ಪೇರಲ ಆದಾಯಕ್ಕೆ ಕೋವಿಡ್ ಕೊಕ್ಕೆ

ಫಸಲು ಕೈಗೆಟುಕುವಾಗಲೇ ಕೊರೊನಾ ಕಂಟಕ ! ಎರಡು ವರ್ಷದಿಂದ ತಪ್ಪದ ನಷ್ಟ

Team Udayavani, May 24, 2021, 7:45 PM IST

21nrd1

ವರದಿ : ಸಿದ್ಧಲಿಂಗಯ್ಯ ಮಣ್ಣೂರಮಠ

ನರಗುಂದ: ಸಮೃದ್ಧವಾಗಿ ಬೆಳೆದು ನಿಂತ ಫಸಲು.. ಗಿಡದ ತುಂಬೆಲ್ಲ ಕಾಯಿಗಳು.. ಆದರೂ ರೈತನಿಗಿಲ್ಲ ಹರ್ಷ…ಕಾರಣ ಬೆಳೆದ ಪೇರಲ ಹಣ್ಣುಗಳ ಮಾರಾಟಕ್ಕೆ ಆವರಿಸಿದೆ ಕೊರೊನಾ ಕರಿನೆರಳು. ಹೀಗಾಗಿ ಪೇರಲ ಬೆಳೆಗಾರ ಕಣ್ಣೀರು ಸುರಿಸುವಂತಾಗಿದೆ!. ಇದು ತಾಲೂಕಿನ ಕುರ್ಲಗೇರಿ ಗ್ರಾಮದ ಮಹದಾಯಿ ಹೋರಾಟಗಾರ, ರೈತ ಯಲ್ಲಪ್ಪ ಚಲವಣ್ಣವರ ಗೋಳು.

ದೇಶದ ಜನರ ಬದುಕನ್ನೇ ಕಿತ್ತುಕೊಂಡ ಕೊರೊನಾ ಮಹಾಮಾರಿ ರೈತರ ಕೃಷಿ ಚಟುವಟಿಕೆಗೆ ಮಾತ್ರವಲ್ಲದೇ ರೈತನ ತುತ್ತಿನ ಅನ್ನಕ್ಕೂ ಕುತ್ತು ತಂದೊಡ್ಡಿದೆ.

ಒಂದು ಎಕರೆ ಪೇರಲ: ಯಲ್ಲಪ್ಪ ಚಲವಣ್ಣವರ ಗ್ರಾಮದ ಗದಗ ಒಳರಸ್ತೆಗೆ ಹೊಂದಿಕೊಂಡ ಒಂದೇ ಎಕರೆ ಜಮೀನಿನಲ್ಲಿ ಸರ್ಕಾರದ ಸಹಾಯಧನದಲ್ಲಿ ಪೇರಲ ಬೆಳೆದಿದ್ದಾರೆ. ಪೇರಲ ಸಸಿಗಳು ನಾಲ್ಕನೇ ವರ್ಷ ಅವಧಿಯಲ್ಲಿವೆ. ಬೆಣ್ಣಿ ಹಳ್ಳದಿಂದ ಪೈಪ್‌ಲೈನ್‌ನಿಂದ ನೀರಿನ ವ್ಯವಸ್ಥೆಯಿದೆ. ಕೃಷಿ ಹೊಂಡವೂ ಬೆಳೆಗೆ ಸಹಕಾರಿಯಾಗಿದೆ.

ಕೇಳ್ಳೋರಿಲ್ಲ ಪೇರಲ!: ಪೇರಲ ಸಮೃದ್ಧವಾಗಿ ಬೆಳೆದು ನಿಂತಿದ್ದರೂ ಫಲ ರೈತನಿಗೆ ದೊರಕುತ್ತಿಲ್ಲ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿ ರೈತ ಯಲ್ಲಪ್ಪನ ಪೇರಲ ಹಣ್ಣುಗಳ ಮಾರಾಟಕ್ಕೂ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಪರಿಣಾಮ ಕಾಣದ ವೈರಸ್‌ ರೈತನ ಅನ್ನವನ್ನೇ ಕಸಿದಿದೆ.

