ಶಿಕ್ಷಕರಿಗೆ ಕೋವಿಡ್-ಪೋಷಕರ ಆತಂಕ
ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯ 11 ಬೋಧಕರಲ್ಲಿ ಸೋಂಕು ಪತ್ತೆ
Team Udayavani, Jan 3, 2021, 3:21 PM IST
ಗದಗ: ಪರಿಷ್ಕೃತ ವಿದ್ಯಾಗಮ ಯೋಜನೆಯಡಿ ಶಾಲೆಗಳು ಆರಂಭಗೊಂಡ ಬೆನ್ನಲ್ಲೇ ಜಿಲ್ಲೆಯ 11 ಶಿಕ್ಷಕರಲ್ಲಿ ಕೋವಿಡ್-19 ಸೋಂಕುದೃಢಪಟ್ಟಿದೆ. ಶಾಲೆಗಳೊಂದಿಗೆ ಆರಂಭಗೊಂಡಿರುವ ಪದವಿ ಪೂರ್ವಕಾಲೇಜುಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲದಿರುವುದು ಮತ್ತುಕೆಲ ಶಾಲಾ ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿರುವುದು ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ರಾಜ್ಯ ಸರಕಾರದ ಸೂಚನೆಯಂತೆ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ, ಶುಕ್ರವಾರದಿಂದ ಜಿಲ್ಲೆಯಲ್ಲಿ 9 ರಿಂದ 12ನೇ ತರಗತಿ ವರೆಗೆ ಎಲ್ಲಶಾಲಾ-ಕಾಲೇಜುಗಳು ಪ್ರಾರಂಭಗೊಂಡಿವೆ. ಜ.1ರಿಂದ ಎಲ್ಲ ಶಾಲೆ, ಕಾಲೇಜುಗಳು ಕಾರ್ಯಾರಂಭಿಸಿದ್ದು,ಮಕ್ಕಳು ಕೂಡಾ ಸಂಭ್ರಮದಿಂದ ಹಾಜರಾಗುತ್ತಿದ್ದಾರೆ.ಈ ನಡುವೆ ಕೆಲ ಖಾಸಗಿ ಶಾಲೆಗಳ ಶಿಕ್ಷಕರಲ್ಲಿ ಕೋವಿಡ್ ಸೋಂಕು ಕಂಡು ಬಂದಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ 11ಶಿಕ್ಷಕರಿಗೆ ಸೋಂಕು: ವಿದ್ಯಾಗಮ ಪರಿಷ್ಕರಿಸಿ ಶಾಲಾ ಆವರಣದಲ್ಲೇ ತರಗತಿಗಳನ್ನುನಡೆಸುವ ಸರಕಾರದ ನಿರ್ಧಾರವನ್ನು ಸಾರ್ವಜನಿಕರುಸ್ವಾಗತಿಸಿದ್ದಾರೆ. ಹೀಗಾಗಿ, ಜ. 1ರಂದು ಜಿಲ್ಲೆಯಲ್ಲಿ19 ಸಾವಿರ, ಜ.2 ರಂದು ಅಷ್ಟೇ ಸಂಖ್ಯೆಯ ಮಕ್ಕಳುಹಾಜರಾಗಿದ್ದಾರೆ. ಶಾಲಾ ಪುನಾರಂಭದ ಹಿನ್ನೆಲೆಯಲ್ಲಿಮುಂಜಾಗ್ರತಾ ಕ್ರಮವಾಗಿ ಶಿಕ್ಷಕರಿಗೆ ಕೋವಿಡ್‌ಪರೀಕ್ಷೆ ನಡೆಸಿದ್ದರಿಂದ ಜಿಲ್ಲೆಯ 11 ಶಿಕ್ಷಕರಿಗೆ ಸೋಂಕು ಪತ್ತೆಯಾಗಿದೆ.
