ಕುರಿ-ಆಡುಗಳ ಜೀವ ಹಿಂಡುತ್ತಿದೆ ಬ್ಲೂ ಟಂಗ್‌


Team Udayavani, Dec 1, 2019, 3:55 PM IST

gadaga-tdy-1

ಗದಗ: ಕಳೆದೊಂದು ತಿಂಗಳಿಂದ ರಾಜ್ಯದ ವಿವಿಧೆಡೆ ಆವರಿಸಿರುವ ನೀಲಿ ನಾಲಿಗೆ ರೋಗದಿಂದ ಪ್ರತಿನಿತ್ಯ ನೂರಾರು ಕುರಿ-ಆಡುಗಳು ಮೃತಪಡುತ್ತಿದ್ದು, ಕುರಿಗಾಹಿಗಳ ನಿದ್ದೆಗೆಡಿಸಿದೆ.

ಸತತ ಬರಗಾಲದ ಬಳಿಕ ಇತ್ತೀಚೆಗೆ ಉಂಟಾದ ಅತಿವೃಷ್ಟಿಯಿಂದ ರಾಜ್ಯದ 8-10 ಜಿಲ್ಲೆಗಳಆಡು-ಕುರಿಗಳಲ್ಲಿ ನೀಲಿ ನಾಲಿಗೆ ಕಾಣಿಸಿಕೊಂಡಿದೆ. ಬರ ಪೀಡಿತ ಉತ್ತರ ಕರ್ನಾಟಕಜಿಲ್ಲೆಗಳಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಹಾಗೂ ಮುಂಗಾರು ಹಂಗಾಮಿನ ಕೊನೆಗೆನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದ ಈ ರೋಗ ತೀವ್ರವಾಗಿ ಭಾದಿಸುತ್ತಿದೆ. ಈ ಪೈಕಿಅತಿವೃಷ್ಟಿಯಿಂದ ಗದಗ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ರೋಗದ ತೀವ್ರತೆ ತುಸು ಹೆಚ್ಚಿದೆ ಎಂದು ಹೇಳಲಾಗಿದೆ.

ದಿನಕ್ಕೆ ಹತ್ತಾರು ಬಲಿ:  ಕಳೆದೊಂದು ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ನೀಲಿ ನಾಲಿಗೆ ರೋಗ ವ್ಯಾಪಕವಾಗಿ ಆವರಿಸಿದೆ. ಒಟ್ಟು 17 ಲಕ್ಷ ಕುರಿ ಮತ್ತು ಆಡುಗಳ ಪೈಕಿ 23022 ಜೀವಿಗಳಲ್ಲಿ ರೋಗ ಕಾಣಿಸಿಕೊಂಡಿದ್ದು, 1118 ಮೃತಪಟ್ಟಿವೆ. ಇನ್ನುಳಿದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರದಿಂದ ಪೂರೈಸಲಾದ 1,71,620 ಡೋಸ್‌ ಲಸಿಕೆಗಳನ್ನು ಹಾಕಲಾಗಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 400ಕ್ಕೂ ಹೆಚ್ಚು ಕುರಿ ಮತ್ತು ಆಡುಗಳು ಮೃತಪಟ್ಟಿವೆ. ಇನ್ನುಳಿದಂತೆ ಪರೀಕ್ಷಾರ್ಥ 20,000 ವಾಕ್ಸಿನ್‌ ಬಂದಿದ್ದು, ಕುರಿಗಳಿಗೆ ಹಾಕಲಾಗುತ್ತಿದೆ.

