16ರಂದು ನರಗುಂದ ಬಂದ್‌ಗೆ ಕರೆ
Team Udayavani, Jul 7, 2019, 10:16 AM IST
ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಸತ್ಯಾಗ್ರಹದಲ್ಲಿ ರೈತ ಮಹಿಳೆ ಲಕ್ಷ್ಮಿ ಭಾಯಿ ಮಾನೆ ಮಾತನಾಡಿದರು.
ನರಗುಂದ: ಜೀವ ಜಲಕ್ಕಾಗಿ ನಡೆಸಿಕೊಂಡ ಬಂದ ಮಹದಾಯಿ ಹೋರಾಟ ನಾಲ್ಕು ವರ್ಷಗಳನ್ನು ಪೂರೈಸುತ್ತಿದ್ದರೂ ಇದುವರೆಗೆ ಸರ್ಕಾರಗಳ ಕಡೆಗಣನೆ ರೈತರನ್ನು ವಂಚಿಸುತ್ತಿದೆ. ಸರ್ಕಾರಗಳ ನಿರ್ಲಕ್ಸ್ಯ ಧೋರಣೆ ಖಂಡಿಸಿ ಜು.16ರಂದು ನರಗುಂದ ಬಂದ್ ಕರೆ ನೀಡಲಾಗಿದೆ. ಸಮಸ್ತ ರೈತ ಬಾಂಧವರು ಕೈಜೋಡಿಸಬೇಕು ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ ಹೇಳಿದರು.
ಶನಿವಾರ ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1449ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಕಳೆದ 4 ದಶಕಗಳಿಂದ ಯೋಜನೆ ವಿಷಯದಲ್ಲಿ ರೈತರ ಕಣ್ಣೊರೆಸುತ್ತಲೇ ಬಂದಿರುವ ಜನಪ್ರತಿನಿದಿಗಳು, ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ತಮ್ಮ ನಿರ್ಲಕ್ಸ್ಯ ಧೋರಣೆ ಮುಂದುವರೆಸಿದೆ. ಇದು ಸಮಸ್ತ ರೈತ ಕುಲದಲ್ಲಿ ಅಸಹನೆ ಮೂಡಿಸುತ್ತಿದೆ ಎಂದು ಫಕೀರಪ್ಪ ಜೋಗಣ್ಣವರ ಆಕ್ರೋಶ ವ್ಯಕ್ತಪಡಿಸಿದರು.
ಸತ್ಯಾಗ್ರಹ ನಿರತ ರೈತ ಮಹಿಳೆ ಲಕ್ಷ್ಮಿ ಭಾಯಿ ಮಾನೆ ಮಾತನಾಡಿ, ನೀರಿಗಾಗಿ ಇಷ್ಟು ವರ್ಷಗಳಿಂದ ಹೋರಾಟ ನಡೆಸುತ್ತ ಬಂದರೂ ಆಳುವ ಸರ್ಕಾರಗಳಿಗೆ ಇದರ ಕಾಳಜಿಯಿಲ್ಲ. ಇನ್ನಾದರೂ ಸರ್ಕಾರಗಳು ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸಿದರು. ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ, ಯಲ್ಲಪ್ಪ ಗುಡದರಿ, ಲಕ್ಷ ್ಮಣ ಮನೇನಕೊಪ್ಪ, ವೆಂಕಪ್ಪ ಹುಜರತ್ತಿ, ಹನಮಂತಪ್ಪ ಪಡೆಸೂರ, ಮಲ್ಲಪ್ಪ ಐನಾಪೂರ, ವಾಸು ಚವ್ಹಾಣ, ವೆಂಕಟೇಶ ಸಾಬಳೆ, ಈರಣ್ಣ ಗಡಗಿ, ಮಲ್ಲೇಶಪ್ಪ ಬಾಳಿಕಾಯಿ, ಹನುಮಂತ ಸರನಾಯ್ಕರ, ಹನುಮಂತ ಕೋರಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾಯಿ, ದೇವಕ್ಕ ತಾಳಿ, ಮಾಬೂಬಿ ಕೆರೂರ, ಚನ್ನವ್ವ ಕರ್ಜಗಿ ಸೇರಿ ಹೋರಾಟಗಾರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.