ರೈತರಿಗೆ ವರವಾದ ಚೆಕ್‌ ಡ್ಯಾಂ


Team Udayavani, Nov 10, 2018, 5:04 PM IST

10-november-23.gif

ರೋಣ: ಹಿಂಗಾರು ಮಳೆ ಅಲ್ಪಸ್ವಲ್ಪ ಸುರಿದ ಹಿನ್ನೆಲ್ಲೆಯಲ್ಲಿ ಅನ್ನದಾತರು ಭೂಮಿಗೆ ಬೀಜ ಬಿತ್ತಿದ್ದಾರೆ. ಆದರೆ ಇತ್ತ ಮಳೆ ಕೊರತೆಯಿಂದ ಬಿತ್ತಿದ ಬೀಜಗಳು ಒಣಗುತ್ತಿದ್ದವು. ಇದೇ ವೇಳೆ ಇಲ್ಲಿನ ಚೆಕ್‌ ಡ್ಯಾಂಗಳು ರೈತರ ಪಾಲಿಗೆ ವರದಾನವಾಗಿವೆ.

ಕರ್ನಾಟಕ ಸರ್ಕಾರದಿಂದ ಜಿಲ್ಲಾ ಪಂಚಾಯತ್‌ ಮುಖಾಂತರ ಪ್ರತಿ ಪಂಚಾಯತ್‌ ಮಟ್ಟದಲ್ಲಿನ ಹಳ್ಳ ಕೊಳ್ಳಗಳಿಗೆ ನಿರ್ಮಿಸುತ್ತಿರುವ ಆರ್ಚ್‌ ಚೆಕ್‌ ಡ್ಯಾಂಗಳು ಇತ್ತೀಚೆಗೆ ಸುರಿದ ಮಳೆಗೆ ತುಂಬಿವೆ. ರೈತರು ಇಲ್ಲಿ ಸಂಗ್ರಹವಾಗಿರುವ ನೀರನ್ನು ತಮ್ಮ ಹೊಲಗಳಲ್ಲಿ ಬಾಡುತ್ತಿರುವ ಬೆಳೆಗಳಿಗೆ ಹಾಯಿಸುವ ಮೂಲಕ ಇದರ ಲಾಭ ಪಡೆಯುತ್ತಿದ್ದಾರೆ. ಅಳಿದುಳಿದ ಬೆಳೆಗಳ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ತಾಲೂಕಿನ ಬೆಳವಣಕಿ ಗ್ರಾಪಂ ವ್ಯಾಪ್ತಿಯಲ್ಲಿನ ಬುಸಿಬುದ್ದಿ ಹಳಕ್ಕೆ 9 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಲ್ಟಿ ಆರ್ಚ್‌ ಆರ್‌ಸಿಸಿ ಚೆಕ್‌ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇದೇ ಗ್ರಾಮದ ರಾಜ್ಯ ಕೃಷಿಕ ಪ್ರಶಸ್ತಿ ಪುರಸ್ಕೃತ ಶರಣಪ್ಪ ಹದ್ಲಿಯವರ ಮಾರ್ಗದರ್ಶನದಲ್ಲಿ ರೈತರು ಕೃಷಿ ಇಲಾಖೆಯು ಕೃಷಿ ಹೊಂಡಗಳ ನಿರ್ಮಿಸಿಕೊಂಡ ರೈತರಿಗೆ ನೀಡುವ ಆಯಿಲ್‌ ಇಂಜಿನ್‌ ಮೂಲಕ ನೀರನ್ನು ಹನಿ ನೀರಾವರಿ ಮುಖಾಂತರ ಬೆಳೆಗಳಿಗೆ ಹಾಯಿಸತೊಡಗಿದ್ದಾರೆ. ತಾಲೂಕಿನ ಎಲ್ಲ ಭಾಗಗಳ ಚೆಕ್‌ ಡ್ಯಾಂಗಳಲ್ಲಿ ಸಂಗ್ರಹವಾದ ನೀರಿನ ಸದ್ಬಳಕೆಯಾಗುತ್ತಿದೆ.

