಲ್ಲಿ ಕಣ್ಣೀರು ಸುರಿಸುವ ರೈತರ ಸಂಕಷ್ಟಗಳ ಪರಿಹಾರಕ್ಕೆ ನಾವು ಮುಂದಾಗಿದ್ದೇವೆ. ಸುದೀರ್ಘ‌ ಏಳನೇ ವರ್ಷದಲ್ಲಿ ಸಾಗಿಬಂದ ಈ ಹೋರಾಟ ನಮಗೆ ಎಲ್ಲವನ್ನೂ ಕಲಿಸಿದೆ. 1976ರಲ್ಲಿ ಹುಟ್ಟಿಕೊಂಡ ಮಹದಾಯಿ ಯೋಜನೆಗೆ ಇಂದು ನ್ಯಾಯಾಧಿಕರಣವೇ 4 ಟಿಎಂಸಿ ನೀರು ಹಂಚಿಕೆ ಮಾಡಿದ್ದರೂ, ಅದನ್ನು ಮಲಪ್ರಭೆಗೆ ಕೂಡಿಸುವ ಪ್ರಯತ್ನ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಶಿವಪ್ಪ ಹೊರಕೇರಿ, ಪಂಚಪ್ಪ ಹನಸಿ, ಗಿರಿಯಪ್ಪ ಹಂಜಿ, ಅಶೋಕ ಸಾತಣ್ಣವರ, ಮುತ್ತಣ್ಣ ಪಾಟೀಲ, ಮಲ್ಲಣ್ಣ ಆಲೇಕರ, ಗುರು ರಾಯನಗೌಡ್ರ, ಶೇಖಣ್ಣ ಹುಲಿಕಟ್ಟಿ, ಬಸವರಾಜ ಗುಡಿ, ಯಲ್ಲಪ್ಪ ಶಿವಪ್ಪನವರ, ಮಹೇಶ ನಾವಳ್ಳಿ, ಬಿಷ್ಠನಗೌಡ ಹೊಸಮನಿ, ಮೃತ್ಯುಂಜಯ ಅರವಟಗಿಮಠ, ಉಮೇಶ ಹಳ್ಯಾಳ, ಶರೀಫ ಕಲಬುರ್ಗಿ, ಅಲ್ಲಿಸಾಬ ದಿಲಾವರಸಾಬ, ಚಿದಾನಂದ ಹರ್ತಿ, ಹೇಮಕ್ಕ ಗಾಳಿ, ಶಿವಪ್ಪ ಕಡಿಯವರ, ವೆಂಕನಗೌಡ ಪಾಟೀಲ, ಲಚ್ಚಮ್ಮ ಜೋತೆಣ್ಣವರ, ಮಲಪ್ರಭೆ ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ, ಕಾರ್ಯದರ್ಶಿ ಎಸ್‌.ಬಿ.ಜೋಗಣ್ಣವರ, ವಾಸು ಚವ್ಹಾಣ, ಹನಮಂತ ಸರನಾಯ್ಕರ, ವೆಂಕಪ್ಪ ಹುಜರತ್ತಿ, ಅರ್ಜುನ ಮಾನೆ ಮುಂತಾದವರಿದ್ದರು.

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Waqf

Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.