ಸಾವಯವ ಬಳಕೆ: ರಾಸಾಯನಿಕ ಗೊಬ್ಬರದ ಮೊರೆ ಹೋಗದ ರೈತ ಯಲ್ಲಪ್ಪ ಪೇರಲ ಗಿಡಗಳಿಗೆ ತಮ್ಮ ಕೊಟ್ಟಿಗೆಯಿಂದ ಸಂಗ್ರಹಿಸಿದ ಸಗಣಿ ಗೊಬ್ಬರವನ್ನೇ ಬಳಸಿ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ. ಪೇರಲ ನಾಟಿ ಮಾಡಿದ ಮೇಲೆ 2 ವರ್ಷದ ಬಳಿಕ ಅದರ ಫಸಲು ರೈತನಿಗೆ ದೊರಕುತ್ತದೆ. ಕಳೆದ ವರ್ಷ ಮಾರ್ಚ್‌ ವೇಳೆಗೆ ಪೇರಲ ಮಾರಾಟಕ್ಕೆ ಸಜ್ಜಾಗುವ ವೇಳೆಗೆ ಕೊರೊನಾ ವಕ್ಕರಿಸಿ ರೈತನಿಗೆ ಅದರ ಫಲ ದೊರಕಲಿಲ್ಲ. ಈ ವರ್ಷ ಮಾರ್ಚ್‌ ಪೂರ್ವದಲ್ಲಿ ಒಂದಷ್ಟು ಪೇರಲ ಮಾರಾಟ ಮಾಡಿದ ರೈತನಿಗೆ ಮತ್ತೆ ಕೊರೊನಾ ಎರಡನೇ ಅಲೆ ಆದಾಯವನ್ನೇ ಕಿತ್ತುಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಪೇರಲ ಮಾರಾಟಕ್ಕೆ ಸಜ್ಜಾಗಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ ಪರಿಣಾಮ ಪೇರಲ ಕೇಳುವವರೇ ಇಲ್ಲದಂತಾಗಿದೆ.

ವರ್ಷಕ್ಕೆ 15ರಿಂದ 20 ಸಾವಿರ ಖರ್ಚು ಮಾಡಿದ್ದು, ಈ ವರ್ಷವೂ 50 ಸಾವಿರ ರೂ.ನಷ್ಟು ನಷ್ಟ ರೈತ ಅನುಭವಿಸುವಂತಾಗಿದೆ. ಪೇರಲ ತೋಟದಲ್ಲಿ ಮಿಶ್ರ ಬೆಳೆಗೆ ಒತ್ತುಕೊಟ್ಟ ಯಲ್ಲಪ್ಪ ಚಲವಣ್ಣವರ 176 ಪೇರಲ ಗಿಡಗಳ ಮಧ್ಯೆ ಬದನೆ, ಪಪ್ಪಾಯಿ, ಕರಿಬೇವು ಬೆಳೆದಿದ್ದಾರೆ. ಒಟ್ಟಾರೆ ರೈತನ ಪೇರಲ ಮಾರಾಟಕ್ಕೆ ಕೊರೊನಾ ಕರಿನೆರಳು ಆವರಿಸಿದ್ದು, ರೈತ ನಷ್ಟ ಎದುರಿಸುವಂತಾಗಿದೆ.

ಟಾಪ್ ನ್ಯೂಸ್

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

RSS: ಮೋಹನ್‌ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್‌ ಪತ್ರಿಕೆ ಆಕ್ಷೇಪ

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್‌ ಮಾತು

Cong-ind-Map

Controversy: ಕಾಂಗ್ರೆಸ್‌ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್

Kambala: ಡಿ.28-29ರಂದು 8ನೇ ವರ್ಷದ “ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.