![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Oct 25, 2021, 7:34 PM IST
ಶಿರಹಟ್ಟಿ: ವೀರರಾಣಿ ಕಿತ್ತೂರು ಚನ್ನಮ್ಮಾಜಿ ಬ್ರಿಟಿಷರಿಂದ ದೇಶ ಸಂರಕ್ಷಣೆ ಮಾಡುವುದಕ್ಕಾಗಿ ಹೋರಾಟ ಮಾಡಿದ ಪ್ರಸಂಗ ತಿಳಿದುಕೊಂಡರೆ ಅವರಲ್ಲಿರುವ ಅಪ್ರತಿಮ ದೇಶಪ್ರೇಮ ಮೈ ರೋಮಾಂಚನಗೊಳಿಸುತ್ತದೆ. ಅವರ ದಿಟ್ಟತನ ನಮಗೆಲ್ಲ ಮಾದರಿ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಚನ್ನಮ್ಮಾಜಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶ ಕಟ್ಟುವುದು ಮತ್ತು ಅದರ ಸಂರಕ್ಷಣೆ ಮಾಡುವುದು ಸಾಮಾನ್ಯ ವಿಚಾರವಲ್ಲ. ದಿಟ್ಟ ಮಹಿಳೆಯಾಗಿದ್ದರಿಂದ ಕಿತ್ತೂರು ಸಾಮ್ರಾಜ್ಯ ಅಜರಾಮರವಾಗಲು ಸಾಧ್ಯವಾಯಿತು. ಅದರಂತೆ ಅಖಂಡತೆ ಎತ್ತಿ ಹಿಡಿದ ಸಾಮ್ರಾಜ್ಯದ ಆಸುಪಾಸು ಇದ್ದ ಬ್ರಿಟಿಷರನ್ನು ಹೊಡೆದೋಡಿಸಲು ಮಾಡಿದ ಹೋರಾಟ ಸ್ಮರಣೀಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜೆ.ಬಿ.ಮಜ್ಜಗಿ, ಪಪಂ ಅಧ್ಯಕ್ಷ ಪರಮೇಶ ಪರಬ, ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ತಾಪಂ ಇಒ ಡಾ|ನಿಂಗಪ್ಪ ಒಲೇಕಾರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಬಿ.ಹರ್ತಿ, ಬಿಇಒ ಆರ್.ಎಸ್. ಬುರಡಿ ಉಪಸ್ಥಿತರಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
You seem to have an Ad Blocker on.
To continue reading, please turn it off or whitelist Udayavani.