ಶುದ್ಧ ಕುಡಿವ ನೀರಿನ ಯೋಜನೆ ಕಾಮಗಾರಿ ಸ್ಥಗಿತ
Team Udayavani, Apr 12, 2021, 3:32 PM IST
ಮುಂಡರಗಿ: ಪಟ್ಟಣದ ಜನರಿಗೆ ನಿರಂತರವಾಗಿ24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವಯೋಜನೆ ಕಾಮಗಾರಿ ಕಳೆದ ಮೂರುವರ್ಷಗಳಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡಿದೆ.ಇದರಿಂದ ಪಟ್ಟಣ ವ್ಯಾಪ್ತಿಯ ಸುಮಾರು 25ಸಾವಿರ ಜನರು ನಿರಂತರ ಕುಡಿಯುವ ನೀರು ಸಿಗದೇ ಪರದಾಡುವಂತಾಗಿದೆ.
ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಜನರು ಶುದ್ಧ ಕುಡಿಯುವ ನೀರುಯೋಜನೆಯಿಂದ ವಂಚಿತ ವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿರುವಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಣೆ ಇಲ್ಲದೇ ಇರುವುದರಿಂದಶುದ್ಧ ಕುಡಿಯುವ ನೀರು ಕುಡಿಯಲುಯೋಗ್ಯವೋ ಅಲ್ಲವೋ ಎಂದು ಜನರು ಪ್ರಶ್ನಿಸುವಂತಾಗಿದೆ.
17.26 ಕೋಟಿ ರೂ. ಕಾಮಗಾರಿ: ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತುಹಣಕಾಸು ಮಂಡಳಿಯಡಿ 17.43 ಕೋಟಿವೆಚ್ಚದಲ್ಲಿ ಪುರಸಭೆ ವ್ಯಾಪ್ತಿಯ ಜನರಿಗೆ 24ಗಂಟೆ ನಿರಂತರವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ಕಾಮಗಾರಿ 2018ರ ಫೆಬ್ರವರಿಯಲ್ಲಿಆರಂಭವಾಗಿ ಸ್ಥಗಿತಗೊಂಡಿದೆ. ಮೇಲ್ಮಟ್ಟದಜಲಸಂಗ್ರಹಾಗಾರದ ಕಾಮಗಾರಿಗೆ ಕಾಲಂಹಾಕಿರುವುದು ಮತ್ತು ಪಟ್ಟಣದ ವಾರ್ಡ್‌ಗಳಲ್ಲಿ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಹಾಕಿದ್ದು ಬಿಟ್ಟರೆ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಇಲ್ಲವಾಗಿದೆ.
23 ವಾರ್ಡ್‌ಗಳಿಗೆ ಶುದ್ಧ ನೀರು: ಪಟ್ಟಣದ 23 ವಾರ್ಡ್‌ಗಳಲ್ಲಿರುವ ಮನೆಗಳ 5509ನಲ್ಲಿಗಳಿಗೆ ನಿರಂತರವಾಗಿ ದಿನದ 24 ಗಂಟೆ ಶುದ್ಧಕುಡಿಯುವ ನೀರು ಒದಗಿಸುವ ಈ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ವಾರ್ಡ್‌ನಲ್ಲಿ ನೀರುಸರಬರಾಜು ಮಾಡಲು ಅಂದಾಜು 121 ಕಿಮೀಪೈಪ್‌ಲೈನ್ ಕಾಮಗಾರಿ ಪೂರ್ಣವಾಗಬೇಕಿದೆ.ಆದರೆ, ಈಗ ಬರೀ 69 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಪೈಪ್‌ಲೈನ್ ಕಾಮಗಾರಿ ನಡೆದಿದೆ ಎನ್ನಲಾಗುತ್ತಿದೆ. ಅಂದರೆ, ಶೇ. 50ರಷ್ಟು ಪೈಪ್‌ಲೈನ್ ಕಾಮಗಾರಿ ಇನ್ನೂ ಬಾಕಿ ಉಳಿದಿದೆ. ಮೇಲ್ಮಟ್ಟದ ಜಲ ಸಂಗ್ರಹಾಗಾರ(ಟ್ಯಾಂಕ್)ದ ಕಾಮಗಾರಿ ನೆಲ ಬಿಟ್ಟು ಮೇಲಕ್ಕೆ ಏಳುತ್ತಿಲ್ಲ.
ಪಟ್ಟಣದ ಜನತೆಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಯ ಕಾಮಗಾರಿ ಸ್ಥಗಿತಗೊಂಡಿದ್ದು,ಜಲ ಸಂಗ್ರಹಾಗಾರದ ಕಾಲಮ್‌ಗಳು ಕಾಣುತ್ತಿವೆ.ಪಟ್ಟಣದ ಜನರು ಇನ್ನೆಷ್ಟು ದಿನ ಶುದ್ಧ ಕುಡಿಯುವ ನೀರಿಗೆ ಕಾಯಬೇಕೋ ಎನ್ನುವಂತಾಗಿದೆ.
ಕಾಮಗಾರಿ ನಡೆಸುತ್ತಿರುವ ಖಾಸಗಿ ಕಂಪನಿಗೆಈಗಾಗಲೇ ನಾಲ್ಕೈದು ನೋಟಿಸ್‌ಗಳನ್ನು ನೀಡಲಾಗಿದೆ. ವಿಳಂಬದಕುರಿತು ಯಾವದೇ ಸ್ಪಷ್ಟಕಾರಣವನ್ನು ಕಂಪನಿ ನೀಡುತ್ತಿಲ್ಲ. –ಸಂತೋಷ ಕುಮಾರ ಎಸ್., ಕಾಮಗಾರಿ ಮೇಲುಸ್ತುವಾರಿ ಅಧಿಕಾರಿ
ನಿರಂತರವಾಗಿ ಶುದ್ಧ ಕುಡಿಯುವ ನೀರುಯೋಜನೆ ಕರ್ನಾಟಕ ನಗರ ಮೂಲಭೂತಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದಮೇಲುಸ್ತುವಾರಿಯಲ್ಲಿ ಕಾಮಗಾರಿ ನಡೆಯುತ್ತಿದೆ.ಕಾಮಗಾರಿ ವಿಳಂಬದ ಬಗ್ಗೆ ನೋಟೀಸ್ ನೀಡಿದ್ದರೂ,ಕಾಮಗಾರಿ ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಸ್ಪಂದಿಸುತ್ತಿಲ್ಲ.–ವೀರೇಂದ್ರಸಿಂಗ್ ಕಾಟೇವಾಲೆ, ಪುರಸಭೆ ಅಭಿಯಂತರ
ಕಾಮಗಾರಿಗೆ ಸಂಬಂಧಿಸಿ ಈಗಾಗಲೇ ಮೂರು ಸಭೆಗಳು ನಡೆದಿವೆ. ಕಾಮಗಾರಿ ಪೂರ್ಣಗೊಳಿಸಲು ನೋಟಿಸ್ ಕೂಡಾ ನೀಡಲಾಗಿದೆ. ಹೈದರಾಬಾದಿನ ಖಾಸಗಿ ಕಂಪನಿ ಕಾಮಗಾರಿ ನಿರ್ವಹಿಸುತ್ತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಲು ವಿಳಂಬ ಮಾಡುತ್ತಿದೆ. –ಎನ್.ಕೆ. ಡೊಂಬರ, ಪುರಸಭೆ ಮುಖ್ಯಾಧಿಕಾರಿ
– ಹು.ಬಾ. ವಡ್ಡಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.