ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ
Team Udayavani, Jul 7, 2019, 3:35 PM IST
ಲಕ್ಶ್ಯೇ ಶ್ವರ: ದೇವರಾಜ ಅರಸು ವಿಶೇಷ ವರ್ಗ ಯೋಜನೆಯಡಿ ಮಂಜೂರಾದ ಮನೆಗಳ ಕಾರ್ಯಾದೇಶ ಪತ್ರವನ್ನು ಫಲಾನುಭವಿಗಳಿಗೆ ಶಾಸಕ ರಾಮಣ್ಣ ಲಮಾಣಿ ವಿತರಿಸಿದರು.
ಲಕ್ಶ್ಯೇ ಶ್ವರ: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ 2017-18ನೇ ಸಾಲಿನ ದೇವರಾಜ ಅರಸು ವಿಶೇಷ ವರ್ಗ ವಸತಿ ಯೋಜನೆಯಡಿ ಪಟ್ಟಣದ 49 ಫಲಾನುಭವಿಗಳಿಗೆ ಮನೆ ಮಂಜೂರಾತಿ ಕಾರ್ಯಾದೇಶ ಪತ್ರ ಮತ್ತು ಎಸ್‌ಎಫ್‌ಸಿ ಶೇ.5ರ ವಿಕಲಚೇತನರ ಕಲ್ಯಾಣ ನಿಧಿ ಅನುದಾನದಲ್ಲಿ 7 ಮಕ್ಕಳಿಗೆ ಶ್ರವಣ ದೋಷ ಯಂತ್ರವನ್ನು ಶಾಸಕ ರಾಮಣ್ಣ ಲಮಾಣಿ ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರು, ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿವೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ಪಾಟೀಲ, ಸದಸ್ಯರಾದ ವಿಜಯ ಕರಡಿ, ಮಹೇಶ ಹೊಗೆಸೊಪ್ಪಿನ, ಮಹೇಶ ಹುಲಬಜಾರ, ಜಯಕ್ಕ ಕಳ್ಳಿ, ಜಯವ್ವ ಅಂದಲಗಿ, ನೀಲಪ್ಪ ಹತ್ತಿ, ವಿರುಪಾಕ್ಷಪ್ಪ ಅಣ್ಣಿಗೇರಿ, ತಿಮ್ಮರಡ್ಡಿ ಮರಡ್ಡಿ, ದುಂಡೇಶ ಕೊಟಗಿ, ಬಸವರಾಜ ಮೆಣಸಿನಕಾಯಿ, ವಿಜಯ ಕುಂಬಾರ, ಪ್ರವೀಣ ಬೋಮಲೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.