ಲಸಿಕೆಗೂ ನಿಯಂತ್ರಣಕ್ಕೆ ಬಾರದ ರೋಗ: ನೀಲಿ ನಾಲಿಗೆ ರೋಗವು ಸುಮಾರು 25ಕ್ಕಿಂತ ಹೆಚ್ಚು ಪ್ರಕಾರಗಳಲ್ಲಿ ತನ್ನ ಸ್ವರೂಪ ಬದಲಾಯಿಸುತ್ತದೆ. ವೈರಸ್‌ನಿಂದ ಹರಡುವ ರೋಗ ಇದಾಗಿದ್ದರೂ, ಜೀವಿಯಿಂದ ಜೀವಿಗೆ ಹರಡಿದ ನಂತರ ತನ್ನ ಸ್ವರೂಪ ಬದಲಾಯಿಸುತ್ತದೆ. ಹೀಗಾಗಿ ನೀಲಿಬಾಯಿ ರೋಗಕ್ಕೆ ನಿಖರವಾಗಿ ಔಷಧ ತಯಾರಿಸಲು ಸಾಧ್ಯವಾಗಿಲ್ಲ. ಸದ್ಯ ಐದಾರು ಸ್ವರೂಪದ ನೀಲಿ ನಾಲಿಗೆ ರೋಗಕ್ಕೆ ಹೊಂದಾಣಿಕೆ ಮಾಡಿದ ಔಷಧಿಯನ್ನು ಪರೀಕ್ಷಾರ್ಥವಾಗಿ ನೀಡಲಾಗುತ್ತಿದೆ. ಇದು ಮುಂಜಾಗ್ರತಾ ಕ್ರಮವಾಗಿ ನೀಡಲಾಗುತ್ತಿದ್ದು, ಕೆಲ ಜಿಲ್ಲೆಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದರೆ, ಇನ್ನೂ ಕೆಲವೆಡೆ ಸಾವಿನ ಪ್ರಮಾಣ ಮುಂದುವರಿದಿರುವುದು ರೈತರು ಮತ್ತು ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

ಶೇ.10 ಮಾತ್ರ ಲಸಿಕೆ ಲಭ್ಯ :ರಾಜ್ಯದಲ್ಲಿ ಸುಮಾರು 1.72 ಕೋಟಿ ಕುರಿ ಮತ್ತುಆಡುಗಳಿದ್ದು, ಈವರೆಗೆ ಪೂರೈಸಿರುವ ಔಷಧಿ ಶೇ.10ಕ್ಕಿಂತ ಕಡಿಮೆ. ರೋಗ ತೀವ್ರವಾಗಿರುವ ಜಿಲ್ಲೆಗಳಿಗೆ ಆದ್ಯತೆಯಂತೆ ಒಟ್ಟು 5 ಲಕ್ಷ ಡೋಸ್‌ ವ್ಯಾಕ್ಸಿನೇಷನ್‌ ಪೂರೈಸಲಾಗಿದೆ.ಆದರೆ, ಇಲಾಖೆಯಲ್ಲಿ ಸಿಬ್ಬಂದಿ ಹಾಗೂ ಔಷಧಿ ಕೊರತೆಯಿಂದ ಅನೇಕ ಕಡೆ ಔಷಧಿ ತಲುಪಿಲ್ಲ. ರೋಗ ನಿಯಂತ್ರಣಕ್ಕೂ ಬರುತ್ತಿಲ್ಲ ಎಂಬುದು ಕುರಿಗಾಹಿಗಳ ಅಳಲು

ಗದಗ ಜಿಲ್ಲೆಯಲ್ಲಿ ಹೆಚ್ಚು : ಗದಗ ಜಿಲ್ಲೆಯಲ್ಲಿ ಈ ರೋಗದ ತೀವ್ರತೆ ತುಸುಹೆಚ್ಚಿದೆ. ಕಳೆದ ಅಕ್ಟೋಬರ್‌ ಅಂತ್ಯದವರೆಗೆ ಮುಂಡರಗಿ ತಾಲೂಕಿನಲ್ಲಿ 95, ಶಿರಹಟ್ಟಿಯಲ್ಲಿ 135, ರೋಣ ತಾಲೂಕಿನಲ್ಲಿ 8 ಸೇರಿದಂತೆ ಒಟ್ಟು 238 ಕುರಿಗಳು ಮೃತಪಟ್ಟಿವೆ. ಆದರೆ, ನವೆಂಬರ್‌ ಮೊದಲ ವಾರದಲ್ಲಿ ರೋಗ ತೀವ್ರ ಸ್ವರೂಪ ಪಡೆದಿದ್ದು, ಈ ಭಾಗದ ಜಿಲ್ಲೆಗಳಲ್ಲಿ ಪ್ರತಿನಿತ್ಯ 10-15 ಕುರಿ-ಆಡುಗಳು ಸಾಯುತ್ತಿವೆ.

 

-ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

gadag-police

Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!

Gove-Patil

Approve:ಮೈಕ್ರೋ ಫೈನಾನ್ಸ್‌ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.