ಬಿಜೆಪಿ ಆಡಳಿತ ಕಿತ್ತೊಗೆಯಲು ದೊಡ್ಡ ಪಾದಯಾತ್ರೆ
ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಸ್ಪಷ್ಟನೆ
Team Udayavani, Aug 7, 2022, 4:03 PM IST
ಗಜೇಂದ್ರಗಡ: ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದರ ಜೊತೆಗೆ ಸಂವಿಧಾನ ಬದಲಾವಣೆಯ ಮಾತುಗಳ ಮೂಲಕ ಇಡೀ ದೇಶವನ್ನೇ ಒಡೆದಾಳುತ್ತಿರುವವರನ್ನು ಕಿತ್ತೂಗೆಯಲು ನಾವೆಲ್ಲರೂ ದೊಡ್ಡ ಮಟ್ಟದ ಪಾದಯಾತ್ರೆ ಹಮ್ಮಿಕೊಳ್ಳಬೇಕಿದೆ. ಸ್ವಾತಂತ್ರ್ಯೋತ್ಸವದ ಮಹತ್ವ ನಮಗೆಲ್ಲರಿಗೂ ಗೊತ್ತು. ಆದು, ಬಿಜೆಪಿಗೇನು ತಿಳಿದೀತು ಎಂದು ಮಾಜಿ ಶಾಸಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಕಿಡಿಕಾರಿದರು.
ಸಮೀಪದ ನಾಗೇಂದ್ರಗಡ ಗ್ರಾಮದ ಶ್ರೀ ಸಿದ್ಧಾರೂಢ ಸ್ವಾಮಿಗಳ ಮಠದ ಆವರಣದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಕಾಂಗ್ರೆಸ್ ಹಮ್ಮಿಕೊಂಡಿರುವ 166 ಕಿ.ಮೀ. ಪಾದಯಾತ್ರೆಯ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಾತ್ಮ ಗಾಂಧೀಜಿ ತಪ್ಪುಗಳನ್ನು ಮಾಡಿದರೆ ಹೇಳುತ್ತಿದ್ದರು. ಆದರೆ, ಈಗ ಅಧಿಕಾರದಲ್ಲಿರುವವರು ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೇಂದ್ರ ಸರಕಾರದ ವಿರುದ್ಧ ಅಥವಾ ಬಿಜೆಪಿಯ ವಿರುದ್ಧ ಮಾತನಾಡುವ ಎಲ್ಲರಿಗೂ ದೇಶದ್ರೋಹಿ, ನಕ್ಸಲ್ ಎಂಬ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಯ ವಿನಾಶದ ಕಾಲ ಹತ್ತಿರ ಬಂದಿದೆ. ರಾಷ್ಟ್ರಕ್ಕೆ ಗೊತ್ತಿರುವ ಸತ್ಯದ ವಿಚಾರವನ್ನು ಇವತ್ತು ಮರೆಮಾಚಿ ದೇಶದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸಾಕಷ್ಟು ಹೋರಾಟ ಮಾಡಿದ್ದು, ಟೊಳ್ಳು ಬೆದರಿಕೆಗೆ ಹೆದರುವುದಿಲ್ಲ. ದೇಶದ ಜನರಿಗೆ ಬಿಜೆಪಿಯ ಸುಳ್ಳು ನಾಟಕಗಳು ಗೊತ್ತಾಗಿದೆ. ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿ, ಅಂಬಾನಿ, ಅದಾನಿಯವರ ಬೆನ್ನಿಗೆ ನಿಂತು ಆಡಳಿತ ನಡೆಸುವ ದುರಾಡಳಿತ ದೇಶಕ್ಕೆ ಬೇಕಾಗಿಲ್ಲ ಎಂದು ಕಿಡಿಕಾಕರಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಹೋರಾಟ ನಡೆಸಿದೆ. ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಆದರೆ, ಬಿಜೆಪಿಯ ಕೊಡುಗೆ ಬಂಡವಾಳ ಶಾಹಿಗಳ ಪರವಾಗಿದೆ. ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳನ್ನು ನಾವೆಲ್ಲರೂ ಹೊಡೆದೋಡಿಸಬೇಕು. ಇದಕ್ಕೆ ಇನ್ನಷ್ಟು ದೊಡ್ಡ ಮಟ್ಟದ ಹೋರಾಟಗಳನ್ನು ಕ್ಷೇತ್ರದಲ್ಲಿ ರೂಪಿಸುವ ಮೂಲಕ ಮತ್ತೆ ದೇಶದಲ್ಲಿ ಬಡವರ ಪರವಾದ ಕಾಂಗ್ರೆಸ್ ಅಧಿಕಾರಕ್ಕೆ ತರುವ ಅಗತ್ಯವಿದೆ ಎಂದರು.
ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅವ ಧಿಯಲ್ಲಿ ಸರ್ವ ಸಮುದಾಯಗಳ ಕಲ್ಯಾಣಕ್ಕೆ ಜಾರಿಗೊಳಿಸಿದ ಅದೆಷ್ಟೋ ಭಾಗ್ಯಗಳ ಯೋಜನೆಗಳು ಇಂದಿಗೂ ಜನಮಾನಸದಲ್ಲಿ ನೆಲೆಯೂರಿವೆ. ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತದೆ ಹೊರತು, ಸಮಾಜವನ್ನು ಒಡೆದಾಳುವ ನೀತಿಯಲ್ಲ. ಈ ದಿಸೆಯಲ್ಲಿ ಕಾರ್ಯಕರ್ಯರು ಕೇಡರ್ ಬೇಸ್ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಎಂದರು.
ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ದೇಶದ ಜನತೆ ಮುಂದಾಗಬೇಕು. ಬಿಜೆಪಿ ದುರಾಡಳಿತ ದೇಶಕ್ಕೆ ಮಾರಕವಾಗಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷದಿಂದಲೇ ದೇಶದ ಉಳಿವು ಸಾಧ್ಯ. ಬಿಜೆಪಿಯವರು ಸಮಾಜವನ್ನು ಒಡೆದಾಳುತ್ತಿದ್ದಾರೆ. ಕೋಮು ಗಲಭೆ ಮುಖಾಂತರ ನೆಮ್ಮದಿ ಕದಡುತ್ತಿದ್ದಾರೆ. ದೇಶವನ್ನು ಶಾಂತಿಯುತವಾಗಿಡಲು ಯುವಕರೇ ಪಣ ತೊಡಬೇಕಿದೆ ಎಂದರು.
ಪರಶುರಾಮ ಅಳಗವಾಡಿ, ವಿ.ಆರ್. ಗುಡಿಸಾಗರ, ಪ್ರಭು ಮೇಟಿ, ಎ.ಪಿ.ಪಾಟೀಲ, ಶರಣಪ್ಪ ಬೆಟಗೇರಿ, ಅಂದಪ್ಪ ಬಿಚ್ಚಾರ, ನಿಂಗಪ್ಪ ಕಾಶಪ್ಪನವರ, ಪರಶುರಾಮ ಅಂಡಿನ, ಅಶೋಕ ಜಿಗಳೂರ, ಹನುಮಂತಪ್ಪ ರೊಟ್ಟಿ, ರಾಜೇಸಾಬ ಮುಲ್ಲಾ, ಎಂ.ಪಿ.ಗೌಡರ, ಹನುಮಪ್ಪ ಮುದೇನೂರ, ನಿಂಗರಾಜ ಹಂಡಿ, ಶರಣಪ್ಪ ಜಿಗಳೂರ, ಪ್ರಕಾಶ ಜಿಗಳೂರ, ಲಕ್ಷ್ಮಣ ಭಜಂತ್ರಿ, ಮಾಯಪ್ಪ ಹರಿಜನ, ಹನುಮಂತಪ್ಪ ಕಲ್ಲೊಡ್ಡರ, ಶಿವಕುಮಾರ್ ಚವ್ಹಾಣ, ಬಾಷಾ ಮುದಗಲ್ಲ, ಶರಣಪ್ಪ ಚಳಗೇರಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.