ಅಕ್ಷರ ದೇಗುಲವೀಗ ಅನೈತಿಕ ತಾಣ
Team Udayavani, Mar 12, 2020, 5:03 PM IST
ನರೇಗಲ್ಲ: ಸಮೀಪದ ಪ್ರಭುಲಿಂಗ ಲೀಲೆಯ ಕರ್ತೃ, ಕವಿ ಚಾಮರಸರ ತವರೂರು ನಾರಾಯಣಪುರ ಗ್ರಾಮದಲ್ಲಿನ ಶತಮಾನ ಕಂಡ ಹಳೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಸ್ರಾರು ವಿದ್ಯಾರ್ಥಿಗಳಿಗೆ ಅಕ್ಷರ ನೀಡಿ, ಬಾಳಿಗೆ ಬೆಳಕಾಗಿದ್ದ ತಾಣ ಇಂದು ಅಕ್ರಮ-ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ರೋಣ ಮತ ಕ್ಷೇತ್ರದ ವ್ಯಾಪ್ತಿಯ ಕೋಟುಮಚಗಿ ಗ್ರಾಮದ ಮಜರೆ ಹಾಗೂ ವಾರ್ಡ್ ನಂ.6ರಲ್ಲಿ ನಾರಾಯಣಪುರ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಜನಿಸಿದ ಕವಿ ಚಾಮರಸನ ಕೃತಿಗೆ ವಿಜಯನಗರ ಅರಸರ ಕಾಲದಲ್ಲಿ ಆನೆಯ ಅಂಬಾರಿ ಮೇಲೆ ಕವಿ ಚಾಮರಸ ಬರೆದ ಪ್ರಭುಲಿಂಗ ಲೀಲೆ ಕೃತಿಯಿಟ್ಟು ಕನಕಾಭಿಷೇಕ ಮಾಡಿದ ಇತಿಹಾಸ ಹೊಂದಿದೆ. ಅಂತಹ ಊರಿನ ಶಾಲೆ ಅನೈತಿಕ ಚಟುವಟಿಕೆಗಳಿಗೆ ಬಹುದೊಡ್ಡ ಆಶ್ರಯವಾಗಿದೆ.
ಈ ಶಾಲೆಯು ಶತಮಾನಗಳ ಕಾಲ ಊರಿನ ಪ್ರತಿಯೊಬ್ಬ ನಾಗರಿಕನಿಗೂ ಶಿಕ್ಷಣ ನೀಡಿದೆ. “ಮತ್ತು ಕೊಡುವಳು ಬಂದಾಗ ತುತ್ತು ಕೊಟ್ಟವಳ ಮರಿಬ್ಯಾಡ’ ಎಂಬ ಗಾದೆ ಮಾತಿನಂತಾಗಿದೆ ನಾರಾಯಣಪುರ ಗ್ರಾಮದ ಹಳೇ ಶಾಲೆಯ ಕಟ್ಟಡದ ಸ್ಥಿತಿ. ಆರ್‌ಸಿಸಿ ಕಟ್ಟಡ ನಿರ್ಮಾಣವಾದ ಬಳಿಕೆ ಹಳೆಯ ಹಂಚಿನ ಹಾಗೂ ಕಲ್ಲಿನ ಕಟ್ಟಡಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮರೆಯುತ್ತಿದೆ. ಅಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಬೀಳುವ ಹಂತದಲ್ಲಿದೆ.
ಮರಳಿ ಕೊಡಿ: ಮಕ್ಕಳ ಶಿಕ್ಷಣ ಹಾಗೂ ಶಾಲೆಯ ನಿರ್ಮಾಣಕ್ಕಾಗಿ ಭೂಮಿ ನೀಡಿದ ದಾನಿಗಳು ಮರಳಿ ನಮ್ಮ ಭೂಮಿಯನ್ನು ನಮಗೆ ಹಿಂದಿರುಗಿಸುವಂತೆ ಒತ್ತಾಯಿಸುತ್ತಿದ್ದಾರೆ. ನೂತನಕಟ್ಟಡಗಳನ್ನು ನಿರ್ಮಿಸಿದ್ದರಿಂದ ಹಳೇಯ ಕಟ್ಟಡವನ್ನು ಅನಾಥವಾಗಿ ಕೈಬಿಟ್ಟಿರುವುದು ಶಿಕ್ಷಣ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಶಾಲೆಯಲ್ಲಿ ಚುನಾವಣೆಯಲ್ಲಿ ಮತಗಟ್ಟೆ
ಕೇಂದ್ರ : ಶತಮಾನ ಕಂಡ ಶಾಲೆಯಲ್ಲಿ ಹಲವು ದಶಕಗಳಿಂದ ಈ ಆವರಣದಲ್ಲಿ ಒಂದು ಕೊಠಡಿ ಚುನಾವಣೆ ಇಲಾಖೆಯ ಮತಗಟ್ಟೆಯಾಗಿದೆ. ಇಲ್ಲಿಯೇ ಅನೈತಿಕ, ಅಕ್ರಮ ಚಟುವಟಿಕೆಗಳು ಕೆಳದ ಎರಡು ವರ್ಷಗಳಿಂದ ಎಗ್ಗಿಲ್ಲದೇ ಅವ್ಯಾಹತವಾಗಿ ನಡೆಯುವ. ಇದಕ್ಕೆ ಆರೋಗ್ಯ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿ ಗಳ ನಿರ್ಲಕ್ಷ್ಯವೇ ಕಾರಣ. ಹಲವು ಬಾರಿ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟುಮಚಗಿ ಗ್ರಾಪಂ ವ್ಯಾಪ್ತಿಯ ನಾರಾಯಣಪುರ ಗ್ರಾಮದ ಹಳೆಯ ಶಾಲೆಯನ್ನು ಬೇರೆ ಇಲಾಖೆಗೆ ಅಥವಾ ಉದ್ಯಾನವರ, ಸಾರ್ವಜನಿಕ ಗ್ರಂಥಾಲಯ ನಿರ್ಮಿಸುವುದಕ್ಕೆ ಅವಕಾಶ ಇದೆ. ಆದರೆ, ಈ ಶಾಲೆಯಲ್ಲಿ ಚುನಾವಣೆ ಮತಗಟ್ಟೆ ಇರುವುದರಿಂದ ಇದನ್ನು ನೆಲಸಮ ಮಾಡುವುದು ಸ್ವಲ್ಪ ಕಷ್ಟವಾಗಿದೆ. ಚುನಾವಣೆ ಇಲಾಖೆಗೆ ಈಗಾಗಲೇ ಮತಗಟ್ಟೆಯನ್ನು ಸ್ಥಳಾಂತರ ಮಾಡುವುದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. -ಎಂ.ಎ. ರಡ್ಡೇರ, ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ
-ಸಿಕಂದರ್ ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.