ಮೂಗಿನ ನೇರಕ್ಕೆ ಹೇಳಿಕೆ ನೀಡಬೇಡಿ: ತೋಂಟದ ಶ್ರೀ
Team Udayavani, Oct 20, 2018, 6:30 AM IST
ಗದಗ: ತಮ್ಮ ಮೂಗಿನ ನೇರಕ್ಕೆ, ಅನುಕೂಲವಾದಿ ರಾಜಕಾರಣಕ್ಕೆ ಬಸವ ತತ್ವವನ್ನು ಬಳಸಿ ಇತ್ತೀಚೆಗೆ ನೀಡಲಾಗುತ್ತಿರುವ ಹೇಳಿಕೆಗಳನ್ನು ಸಮಾಜ ಉಪೇಕ್ಷಿಸಬೇಕು. ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿಲ್ಲದು ಎಂದು ಜಗದ್ಗುರು ತೋಂಟದ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಸಂವಿಧಾನದ ಮೂಲ ಆಶಯಗಳಿಗೆ ಬಸವ ತತ್ವವೇ ಅಡಿಗಲ್ಲು. ಹೀಗಾಗಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತ್ಯೇಕ ಧರ್ಮ ಕುರಿತ ಕಾನೂನುಬದಟಛಿ ಅವಕಾಶದ ಸಂಗತಿಯನ್ನು ಬಸವಾನುಯಾಯಿಗಳು ಮನಗಾಣಿಸಿದ್ದೇವೆಯೇ ವಿನಃ ಅವರ ಮುಂದೆ ನಾವು ಯಾವುದೇ ಸಹಾಯಕ್ಕೆ ಕೈ ಚಾಚಿರಲಿಲ್ಲ. ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟವೂ ಕಾನೂನು ಬದಟಛಿವಾಗಿ ತಾವು ಮಾಡಬೇಕಾಗಿದ್ದ ಕೆಲಸವನ್ನು ಮಾಡಿದೆ. ಇಡೀ
ವಿದ್ಯಮಾನಕ್ಕೆ ಈಗ ವೋಟು ಗಳಿಕೆಯ ರಾಜಕಾರಣದ ಬಣ್ಣ ಬಳಿಯುವುದು ಬಸವ ತತ್ವಕ್ಕೆ ಮಾಡುವ ಬಹುದೊಡ್ಡ ಅಪಚಾರ ಎಂದು ಪರೋಕ್ಷವಾಗಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.