ತೈಲ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ
ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ "ಕೈ' ಮುಖಂಡರು |ಪದೇ ಪದೇ ಬೆಲೆ ಏರಿಕೆಗೆ ಆಕ್ರೋಶ
Team Udayavani, Jun 15, 2021, 9:07 PM IST
ಗಜೇಂದ್ರಗಡ: ಜನ ವಿರೋಧಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶವನ್ನು ಅಧೋಗತಿಗೆ ತಳ್ಳುತ್ತಿದೆ. ಈ ನಿಟ್ಟಿನಲ್ಲಿ ತೈಲ ಬೆಲೆ ಇಳಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ ಎಚ್ಚರಿಕೆ ನೀಡಿದರು.
ಸೂಡಿ ಗ್ರಾಪಂ ಕಾರ್ಯಾಲಯ ಎದುರು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುತ್ತಿಲ್ಲ. ಬೆಲೆ ಏರಿಕೆಯಿಂದ ಬೆಂದಿರುವ ಬಡವರು, ಕೂಲಿ ಕಾರ್ಮಿಕರು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಬೆಂಬಲಿಸಲು ಸಂಘಟಿತರಾಗಿದ್ದಾರೆ. ಕಾಂಗ್ರೆಸ್ ಸಂಘಟನಾ ಶಕ್ತಿಯೇ ಬಿಜಿಪಿ ಸರ್ಕಾರದ ಪಥನಕ್ಕೆ ಅಂಕುಶ ಹಾಕಲಿದೆ ಎಂದರು.
ಈ ವೇಳೆ ಶಿವಕುಮಾರ ಪಟ್ಟಣಶೆಟ್ಟರ, ನಿಂಗಪ್ಪ ಕಾಶಪ್ಪನವರ, ಗ್ರಾಪಂ ಅಧ್ಯಕ್ಷೆ ಹುಲಿಗೆವ್ವ ಕಡಬಿನ, ಉಪಾಧ್ಯಕ್ಷೆ ಗಂಗವ್ವ ಗೊರವರ, ಶರೀಫ್ ಡಾಲಾಯತ್, ರಾಘವೇಂದ್ರ ಕುಲಕರ್ಣಿ, ಮಹಾಂತೇಶ ಸೂಡಿ, ಹುಸೇನಸಾಬ ಬೆಳ್ಳಟ್ಟಿ, ಮಲ್ಲಯ್ಯ ಮಲಕಸಮುದ್ರಮಠ, ಸಂಗಪ್ಪ ಕುಂಬಾರ, ಭೀರಪ್ಪ ಮಾರನಬಸರಿ, ಪ್ರಕಾಶ ಕುಸಬದ, ಶ್ರೀಕಾಂತ್ ಬಾರಕೇರ, ಬಸವರಾಜ ಕಡಬಿನ, ರಮೇಶ ಕಡಬಿನ ಇದ್ದರು. ರಾಜೂರ ಗ್ರಾಮ: ರಾಜೂರ ಗ್ರಾಮದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟಿಸಲಾಯಿತು. ಗ್ರಾಮದ ಬಸ್ ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಗಜೇಂದ್ರಗಡ ಹೊರ ವಲಯದ ಪೆಟ್ರೋಲ್ ಬಂಕ್ ಎದುರು ಸಮಾವೇಶಗೊಂಡಿತು.
ಈ ವೇಳೆ ತಾಪಂ ಉಪಾಧ್ಯಕ್ಷ ಶಶಿಧರ ಹೂಗಾರ, ವಿ.ಬಿ. ಹಪ್ಪಳದ, ಮುತ್ತಣ್ಣ ತಳವಾರ, ಸುರೇಶಗೌಡ ಪಾಟೀಲ, ಲಲಿತಾ ಕೆಂಪನಾಳ, ಕಳಕಪ್ಪ ಚಿಲಝರಿ, ಶರಣಪ್ಪ ಹಾದಿಮನಿ, ಅಲ್ಲಾಸಾಬ ಮುಜಾವರ, ರವಿ ತಳವಾರ, ಯಲ್ಲಪ್ಪ ಕನ್ಯಾಳ, ರಾಜು ನದಾಫ್, ಯಲ್ಲಪ್ಪ ತಳವಾರ, ಶೇಖಪ್ಪ ಮಳಗಿ ಇದ್ದರು. ನಿಡಗುಂದಿ: ನಿಡಗುಂದಿ ಗ್ರಾಪಂ ಕಚೇರಿ ಎದುರು ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷ ಶಿವಣ್ಣ ಸೂಡಿ, ಎಚ್.ಎಸ್. ಸೂಂಪೂರ, ಅಶೋಕ್ ಬೇವಿನಕಟ್ಟಿ, ಫಕೀರಪ್ಪ ಕೂಕನೂರ, ಅಂದಪ್ಪ ಬಿಚ್ಚಾರ, ಬಾಬು ಮುಲ್ಲಾ, ರಮೇಶ ಶೇಬಗೊಂಡ, ಅಂದಪ್ಪ ಚಲವಾದಿ, ಈರಪ್ಪ ಬಿಚ್ಚಾರ, ನಬೀಸಾಬ ಕೊಟೇಕಲ್, ಶಶಿಧರ ಹೊಟ್ಟಿನ, ಶಿವಣ್ಣ ಸೊಬಗಿನ, ಬಸಪ್ಪ ಅಣಗೌಡ್ರ ಇದ್ದರು.
ಲಕ್ಕಲಕಟ್ಟಿ: ಲಕ್ಕಲಕಟ್ಟಿ ಗ್ರಾಪಂ ಕಾರ್ಯಾಲಯ ಎದುರು ಕಾಂಗ್ರೆಸ್ ನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು. ಬಸವರಾಜ ಬೆನಕನವಾರಿ, ಅಶೋಕ ಜಿಗಳೂರ, ನಿಂಗಪ್ಪ ಹಂಡಿ, ಬಸವರಾಜ ಬೂದಿಹಾಳ, ಮುತ್ತಪ್ಪ ಅಕ್ಕರಗಲ್ಲ, ಹನುಮಂತಪ್ಪ ಮಾದರ, ಉಮೇಶ ರಾಠೊಡ, ರಾಮಲಿಂಗಪ್ಪ ಬೆನಕನವಾರಿ, ಅನೀಲ ಕರ್ಣೆ, ಉಮೇಶ ಭಗವತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.