Gadaga: ಟೊಮಾಟೋ ಬೆಳೆದು ಬಂಪರ್ ಲಾಭ ತೆಗೆದ ಬಿಂಕದಕಟ್ಟಿ ರೈತ
Team Udayavani, Aug 8, 2023, 6:43 PM IST
ಗದಗ: ಕಳೆದ 27 ವರ್ಷಗಳ ನಿರಂತರ ಶ್ರಮಕ್ಕೆ ಭೂಮಿ ತಾಯಿ ಒಲಿದಿದ್ದು, ಟೊಮ್ಯಾಟೋ ಬೆಳೆದ ಜಿಲ್ಲೆಯ ರೈತರೊಬ್ಬರು ಕಳೆದ 20 ದಿನಗಳಲ್ಲೇ 8 ಲಕ್ಷ ರೂ. ನಿವ್ವಳ ಲಾಭ ಪಡೆಯುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
20 ದಿನಗಳ ಹಿಂದೆ ಟೊಮ್ಯಾಟೋ ಕಟಾವು ಆರಂಭಿಸಿರುವ ಬಿಂಕದಕಟ್ಟಿ ಗ್ರಾಮದ ರೈತ ಬಸನಗೌಡ ತಿಮ್ಮನಗೌಡ್ರ ಅವರಯ ದಿನಂಪ್ರತಿ 40ರಿಂದ 50 ಕ್ರೇಟ್ ಟೊಮಾಟೋ ಉತ್ಪಾದನೆ ಮಾಡುತ್ತಿದ್ದು, ಪ್ರತಿ ಕ್ರೇಟ್ ಟೊಮಾಟೋಗೆ 1,700-1,800 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 68,000-72,000 ರೂ. ಸಂಪಾದನೆ ತೆಗೆಯುತ್ತಿದ್ದಾರೆ.
ತಾವು ಬೆಳೆದ ಟೊಮ್ಯಾಟೋ ಬೆಳೆಯನ್ನು ಎಪಿಎಂಸಿಯಲ್ಲಿ ಮಧ್ಯವರ್ತಿಗಳ, ದಲಾಲರ ಹಾಗೂ ಹಮಾಲರ ನೆರವಿಲ್ಲದೇ ನೇರವಾಗಿ ಮಾರಾಟ ಮಾಡುತ್ತ ಬಂದಿರುವ ರೈತ ತಿಮ್ಮನಗೌಡ್ರ ಅವರು ಕಮಿಶನ್‌ನಲ್ಲೂ ಲಾಭಾಂಶ ಪಡೆಯುವ ಮೂಲಕ ಬಂಪರ್ ಬೆಳೆಗೆ ಬಂಪರ್ ಬೆಲೆ ಪಡೆಯುತ್ತ ಸಾಗಿದ್ದಾರೆ.
ಮೂಲತಃ ಸಣ್ಣ ರೈತ ಕುಟುಂಬದಿಂದ ಬಂದಿರುವ ಬಸನಗೌಡ ತಿಮ್ಮನಗೌಡ್ರ ಅವರು 1996ರಿಂದ ತಮ್ಮ 2 ಎಕರೆ ಪ್ರದೇಶದಲ್ಲಿ
ನಿರಂತರವಾಗಿ ಟೊಮಾಟೋ ಬೆಳೆಯುತ್ತಲೇ ಬಂದಿದ್ದಾರೆ. ಆರಂಭದಲ್ಲಿ ಟ್ಯಾಂಕರ್ ಮೂಲಕ ನೀರು ಹರಿಸಿ, ನಂತರ ಬೋರ್‌ವೆಲ್ ಹಾಕಿಸಿ ನೀರು ಹರಿಸಿದ್ದಾರೆ. ಆರಂಭದಲ್ಲಿ ಟೊಮ್ಯಾಟೋಗೆ ಉತ್ತಮ ಲಾಭ ಪಡೆದಿದ್ದ ಅವರು ಕಳೆದ ಐದಾರು ವರ್ಷಗಳಿಂದ ಟೊಮಾಟೋ ಬೆಳೆಗೆ ಹೆಚ್ಚಿನ ದರ ಇರದ ಕಾರಣ ನಷ್ಟ ಅನುಭವಿಸಿದ್ದರು.
ಪ್ರಸ್ತುತ 1.5 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆದ ರೈತ ತಿಮ್ಮನಗೌಡ್ರ ಅವರು ಕೂಲಿ ಆಳುಗಳ ನೆರವಿಲ್ಲದೇ ತಮ್ಮ ಇಬ್ಬರು ಮಕ್ಕಳೊಂದಿಗೆ ನಾಟಿ, ಬದು ನಿರ್ಮಾಣ ಸೇರಿ ದಾರ ಕಟ್ಟುವುದು, ಕಳೆ ತೆಗೆಯುವ ಕೆಲಸ ಮಾಡಿದ್ದಾರೆ. ಕಟಾವಿನ ಸಂದರ್ಭದಲ್ಲಿ ಮಾತ್ರ ಕೂಲಿ ಆಳುಗಳ ನೆರವು ಪಡೆಯುತ್ತಿದ್ದಾರೆ. ಅಂದಾಜು 1 ಲಕ್ಷ ರೂ. ಖರ್ಚು ಮಾಡಿ ಬೆಳೆದ ಟೊಮ್ಯಾಟೋ ಬೆಳೆ ರಕ್ಷಣೆಗೆ ಸಿಸಿ ಕ್ಯಾಮೆರಾ ಅಳವಡಿಸಿರುವ ರೈತ ಬಸನಗೌಡ ತಿಮ್ಮನಗೌಡ್ರ ಅವರು ಇನ್ನು 8ರಿಂದ 10 ಲಕ್ಷ ರೂ. ಆದಾಯದ
ನಿರೀಕ್ಷೆಯಲ್ಲಿದ್ದಾರೆ.
ನನ್ನ 50 ವರ್ಷದ ಕೃಷಿ ಕಾಯಕದಲ್ಲಿ ಟೊಮ್ಯಾಟೋ ಬೆಳೆಗೆ ಇಷ್ಟೊಂದು ಬೆಲೆ ಬಂದಿರಲಿಲ್ಲ. ನಂಬಿದ ಬೆಳೆ ಕೊನೆಗೂ ಕೈ ಹಿಡಿದಿದ್ದು, ಟೊಮಾಟೋ ನನ್ನ ಅದೃಷ್ಟವನ್ನು ಬದಲಾಯಿಸಿದೆ.
ಬಸನಗೌಡ ತಿಮ್ಮಗೌಡ್ರ,
ಟೊಮ್ಯಾಟೋ ಬೆಳೆದ ರೈತ
*ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.