ರೋಣದಲ್ಲಿ 216 ಚೆಕ್‌ ಡ್ಯಾಂಗೆ ಅನುಮೋದನೆ 
2017-18ನೇ ಸಾಲಿನಲ್ಲಿ ತಾಲೂಕಿನಲ್ಲಿ ಒಟ್ಟು 216 ಚೆಕ್‌ ಡ್ಯಾಂಗಳು ಅನುಮೋದನೆಯಾಗಿ ಬಂದಿದ್ದು, ಅದರಲ್ಲಿ ಈಗಾಗಲೇ 80 ಕಾಮಗಾರಿ ಮುಕ್ತಾಯವಾಗಿವೆ. ಇನ್ನು 41 ಪ್ರಗತಿಯಲ್ಲಿವೆ. 89 ಕಾಮಗಾರಿ ಪ್ರಾರಂಭಿಸಬೇಕಾಗಿದೆ. ತಕರಾರಿನಿಂದ ಐದು ಅರ್ಧಕ್ಕೆ ನಿಂತಿವೆ. ಈಗಾಗಲೇ ತಾಲೂಕಿನಾದ್ಯಂತ ನಿರ್ಮಿಸಿರುವ ಚೆಕ್‌ ಡ್ಯಾಂಗಳಲ್ಲಿ ಯಾವ ಯಾವ ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾಗಿ ಹಳ್ಳಕೊಳ್ಳ ತುಂಬಿ ಹರಿದಿವೆ. ಅಲ್ಲಿ ನೀರು ಸಂಪೂರ್ಣವಾಗಿ ತುಂಬಿವೆ ಎಂದು ಜಿಲ್ಲಾ ಪಂಚಾಯತ್‌ ರೋಣ ಉಪ ವಿಭಾಗದ ಮುಖ್ಯ ಅಭಿಯಂತರ ಎಸ್‌.ಎಸ್‌. ಕರಮಳ್ಳಿ ತಿಳಿಸಿದ್ದಾರೆ.

90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ
ತಾಲೂಕಿನಲ್ಲಿ ಹಿಂಗಾರು ಬೆಳೆಯಾಗಿ ಜೋಳ, ಕಡಲೆ, ಸೂರ್ಯಕಾಂತಿ, ಗೋಧಿ, ಕುಸುಬಿ ಇನ್ನಿತರ ಬೆಳೆ ಬೆಳೆಯಲಾಗಿದೆ. ಸುಮಾರು 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ, 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ, 5ರಿಂದ 7 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಸೂರ್ಯಕಾಂತಿ, ಸುಮಾರು ಮೂರು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋಧಿ, ಕುಸುಬಿ ಇತ್ಯಾದಿಗಳನ್ನು ಬೆಳೆಯಲಾಗಿದೆ.

ಸರ್ಕಾರ ರೈತರಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದೆ. ಆದರೆ ರೈತರು ಅವುಗಳನ್ನು ದುರುಪಯೋಗ ಮಾಡಿಕೊಳ್ಳದೆ ಸರಿಯಾಗಿ ಬಳಸಿಕೊಂಡರೆ ರೈತರು ಬರಗಾಲವನ್ನು ಸಹಜವಾಗಿ ಎದುರಿಸಬಹುದು. ಕೃಷಿ ಹೊಂಡಗಳಿರಲಿ, ಚೆಕ್‌ ಡ್ಯಾಂಗಳಿರಲಿ ಇವುಗಳ ಉದ್ದೇಶ ಜಲ ಸಂಪತ್ತನ್ನು ಸಂಗ್ರಹ ಮಾಡುವುದು. ಆದ್ದರಿಂದ ಇವುಗಳನ್ನು ನಿರ್ಮಿಸಿಕೊಳ್ಳುವುದರಿಂದ ಒಂದು ಜಲ ಸಂಪತ್ತನ್ನು ರಕ್ಷಣೆ ಮಾಡಿದಂತಾಗುತ್ತದೆ. ಇನ್ನೊಂದು ರೈತರಿಗೆ ಮಳೆ ಕೈಕೊಟ್ಟಾಗ ನೀರನ್ನು ಬೆಳೆಗಳಿಗೆ ಬಳಸಿಕೊಂಡತ್ತಾಗುತ್ತದೆ. ಆದ್ದರಿಂದ ರೈತರು ಇಂತಹ ಯೋಜನೆಗಳಿಗೆ ಒತ್ತನ್ನು ನೀಡಬೇಕು.
 ಶರಣಪ್ಪ ಹದ್ಲಿ, ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ 

„ಯಚ್ಚರಗೌಡ ಗೋವಿಂದಗೌಡ್ರ 

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.