ಬೆಟಗೇರಿಯ ಲೋಯಲಾ ಪ್ರಾಥಮಿಕ ಶಾಲೆಯ 5, ಬೆಟಗೇರಿಯ ಲೋಯಲಾ ಪ್ರೌಢಶಾಲೆ, ಬೆಟಗೇರಿಸೇಂಟ್‌ಜಾನ್ ಕನ್ನಡ ಪ್ರಾಥಮಿಕ ಶಾಲೆ, ಗದಗಿನಸಿ.ಎಸ್.ಪಾಟೀಲ ಪ್ರೌಢಶಾಲೆ, ಗದಗಿನ ಮಾರಲ್‌ಪ್ರಾಥಮಿಕ ಶಾಲೆ ಹಾಗೂ ನರಗುಂದ ತಾಲೂಕಿನಜಗಾಪುರ ಸರಕಾರಿ ಪ್ರೌಢಶಾಲೆಯ ತಲಾ ಒಬ್ಬರುಶಿಕ್ಷಕರಿಗೆ ಕೋವಿಡ್ ಪತ್ತೆಯಾಗಿದೆ. ಈ ಪೈಕಿ ಜ.1ರಂದು 9 ಹಾಗೂ ಜ. 2ರಂದು ಒಬ್ಬರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
ಕೋವಿಡ್ ಕಂಡು ಬಂದಿರುವ ಶಿಕ್ಷಕರ ಶಾಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ 7 ದಿನಗಳ ಕಾಲ ರಜೆಘೋಷಿಸಿಸಲಾಗಿದೆ. ಆ ಪೈಕಿ ಯಾವುದೇ ಶಿಕ್ಷಕರಿಗೆಕೋವಿಡ್-19ರ ಲಕ್ಷಣಗಳಿಲ್ಲದ್ದರಿಂದ ಅವರನ್ನುಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಜೊತೆಗೆಪ್ರಾಥಮಿಕ ಸಂಪರ್ಕದಲ್ಲಿರುವ ಕುಟುಂಬಸ್ಥರು ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿರುವುದು ಆತಂಕ ಸೃಷ್ಟಿಸಿದೆ.
ಈ ಪೈಕಿ ಬಹುತೇಕ ಶಿಕ್ಷಕಿಯರು ವಿವಿಧ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ನರ್ಸ್(ದಾದಿಯರು) ಗಳಾಗಿದ್ದಾರೆ. ಇತ್ತೀಚೆಗೆ ನಡೆದ ಹಬ್ಬದ ಸಂಭ್ರಮದಲ್ಲಿಸಾಕಷ್ಟು ಜನರೊಂದಿಗೆ ಬೆರೆತಿರುವುದು, ಗೋವಾ,ಮಂಗಳೂರು ಪ್ರಯಾಣದಿಂದಾಗಿ ಸೋಂಕು ಹರಡಿರುವ ಸಾಧ್ಯತೆಗಳಿವೆ. ಅಲ್ಲದೇ, ಕೆಲ ಶಿಕ್ಷಕರಿಗೆಸೋಂಕು ಖಚಿತವಾಗಿರುವ ಸುದ್ದಿ ಹರಡುತ್ತಿದ್ದಂತೆಕೆಲ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಕ್ಷೀಣಿಸಿತ್ತು ಎನ್ನಲಾಗಿದೆ.
ಪ.ಪೂ.ಉಪನ್ಯಾಸಕರಿಗಿಲ್ಲ ಕೋವಿಡ್ ಪರೀಕ್ಷೆ:ಕಳೆದ ತಿಂಗಳು ಆರಂಭಗೊಂಡ ಪದವಿ ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿತ್ತು.ಇದೀಗ ಪುನಾರಂಭಗೊಂಡಿರುವ ವಿದ್ಯಾಗಮಕ್ಕೆ ಶಿಕ್ಷಕರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ಸರಕಾರ, ಈ ನಿಯಮದಿಂದ ಪ.ಪೂ. ಕಾಲೇಜು ಉಪನ್ಯಾಸಕರನ್ನು ಹೊರಗಿಟ್ಟಿರುವುದು ಕುತೂಹಲ ಮೂಡಿಸಿದೆ.
