ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ
Team Udayavani, Dec 23, 2020, 6:45 PM IST
ನರಗುಂದ: ಬೆಳಗಾವಿ ಸೂರ್ಯ-ಚಂದ್ರರು ಇರುವರೆಗೂ ಕರ್ನಾಟಕದ ಅವಿಭಾಜ್ಯ ಅಂಗವೇಆಗಿದೆ ಎಂದು ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿಏಕೀಕರಣ ಹೋರಾಟಗಾರರಾದ ನಾಗನೂರು ಶಿವಬಸವ ಸ್ವಾಮಿಗಳಹಾಗೂ ಬಾಲ್ಕಿ ಚೆನ್ನಬಸವ ಪಟ್ಟಾಧ್ಯಕ್ಷರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದರು.
ಕರ್ನಾಟಕ ಏಕೀಕರಣಗೊಂಡು 65 ವರ್ಷ ಗತಿಸಿ, ಮಹಾಜನ್‌ವರದಿ ಅಂತಿಮವೆಂದು ಹೇಳಿದರೂಮಹಾರಾಷ್ಟ್ರ ಸರ್ಕಾರದ ಕೆಲವು ನಾಯಕರು ಗಡಿ ತಂಟೆಯ ತಕರಾರುಮಾಡುತ್ತಲೆ ಬೆಳಗಾವಿ ನಮಗೆ ಸೇರುತ್ತದೆಂದು ಗಡಿಯಲ್ಲಿ ಕನ್ನಡಿಗರು,ಮರಾಠಿಗರಬಾಂದವ್ಯದ ಬದುಕಿಗೆಬಾಷಾ ವೈಷಮ್ಯದ ಬೀಜ ಬಿತ್ತಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಖಂಡ ಕರ್ನಾಟಕದ ಕನಸನ್ನು ನನಸಾಗಿಸಿದವರು ಪೂಜ್ಯದ್ವಯರು. ಏಕೀಕರಣದಲ್ಲಿ ತಮ್ಮನ್ನೇ ತಾವು ಅರ್ಪಿಸಿಕೊಂಡವರು. ಇವರಂತೆಸಾವಿರಾರು ಹೋರಾಟಗಾರರು ತನು-ಮನ ಅರ್ಪಿಸಿಏಕೀಕರಣಗೊಳಿಸಿದ್ದು ನಮಗೆಆದರ್ಶಪ್ರಾಯ ಎಂದು ಹೇಳಿದರು. ಉಪನ್ಯಾಸ ನೀಡಿದ ಪ್ರೊ| ಆರ್ .ಬಿ.ಚಿನಿವಾಲರ, ಗುರುದ್ವಯರು ಗಡಿಯಲ್ಲಿ ಕನ್ನಡದ ಗುಡಿ ಕಟ್ಟಿದ್ದಾರೆಮರಾಠಿ ಭಾಷೆ, ಉರ್ದು ಭಾಷೆಗಳ ಹೊಡೆತಕ್ಕೆ ಕನ್ನಡದ ಸ್ಥಿತಿದಯನೀಯವಾಗಿದ್ದ ಸಂದಿಗ್ಧ ಸ್ಥಿತಿಯಲ್ಲಿಕನ್ನಡ ಭಾಷೆಗೆ ಕುಸುಮ ಕೊಟ್ಟುಖಂಡ ಕರ್ನಾಟಕವನ್ನು ಅಖಂಡ ಕರ್ನಾಟಕದ ಕನಸು ಕಟ್ಟಿ ಅದರಲ್ಲಿ ಯಶಸ್ವಿಯಾದವರು ಪೂಜ್ಯದ್ವಯರು ಎಂದು ಸ್ಮರಿಸಿದರು.
ಅಂದು ಸೌಲಭ್ಯವಿಲ್ಲದ ಸಮಯ ದಲ್ಲಿಯೂ ಸಾವಿರಾರು ವಿದ್ಯಾರ್ಥಿ ಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಬಸವಾದಿ ಶರಣರ ಕಾರ್ಯವನ್ನು ಮುನ್ನಡೆಸಿದರು. ಸ್ವಾತಂತ್ರ್ಯ ಹಾಗೂಕರ್ನಾಟಕದ ಏಕೀಕರಣಕ್ಕೆ ನಮ್ಮನಾಡಿನ ಮಠಗಳಲ್ಲಿ ಬೆಳಗಾವಿಯನಾಗನೂರು ರುದ್ರಾಕ್ಷಿಮಠ, ಬಾಲ್ಕಿಮಠಗಳ ಕೊಡುಗೆ ಅಪಾರ ಎಂದರು.
ಬೆಂಗಳೂರಿನ ಆರ್‌ಸಿ ಕಾಲೇಜು ಪ್ರಾಚಾರ್ಯ ಎಲ್.ಎ.ಕುಲಗೋಡ,ಜಿಲ್ಲಾ ಕನ್ನಡ ಜಾಗೃತಿ ಸಮಿತಿಸದಸ್ಯರಾದ ಮಹಾಂತೇಶ ವಾಲಿ,ಅನೀಲ ಕುಟಗನಕೇರಿ, ಮಹಾಂತೇಶಸಾಲಿಮಠ, ಬಿ.ಎಂ.ಗೊಜನೂರ,ಸಿದ್ದರೆಡ್ಡಿ ಹಂಚಿನಾಳ, ಶಿವಾನಂದಹೀರೆಮಠ ವೇದಿಕೆಯಲ್ಲಿದ್ದರು. ಪ್ರೊ|ಆರ್.ಕೆ.ಐನಾಪೂರ ನಿರೂಪಿಸಿ, ಪ್ರಭಯ್ಯ ಸಾಂಬಯ್ಯನಮಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.