ದಲಿತರ ಕಾಲೋನಿ ಹದಗೆಟ್ಟ ರಸ್ತೆ ದುರಸ್ತಿಗೆ ಆಗ್ರಹ
Team Udayavani, Dec 3, 2019, 5:22 PM IST
ರೋಣ: ಗ್ರಾಮದಲ್ಲಿನ ದಲಿತರ ಕಾಲೋನಿಯ ಸಿಸಿ ರಸ್ತೆ ಹಾಗೂ ವಿವಿಧ ಭಾಗದ ರಸ್ತೆಗಳು ಹಾಳಾಗಿದ್ದು, ಸಮರ್ಪಕ ರಸ್ತೆ ನಿರ್ಮಿಸುವಲ್ಲಿ ನಿರ್ಲಕ್ಷ ತೋರುತ್ತಿರುವ ಅಧಿಕಾರಿಗಳ ಕ್ರಮಖಂಡಿಸಿ ಕೊತಬಾಳ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯಹನುಮಂತ ನಾಗರಾಜ ಮಾತನಾಡಿ, ಗ್ರಾಮದ ದಲಿತರ ಕಾಲೋನಿಯ ಮುಖ್ಯ ರಸ್ತೆ ಹಾಗೂ ವಿವಿಧ ವಾರ್ಡ್‌ಗಳ ರಸ್ತೆಗಳಲ್ಲಿದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿದ್ದು,ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆಪ್ರತಿನಿತ್ಯ ಈ ರಸ್ತೆಗಳಲ್ಲಿ ಸಂಚರಿಸಲು ತೊಂದರೆ ಉಂಟಾಗುತ್ತಿದೆ. ಸಮರ್ಪಕ ರಸ್ತೆನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಇದುವರೆಗೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಸಮರ್ಪಕ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದರು.
ಕಳೆದ ಹಲವು ದಿನಗಳಿಂದ ಹೊನ್ನಿಗನೂರು, ತಳ್ಳಿಹಾಳ, ಗುಳಗುಳಿ ಸೇರಿದಂತೆ ವಿವಿಧಗ್ರಾಮಗ ಮರಳಿನ ವಾಹನಗಳು ಕೊತಬಾಳಮಾರ್ಗವಾಗಿ ಸಂಚರಿಸುತ್ತಿರುವುದರಿಂದ ರಸ್ತೆಯೂ ಸಂಪೂರ್ಣ ಹದಗೆಟ್ಟಿದೆ. ನಿಯಮವನ್ನು ಮೀರಿ ಓವರ್ ಲೋಡ್ ಮರಳು ತುಂಬಿಕೊಂಡ ಟ್ರಾಕ್ಟರ್ ಹಾಗೂ ಟಿಪ್ಪರ್‌ಗಳ ಸಂಚಾರದಿಂದಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಸದ್ಯಮಳೆ ಆಗುತ್ತಿರುವುದುರಿಂದ ಗುಂಡಿಗಳಲ್ಲಿ ನೀರು ತುಂಬಿಕೊಂಡು ಸುತ್ತಲಿನ ಪ್ರದೇಶವು ಕೆಸರುಮವಾಗಿದೆ. ಗ್ರಾಮಸ್ಥರು ಹಾಗೂ ಶಾಲೆಗೆ ತೆರಳುವ ಮಕ್ಕಳು ಕೆಸರಿನಲ್ಲಿಯೇನಡೆದುಕೊಂಡು ಹೋಗುವ ಸ್ಥಿತಿ
ಬಂದೊದಗಿದೆ. ಅಕ್ರಮ ಮರಳು ವಾಹನಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆಹಾಗೂ ಕಂದಾಯ ಇಲಾಖೆ ಸಂಪೂರ್ಣವಿಫಲವಾಗಿದೆ. ಗ್ರಾಮದಲ್ಲಿ ಅಕ್ರಮವಾಗಿ ಓಡಾಡುತ್ತಿರುವ ಮರಳು ವಾಹನ ತಡೆಯಲು ಹೋದರೆ ಮರಳು ದಂಧೆಕೋರರು ನಮ್ಮನ್ನುಹೆದರಿಸುತ್ತಾರೆ. ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳುಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸಾಮೂಹಿಕವಾಗಿ ಆಕ್ರೋಶ ಹೊರಹಾಕಿದರು.
ಅಸಮರ್ಪಕ ಚರಂಡಿ ನಿರ್ವಹಣೆಯಿಂದಾಗಿ ಅಲ್ಪ ಮಳೆಯಾದರೆ ಸಾಕು ಚರಂಡಿ ನೀರು ರಸ್ತೆಯಲ್ಲಿ ಹಾಗೂ ಮನೆ ಅಂಗಳದಲ್ಲಿ ಬಂದು ನಿಲ್ಲುತ್ತದೆ. ಸಮರ್ಪಕ ಚರಂಡಿ ನಿರ್ಮಿಸುವಲ್ಲಿ ಗ್ರಾಪಂ ಅಧಿಕಾರಿಗಳು ವಿಫಲವಾಗಿದ್ದಾರೆ. ಹಾಳಾಗಿರುವ ರಸ್ತೆ ಸಮರ್ಪಕವಾಗಿ ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಪಿಡಿಒ ಕಲ್ಪನಾ ಕಡಗದ ಮೂಲಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.ತಾಪಂ ಸದಸ್ಯ ಸಿದ್ಧಣ್ಣ ಯಾಳಗಿ, ಸರಕಪ್ಪ ಜಿಗಳೂರು, ಮಲ್ಲಪ್ಪ ವಡಗೇರಿ, ಭೀಮಪ್ಪ ಬನ್ನಿಮರದ, ಶರಣಪ್ಪ ಬನ್ನಿಮರದ, ಪ್ರಕಾಶಕೋಡಿಕೊಪ್ಪದ, ರೇಚಪ್ಪ ಪಲ್ಲೇದ, ರುದ್ರಪ್ಪಮಲ್ಲನಗೌಡ್ರ, ಈರಪ್ಪ ದಿಂಡೂರ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!
ಗದಗ: ಭೀಷ್ಮ ಕೆರೆಗೆ ಸಚಿವ ಎಚ್.ಕೆ. ಪಾಟೀಲ ಬಾಗಿನ ಅರ್ಪಣೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.