ಜಿಲ್ಲೆಯಲ್ಲಿ 27 ಸರಕಾರಿ, 27 ಅನುದಾನಿ ಹಾಗೂ 35 ಕ್ಕೂ ಹೆಚ್ಚು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ 500ಕ್ಕೂ ಹೆಚ್ಚು ಉಪನ್ಯಾಸಕರು ಬೋಧಿಸುತ್ತಿದ್ದು, ಅವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯವಿಲ್ಲ. ಆದರೆ, ಕಾಲೇಜಿಗೆ ಹಾಜರಾಗುವವಿದ್ಯಾರ್ಥಿಗಳು ಮಾತ್ರ ಪೋಷಕರ ಒಪ್ಪಿಗೆ ಪತ್ರ ಸಲ್ಲಿಕೆಕಡ್ಡಾಯಗೊಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಹೀಗಾಗಿ, ಕಳೆದ ಎರಡು ದಿನಗಳಿಂದ ಶೇ.38 ರಷ್ಟು ಮಾತ್ರ ವಿದ್ಯಾರ್ಥಿಗಳ ಹಾಜರಾತಿ ದಾಖಲಾಗಿದೆ. ಅಲ್ಲದೇ,ಪದವಿ ಪೂರ್ವ ಹಂತದಲ್ಲೂ ಎಲ್ಲ ಉಪನ್ಯಾಸಕರುಹಾಗೂ ವಿದ್ಯಾರ್ಥಿಗಳಿಗೂ ಮುಂಜಾಗ್ರತಾ ಕ್ರಮವಾಗಿಕೋವಿಡ್ ಪರೀಕ್ಷೆ ನಡೆಸುವುದು ಸೂಕ್ತ ಎಂಬುದು ಪೋಷಕರ ಅಭಿಪ್ರಾಯ.
ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 11 ಶಿಕ್ಷಕರಿಗೆ ಕೋವಿಡ್ ಸೋಂಕು ಕಂಡು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆಯಾ ಶಾಲೆಗಳಿಗೆ 7 ದಿನ ರಜೆ ನೀಡಿದ್ದೇವೆ. ಈ ಹಂತದಲ್ಲಿ ಯಾವುದೇ ವಿದ್ಯಾರ್ಥಿಗಳೊಂದಿಗೆ ಸಂಪರ್ಕಕ್ಕೆ ಬಂದಿಲ್ಲ. ಆದರೂ, ಅವರೊಂದಿಗೆ ಪ್ರಾಥಮ ಸಂಪರ್ಕಿತರನ್ನು ಗುರುತಿಸಿ, ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. – ಜಿ.ಎಂ.ಬಸವಲಿಂಗಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ.
ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿಲ್ಲ. ಆದರೂ, ಸ್ವಯಂ ಪ್ರೇರಣೆಯಿಂದ ಪರೀಕ್ಷೆಗೆ ಒಳಪಡುವಂತೆ ಉಪನ್ಯಾಸಕರಿಗೆ ಮೌಖೀಕ ನಿರ್ದೇಶನ ನೀಡಿದ್ದೇವೆ. ಈ ವರೆಗೆ ಜಿಲ್ಲೆಯ ಉಪನ್ಯಾಸಕರಿಗೆ ಕೋವಿಡ್ ದೃಢಪಟ್ಟಿರುವ ಬಗ್ಗೆ ಮಾಹಿತಿ ಬಂದಿಲ್ಲ. – ಸಿ.ಜಯಪ್ಪ, ಉಪನಿರ್ದೇಶಕ, ಪದವಿ ಪೂರ್ವ ಶಿಕ್ಷಣ ಇಲಾಖೆ
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.