ಬಸವ ಜಯಂತಿ: ಪೂರ್ವಭಾವಿ ಸಭೆ
ರಂಜಾನ್-ಬಸವ ಜಯಂತಿ ಶಾಂತಿಯುತ ಆಚರಣೆಗೆ ಸಲಹೆ
Team Udayavani, Apr 27, 2022, 1:24 PM IST
ಗದಗ: ಬಸವ ಜಯಂತಿಯನ್ನು ಮೇ 3ರಂದು ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ಕ್ಕೆ ಅರ್ಥಪೂರ್ಣ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ. ತಿಳಿಸಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಮಂಗಳವಾರ ಶ್ರೀ ಬಸವ ಜಯಂತಿ ಆಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬಸವ ಜಯಂತಿ ಹಾಗೂ ಅದರ ಮುನ್ನಾ ದಿನ ಬಸವೇಶ್ವರ ಪುತ್ಥಳಿ, ವಿವಿಧ ಪ್ರಮುಖ ವೃತ್ತಗಳನ್ನು ದೀಪಾಲಂಕಾರಗಳಿಂದ ಸಿಂಗರಿಸಬೇಕು. ಜಯಂತಿ ದಿನದಂದು ಬೆಳಗ್ಗೆ 8:30ಕ್ಕೆ ನಗರದ ಭೀಷ್ಮ ಕೆರೆಯ ಬಸವೇಶ್ವರ ಪುತ್ಥಳಿಯಿಂದ ತೋಂಟದಾರ್ಯ ಕಲ್ಯಾಣ ಕೇಂದ್ರದವರೆಗೆ ಪ್ರಮುಖ ಮಾರ್ಗಗಳಲ್ಲಿ ವಿವಿಧ ಕಲಾ ತಂಡಗಳನ್ನೊಳಗೊಂಡ ಅದ್ಧೂರಿ ಮೆರವಣಿಗೆ ನಡೆಯಲಿದೆ. ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ಕಾರ್ಯಕ್ರಮದ ಸ್ಥಳವಾದ ತೋಂಟದಾರ್ಯ ಕಲ್ಯಾಣ ಮಂಟಪಕ್ಕೆ ಬಂದು ಸೇರುವುದು. ನಗರಸಭೆ ಕಾರ್ಯಕ್ರಮದ ಸ್ಥಳ ಹಾಗೂ ವೃತ್ತಗಳ ಸ್ವತ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪನ್ಯಾಸಕರ ನೇಮಕ, ಶರಣರ ವಚನಗಳ ಪುಸ್ತಕಗಳ ವಿತರಣೆ, ವೇದಿಕೆ ವ್ಯವಸ್ಥೆ, ಬ್ಯಾನರ್ ಅಳವಡಿಕೆ, ಕಲಾತಂಡಗಳ ಮೆರವಣಿಗೆ, ಊಟೋಪಚಾರದ ವ್ಯವಸ್ಥೆ ಕುರಿತು ಚರ್ಚಿಸಲಾಯಿತು. ಶಿಷ್ಟಾಚಾರದಂತೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮುದ್ರಣ, ಅತಿಥಿ ಗಣ್ಯರನ್ನು ಆಹ್ವಾನಿಸಲು ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಎಂ.ಜಿ. ಕಂಡೆಮ್ಮನವರ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಕಾಶ ಅಸುಂಡಿ, ಎಸ್.ಎನ್. ಬಳ್ಳಾರಿ, ಪ್ರೊ| ಕೆ.ಎಚ್. ಬೇಲೂರ, ಡಾ| ರಾಜಶೇಖರ ದಾನರೆಡ್ಡಿ, ವಿ.ಕೆ. ಕರಿಗೌಡ್ರ, ಮಲ್ಲಿಕಾರ್ಜುನ ಐಲಿ, ಅಮರೇಶ ಅಂಗಡಿ, ಶೇಖಣ್ಣ ಕವಳಿಕಾಯಿ, ರವಿ ಹಾದಿಮನಿ, ಎಸ್.ಎ. ಮುಗದ, ಬಿ.ವಿ. ಕಾಮಣ್ಣವರ, ಡಿ.ವಿ. ಗಣಾಚಾರಿ ಸಮಾಜದವರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ. ಸ್ವಾಗತಿಸಿ, ವಂದಿಸಿದರು.
