ಕನ್ನಡ ಭಾಷಾ ತಂತ್ರಾಂಶ ಅಭಿವೃದ್ಧಿಪಡಿಸಿ: ಮೇಟಿಮಠ
Team Udayavani, Dec 23, 2019, 4:36 PM IST
ಗಜೇಂದ್ರಗಡ: ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ತಂತ್ರಾಂಶವನ್ನು ಸರ್ಕಾರಗಳು ಹೆಚ್ಚೆಚ್ಚು ಅಭಿವೃದ್ಧಿಪಡಿಸಿ ಯುವ ಪೀಳಿಗೆಗೆ ಮುಟ್ಟುವಂತೆ ಮಾಡಬೇಕಿದೆ ಎಂದು ಸಾಫ್ಟ್‌ವೇರ್ ಎಂಜಿನಿಯರ್ ಸಚಿನ ಮೇಟಿಮಠ ಹೇಳಿದರು.
ಪಟ್ಟಣದ ಮೈಸೂರ ಮಠದಲ್ಲಿ ಕಸಾಪ ತಾಲೂಕಾ ಹಾಗೂ ನಗರ ಘಟಕ ವತಿಯಿಂದ ನಡೆದ 180ನೇ ವಾರದ ಸಾಹಿತ್ಯ ಚಿಂತನ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ತಾಂತ್ರಿಕ ಯುಗದಲ್ಲಿ ಬದುಕುತ್ತಿರುವ ನಾವು ದಿನದಿಂದ ದಿನಕ್ಕೆ ಜ್ಞಾನದ ಶಾಖೆಯನ್ನು ಹರಡುತ್ತಾ ಹೊಸ, ಹೊಸ ವಿಷಯಗಳನ್ನು ಕಲಿಯುತ್ತಿದ್ದೇವೆ. ತಂತ್ರಜ್ಞಾನ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಲ್ಲದೇ ಕನ್ನಡ ತಂತ್ರಾಂಶವನ್ನು ದಿನನಿತ್ಯದ ಕೆಲಸವಾಗಿ ಬಳಸಿಕೊಳ್ಳುತ್ತಿದ್ದೇವೆ. ನುಡಿ ತಂತ್ರಾಂಶ ಅತಿ ಮುಖ್ಯವಾದ ಸಾಫ್ಟ್‌ವೇರ್ ಆಗಿದೆ. ಆದರೆ ಅದನ್ನು ಅಭಿವೃದ್ಧಿಪಡಿಸುವ ಕೆಲಸ ಮಾತ್ರ ನಡೆದಿಲ್ಲ. ಗೂಗಲ್‌ನಲ್ಲಿ ಅನೇಕ ವರ್ಷಗಳ ಒತ್ತಡದಿಂದ ಕನ್ನಡವನ್ನು ಸೇರಿಸಲಾಯಿತು. ಕನ್ನಡ ತಂತ್ರಾಂಶ ಇನ್ನೂ ಬೆಳೆಯ ಬೇಕಾಗಿದೆ ಎಂದರು. ಕಸಾಪ ತಾಲೂಕಾಧ್ಯಕ್ಷ ಐ.ಎ. ರೇವಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಬಹುಭಾಷಾ ಸಂಸ್ಕೃತಿಯನ್ನು ಹೊಂದಿರುವುದರಿಂದ ಆಂಗ್ಲ ಭಾಷೆಯ ಪ್ರಭಾವ ಬಹುಬೇಗನೆ ನಮ್ಮೆಲ್ಲರನ್ನು ಮರುಳಾಗಿಸಿದೆ. ಅಲ್ಲದೆ ಆಂಗ್ಲ ಭಾಷೆಯಲ್ಲಿ ಕಲಿತರಷ್ಟೆ ನಾವು ಬದುಕಬಲ್ಲೆವೆಂಬ ಕಲ್ಪನೆಯಲ್ಲಿ ತೇಲಾಡುತ್ತಿದ್ದೇವೆ. ಹೀಗಾಗಿ ಕನ್ನಡ ಭಾಷೆಯ ಮೇಲೆ ನಿರ್ಲಕ್ಷ್ಯ ಧೋರಣೆ ಬಂದಿದೆ. ಪ್ರತಿಯೊಬ್ಬರೂ ಮಾತೃಭಾಷೆಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಹಿರಿಯ ಸಾಹಿತಿ ದಿ| ಎಲ್.ಎಸ್. ಶೇಷಗಿರಿರಾವ್ ಅವರಿಗೆ ನುಡಿನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಬೀದರನಲ್ಲಿ ನಡೆದ ಮಂದಾರ ಬೆಳ್ಳಿ ಕವಿಗೋಷ್ಠಿ ಸಮಾರಂಭದಲ್ಲಿ ಸಾಹಿತ್ಯ ಸೇವಾರತ್ನ ಪುರಸ್ಕಾರ ಪಡೆದ ಐ.ಎ. ರೇವಡಿ, ಕುಂ. ವೀರಭದ್ರಪ್ಪ ರತ್ನ ಪುರಸ್ಕಾರ ಪಡೆದ ಶರಣಪ್ಪ ಬೇವಿನಕಟ್ಟಿ ಅವರಿಗೆ ಸನ್ಮಾನಿಸಲಾಯಿತು.
ಕಲಾವತಿ ಮುನವಳ್ಳಿ, ಶರಣಮ್ಮ ಅಂಗಡಿ, ಕೆ.ಎಸ್. ಗಾರವಾಡಹಿರೇಮಠ, ಜಿ.ಬಿ. ಪಾಟೀಲ, ಪಿ.ಎಸ್. ವಸ್ತ್ರದ, ಶಂಕರ ಕಲ್ಲಿಗನೂರ, ವಿಜಯಕುಮಾರ ನೂಲ್ವಿ, ಹನುಮಂತ ಭಜಂತ್ರಿ, ಎಸ್.ಎಸ್. ನರೇಗಲ್ಲ, ಎಮ್.ಎಸ್. ಮಕಾನದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.