ನರೇಗಾದಡಿ ರೈತ ಸಂಪರ್ಕ ರಸ್ತೆ ನಿರ್ಮಿಸಿ
Team Udayavani, Mar 8, 2021, 5:26 PM IST
ಲಕ್ಷ್ಮೇಶ್ವರ: ಭಾರತ ಹಳ್ಳಿಗಳಿಂದ ಕೂಡಿದ ಕೃಷಿ ಪ್ರಧಾನ ದೇಶ. ಸರ್ಕಾರ ನರೇಗಾದಡಿ ರೈತ ಸಂಪರ್ಕ ರಸ್ತೆ, ಕೆರೆ, ಬಾಂದಾರ, ಬಾವಿಗಳ ನಿರ್ಮಾಣ ಮತ್ತು ಹೂಳು ತೆಗೆಸುವ ಕಾರ್ಯ ಮಾಡಿಸಬೇಕೆಂದು ರೈತ ಮುಖಂಡ ಸೋಮೇಶ ಉಪನಾಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿ ವರ್ಷ ಜಮೀನುಗಳಲ್ಲಿ ಬದುವುನಿರ್ಮಿಸುವುದಕ್ಕೆ ಹೆಚ್ಚು ಒತ್ತು ನೀಡಿದರೂ ಪ್ರತಿ ವರ್ಷದ ಮಳೆಗಾಲಕ್ಕೆಬದುವುಗಳು ಯಥಾಸ್ಥಿತಿಗೆ ಬರುತ್ತವೆ. ಗ್ರಾಮೀಣ ಭಾಗದ ರೈತರ ಅಗತ್ಯವಾದರಸ್ತೆ ಅಭಿವೃದ್ಧಿಯಾಗಿದೆ. ಆದ್ದರಿಂದ, ನರೇಗಾದಡಿ ನಮ್ಮ ಜಮೀನು ನಮ್ಮ ರಸ್ತೆ ಎಂಬ ಹೊಸ ಯೋಜನೆ ಮೂಲಕ ಸದ್ಯಕ್ಕೆ ಇರುವ ಕಾಲ್ದಾರಿ, ಚಕ್ಕಡಿ ದಾರಿ, ಸರ್ಕಾರಿ ದಾರಿಗಳನ್ನು ಕನಿಷ್ಠ 5 ಮೀಟರ್‌ಗಳಿಗೆ ವಿಸ್ತರಿಸಬೇಕು. ನರೇಗಾ ಜಾಬ್‌ಕಾರ್ಡ್ ಹೊಂದಿರುವ ಪುರುಷ ಮತ್ತು ಮಹಿಳಾ ಕೃಷಿ ಕಾರ್ಮಿಕರಿಂದಲೇ ರಸ್ತೆಯ ಎರಡು ಬದಿ ಕಚ್ಚಾ ಗಟಾರು ನಿರ್ಮಿಸಿಇಕ್ಕೆಲಗಳಲ್ಲಿ ಸಸಿ ನೆಟ್ಟರೆ ನೆರಳಿನ ಜತೆಗೆ ಮಣ್ಣಿನ ಸವಕಳಿ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.
ರೈತರ ರಸ್ತೆಗಳನ್ನು ಸರ್ವಋತು ರಸ್ತೆಗಳನ್ನಾಗಿಸಿದರೆ ಕೈಗೆ ಬಂದಫಸಲನ್ನು ಸಕಾಲಿಕವಾಗಿ ಮಾರುಕಟ್ಟೆಗೆ ಮತ್ತು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ನೆರವಾಗುತ್ತದೆ. ಆದ್ದರಿಂದ, ಸರ್ಕಾರಮತ್ತು ಅ ಧಿಕಾರಿಗಳು ಈ ನಿಟ್ಟಿನಲ್ಲಿಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.
ವಸತಿ ಸಚಿವರಿಗೆ ಚಿಂಚಲಿ ಗ್ರಾಪಂ ಸದಸ್ಯರ ಮನವಿ :
ಮುಳಗುಂದ: ಚಿಂಚಲಿ ಗ್ರಾಪಂ ವ್ಯಾಪ್ತಿಯ ಬಡವರಿಗೆ ವಸತಿ ಯೋಜನೆಗಳಡಿ ಸಹಾಯಧನ ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರು ವಸತಿ ಸಚಿವ ವ್ಹಿ. ಸೋಮಣ್ಣ ಅವರಿಗೆಬೆಂಗಳೂರಿನ ಅವರ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಸಮೀಪದ ಚಿಂಚಲಿ ಗ್ರಾಪಂ ವ್ಯಾಪ್ತಿಯ ಚಿಂಚಲಿ, ಕಲ್ಲೂರ, ನೀಲಗುಂದ ಗ್ರಾಮಗಳಲ್ಲಿ ವಿವಿಧ ವಸತಿಯೋಜನೆಗಳಡಿ 2017 ರಿಂದ ಇಲ್ಲಿಯವರೆಗೆ ಶೇ.90 ಫಲಾನುಭವಿಗಳ ಸಹಾಯಧನ ಮಂಜೂರಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಬಡವರು ತೀವ್ರಕಷ್ಟ ಅನುಭವಿಸುತ್ತಿರುವ ಕಾರಣ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಯೋಜನೆ ಪೂರ್ಣಗೊಳಿಸಲು ಸೂಚಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವರಾಜ ರಾಮರಡ್ಡಿ, ಚಂದ್ರಶೇಖರ ಹರಿಜನ, ಎಂ.ವೈ. ಸಂದಕದ, ನಿಂಗರಡ್ಡಿ ತೇರಿನಗಡ್ಡಿ, ಬಸವರಾಜ ಪೂಜಾರ, ಗೌರಮ್ಮ ಕರಿಗಾರ, ಶಕುಂತಲಾ ಕೆಂಬಾವಿಮಠ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.