ಗಜೇಂದ್ರಗಡ: ರಂಜಾನ್ ಹಾಗೂ ಬಸವ ಜಯಂತಿ ಆಚರಣೆ ಕುರಿತು ತಾಲೂಕಿನ ನರೇಗಲ್ಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ ನಡೆಯಿತು. ಸಭೆಯಲ್ಲಿ ಠಾಣೆ ಪಿಎಸ್‌ಐ ಕಿರಣಕುಮಾರ ಎಸ್. ಕೆ. ಮಾತನಾಡಿ, ಮೇ 3ರಂದು ನಡೆಯಲಿರುವ ಪವಿತ್ರ ರಂಜಾನ್ ಹಾಗೂ ಬಸವ ಜಯಂತಿಯನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಪಟ್ಟಣದಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ತೊಂದರೆಯಾಗದಂತೆ ರಂಜಾನ್ ಹಾಗೂ ಬಸವ ಜಯಂತಿ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ, ಕಾನೂನು ಪಾಲನೆಗೆ ಮುಂದಾಗಿ ಹಬ್ಬ ಆಚರಿಸಿ ಎಂದರು.
ಮುಖಂಡ ಶಶಿಧರಗೌಡ ಸಂಕನಗೌಡ್ರ ಮಾತನಾಡಿ, ಹಬ್ಬ, ಹರಿದಿನಗಳು ನಮ್ಮ ಮನಸ್ಸಿನಲ್ಲಿಯ ಕಾಮ, ಕ್ರೋದ, ಮದ, ಮತ್ಸರಗಳನ್ನು ಬದಿಗೊತ್ತಿ, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳುವಂತ ಸಂದೇಶ ಒಳಗೊಂಡಿವೆ. ಈ ಹಿನ್ನೆಲೆಯಲ್ಲಿ ಹಬ್ಬ ಆಚರಣೆಗಳು ಸಾಮರಸ್ಯದ ಪ್ರತೀಕವಾಗಿವೆ. ಅದನ್ನು ಅರಿತು ಹಬ್ಬವನ್ನು ಆಚರಿಸಿದರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ನೆಲೆಸುತ್ತದೆ. ಆ ಕಾರಣದಿಂದ ರಂಜಾನ್ ಹಾಗೂ ಬಸವ ಜಯಂತಿ ಹಬ್ಬದ ಆಚರಣೆ ಸಮಿತಿಯವರು ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು ಎಂದರು.
ಪಪಂ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ, ಅಶೋಕ ಬೇವಿನಕಟ್ಟಿ, ಬಸವರಾಜ ವಂಕಲಕುಂಟಿ, ನಿಂಗಪ್ಪ ಚಲವಾದಿ, ಎ.ಎ. ನವಲಗುಂದ, ಮೈಲಾರಪ್ಪ ಚಳ್ಳಮರದ, ಬಾಪುಗೌಡ ಪಾಟೀಲ, ಕುಮಾರಸ್ವಾಮಿ ಕೋರಧಾನ್ಯಮಠ, ಯಲ್ಲಪ್ಪ ಮಣ್ಣೋಡ್ಡರ, ನಿಂಗನಗೌಡ ಲಕ್ಕನಗೌಡ್ರ, ಹನುಮಂತಪ್ಪ ದ್ವಾಸಲ, ದಾವುದಲಿ ಕುದರಿ, ಅಲ್ಲಾಭಕ್ಷಿ ನದಾಫ್, ಮೌನೇಶ ಹೊಸಮನಿ, ಹಸನಸಾಬ್ ಕೊಪ್ಪಳ, ರಮೇಶ ಕೊಲಕಾರ, ಮಹೇಶ ಶಿವಶಿಂಪರ, ಮಲಿಕಸಾಬ ರೋಣದ, ಠಾಣೆ ಸಿಬ್ಬಂದಿಗಳಾದ ಬಸವರಾಜ ಮುಳಗುಂದ, ಮಂಜುನಾಥ ಬಂಡಿವಡ್ಡರ, ಷಡಕ್ಷರಿ ಗೊಳಪ್ಪನವರ, ರೆಹಮಾನಸಾಬ ವಾಲಿಕಾರ, ಆರ್.ಎಫ್. ಕಪ್ಪತ್ತನವರ, ಹನಮಂತ ಡಂಬಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.