ಡಂಬಳ:ಕಳೆ ತೆರವಿಗೆ ಸೈಕಲ್ ವೀಡರ್ ನೆರವು-ಹೆಚ್ಚಳವಾದ ಬೇಡಿಕೆ
ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
Team Udayavani, Jul 25, 2024, 6:00 PM IST
ಉದಯವಾಣಿ ಸಮಾಚಾರ
ಡಂಬಳ: ಕೊಲಿ ಹೆಚ್ಚಳವಾದ ಕಾರಣ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹೊಲದಲ್ಲಿನ ಕಳೆ ತೆಗೆಯುವುದು ತುಂಬಾ ಕಷ್ಟಕರ ಕೆಲಸವಾಗಿದ್ದು, ಆದರೆ ಇವರಿಗೆ ಸೈಕಲ್ ವೀಡರ್ ಯಂತ್ರ ನೆರೆವಿಗೆ ಬರುತ್ತಿದೆ. ಸದ್ಯ ರಿಯಾಯ್ತಿ ದರದಲ್ಲಿ ಕೃಷಿ ಇಲಾಖೆಯಿಂದ ದೊರೆಯುವ ಸೈಕಲ್ ವೀಡರ್‌ಗಳಿಗೆ ಬೇಡಿಕೆ ಹೆಚ್ಚಿದೆ.
ಬೆಳೆ ಮಧ್ಯದ ಕಳೆ ತೆಗೆಯಲು ಹಾಗೂ ಎಡೆಕುಂಟೆ ಹೊಡೆಯಲು ಉಪಯೋಗಕ್ಕೆ ಬರುವ ಸೈಕಲ್ ವೀಡರ್‌ಗಳು ಕಡಿಮೆ ಬೆಲೆಗೆ ದೊರೆತು ಹೆಚ್ಚು ಕೆಲಸಕ್ಕೆ ಉಪಯೋಗಕ್ಕೆ ಬರುತ್ತವೆ. ಆದ್ದರಿಂದ ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ದಾಸ್ತಾನು ಸಂಖ್ಯೆ ಸಹ ಹೆಚ್ಚಾಗುತ್ತಿದೆ.
ಮುಂಡರಗಿ ಮತ್ತು ಡಂಬಳ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ 2 ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ 771, ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ 771 ಸೇರಿ ಒಟ್ಟು 1542 ಸೈಕಲ್ ವೀಡರ್‌ಗಳನ್ನು ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 945 ಮಾರಾಟ ಆಗಿವೆ. 2024-2025ನೇ ಸಾಲಿಗೆ ಅಂದಾಜು 1000 ಸೈಕಲ್ ವೀಡರ್‌ಗಳ ಬೇಡಿಕೆ ಇದ್ದು, ಕೃಷಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಿಯಾಯ್ತಿ ದರದಲ್ಲಿ ಮಾರಾಟ:
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಶೇ. 50 ರಿಯಾಯ್ತಿ ದರದಲ್ಲಿ ರೈತರಿಗೆ ಸೈಕಲ್ ವೀಡರ್ ವಿತರಣೆ ಮಾಡಲಾಗುತ್ತಿದೆ. ಇದು ಸಣ್ಣ, ಅತಿಸಣ್ಣ ರೈತರಿಗೆ, ಎತ್ತುಗಳಿಲ್ಲದವರಿಗೆ ಹೆಚ್ಚು ಅನುಕೂಲಕರ. ಸೈಕಲ್ ವೀಡರ್ ಒಂದಕ್ಕೆ ಪೂರ್ಣ ದರ 2000 ರೂ. ಇದೆ. ರೈತರ ವಂತಿಗೆ 1000 ರೂ. ಇದ್ದು, ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
ಇಂದಿನ ದುಬಾರಿ ದುನಿಯಾದಲ್ಲಿ ಸಣ್ಣ ರೈತರು ಎತ್ತುಗಳನ್ನು ಸಾಕಣೆ ಮಾಡುವುದು ಕಷ್ಟದ ಕೆಲಸ. ಅಲ್ಲದೇ ಕೂಲಿ ದರವೂ
ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಬೆಳೆಯಲ್ಲಿನ ಕಳೆ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಇದಕ್ಕೆ ರೈತರು ಸುಲಭವ ಮಾರ್ಗ ಕಂಡುಕೊಳ್ಳಲು ಸೈಕಲ್ ವೀಡರ್ ಮೊರೆ ಹೋಗುತ್ತಿದ್ದಾರೆ. ಇವು ಶೇಂಗಾ, ಹತ್ತಿ, ಮೆಕ್ಕೆಜೋಳ, ತೊಗರಿ, ಸಜ್ಜೆ, ತರಕಾರಿ ಅಲ್ಲದೇ ಬೀಜೋತ್ಪಾದನೆ ಇತರೆ ಬೆಳೆಗಳಲ್ಲಿನ ಕಳೆ ತಗೆಯಲು ಹಾಗೂ ಎಡೆಕುಂಟೆ ಹೊಡೆಯಲು ಸಹಕಾರಿಯಾಗಿದೆ.
ಈ ಕಳೆನಾಶಕ ಯಂತ್ರಕ್ಕೆ ಎಣ್ಣೆ ಹಾಕಬೇಕಿಲ್ಲ ಪೆಟ್ರೋಲ್, ಡಿಸೇಲ್ ಅವಶ್ಯಕತೆ ಇಲ್ಲ. ಯಂತ್ರ ಹಿಡಿದು ಮುನ್ನಡೆದರೆ ಸಾಕು ಕಳೆ ತನ್ನಿಂದ ತಾನೆ ಕಿತ್ತು ಬೀಳುತ್ತದೆ.
ಸೈಕಲ್ ವೀಡರ್ ಸಣ್ಣ, ಅತೀ ಸಣ್ಣ ರೈತರಿಗೆ ಅನುಕೂಲವಾಗಿದೆ. ಎತ್ತುಗಳು ಮತ್ತು ಕೃಷಿ ಕಾರ್ಮಿಕರ ಸಮಸ್ಯೆ ನಿಭಾಸಲು ಇದು ಸಹಕಾರಿ. ಇಲಾಖೆಯಿಂದ ಶೇ. 50 ರಿಯಾಯ್ತಿ ದರದಲ್ಲಿ ರೈತರಿಗೆ ಸೈಕಲ್ ವೀಡರ್ ವಿತರಣೆ ಮಾಡಲಾಗುತ್ತದೆ.
ಎಸ್.ಬಿ. ರಾಮೆನೇಹಳ್ಳಿ,ಕೃಷಿ
ಅಧಿಕಾರಿ ರೈತ ಸಂಪರ್ಕ ಕೇಂದ್ರ ಡಂಬಳ
ಈ ಯಂತ್ರ ಕೃಷಿ ಕಾರ್ಮಿಕರ ಕೊರತೆ ನೀಗಿಸುತ್ತದೆ. ಇದರ ವೆಚ್ಚ ದುಬಾರಿ ಅಲ್ಲ ಹಾಗೂ ಬಳಕೆ ಸುಲಭವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಕೆಲಸ ಮಾಡಿಕೊಳ್ಳಬಹುದು. ಕೃಷಿ ಇಲಾಖೆಯಿಂದ ರಿಯಾಯ್ತಿ ದರದಲ್ಲಿ ಸಿಗುವ ಸೈಕಲ್ ವೀಡರ್ ತುಂಬಾ ಅನುಕೂಲವಾಗಿದೆ.
ರಮೇಶ, ಹಳ್ಳಿಗುಡಿ, ಗ್ರಾಮದ ರೈತ
*ವಿಜಯ ಸೊರಟೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.