ರೋಣದಲ್ಲಿ ನೀರಿಗಾಗಿ ಭುಗಿಲೆದ್ದ ಹಾಹಾಕಾರ
Team Udayavani, Apr 7, 2021, 4:04 PM IST
ರೋಣ: ಪಟ್ಟಣ ಸೇರಿದಂತೆ ತಾಲೂಕಿನ ನೆರೆ ಹಾವಳಿಯಿಂದ ಸ್ಥಳಾಂತರಗೊಂಡನವ ಗ್ರಾಮಗಳಿಗೆ ಬೇಸಿಗೆ ಕಾಲ ಬಂತೆಂದರೆ ನೀರಿನದ್ದೇ ಚಿಂತೆ. ಪ್ರತಿಯೊಂದು ಜೀವಿಗೂ ಬದುಕಲು ನೀರು ಅತ್ಯವಶ್ಯಕವಾಗಿ ಬೇಕು. ಇದನ್ನರಿತ ಸರ್ಕಾರ ಸಾಕಷ್ಟುಯೋಜನೆಗಳ ಮೂಲಕ ನೀರು ಪೂರೈಸಲು ಮುಂದಾಗಿದೆ. ಆದರೆ, ಬೇಸಿಗೆಯಲ್ಲಿ ಈ ಭಾಗದ ಕೆಲವು ಗ್ರಾಮಗಳ ಜನರು ನೀರಿಗಾಗಿ ಪರದಾಡುವಂತಾಗಿದೆ.
ರೋಣ ಪಟ್ಟಣದ 23 ವಾರ್ಡ್ ಗಳಿಗೆ ಐದು ದಿನಗಳಿಗೊಮ್ಮೆನೀರು ಪೂರೈಸಲಾಗುತ್ತಿದೆ. ಒಂದುದಿನಕ್ಕೆ ಸುಮಾರು 25 ಲಕ್ಷ ಲೀಟರ್ ನೀರಿನ ಅವಶ್ಯಕತೆ ಇದ್ದು, ಸದ್ಯ 20ಲಕ್ಷ ಲೀಟರ್ ನೀರನ್ನು ಮಲಪ್ರಭಾ ನದಿಯಿಂದ ಹಾಗೂ 5ಲಕ್ಷ ಲೀಟರ್‌ನೀರನ್ನು ಪಟ್ಟಣದಲ್ಲಿ ಲಭ್ಯವಿರುವ 28ಕೊಳವೆ ಬಾವಿಗಳಿಂದ ಪಡೆದುಕೊಂಡು ಜನತೆಗೆ ಪೂರೈಸಲಾಗುತ್ತಿದೆ. ಇದಲ್ಲದೇ,ಡಿಬಿಒಟಿ ಯೋಜನೆಯಿಂದ ದಿನಕ್ಕೆಸುಮಾರು ಎರಡು ಲಕ್ಷ ಲೀಟರ್ ನೀರು ಪಡೆದುಕೊಳ್ಳಲಾಗುತ್ತಿದೆ.
ಸದ್ಯ ಮಲಪ್ರಭಾ ನದಿಯಲ್ಲಿ ನೀರು ಹರಿಯುತ್ತಿರುವುದರಿಂದಮುಂದಿನ ಎರಡು ತಿಂಗಳ ಅವಧಿ ಗೆ ಪಟ್ಟಣದ ಜನತೆಗೆ ನೀರಿನತೊಂದರೆಯಾಗಲಾರದು. ಮಲಪ್ರಭಾನದಿಯಲ್ಲಿ ನೀರು ಕಡಿಮೆಯಾದರೆ ಹತ್ತು ದಿನಗಳಿಗೊಮ್ಮೆ ನೀರು ಪೂರೈಸುವ ಸ್ಥಿತಿ ಎದುರಾಗಬಹುದು. 2008-09ನೇ ಸಾಲಿನಲ್ಲಿಮಲಪ್ರಭಾ ನದಿ ಪ್ರವಾಹಕ್ಕೆ ತಾಲೂಕಿನ ಹೊಳೆಆಲೂರ, ಅಮರಗೋಳ, ಹುನಗುಂಡಿ, ಬಸರಕೋಡ, ಬಿ.ಎಸ್.ಬೇಲೇರಿ, ಕುರುವಿನಕೊಪ್ಪ, ಗಾಡಗೋಳಿ, ಅಸೂಟಿ, ಮೆಣಸಗಿ, ಗುಲಗಂದಿ, ಹೊಳೆಹಡಗಲಿ ಸೇರಿದಂತೆ 16ಕ್ಕೂ ಹೆಚ್ಚುಗ್ರಾಮಗಳು ನದಿ ಪ್ರವಾಹಕ್ಕೆ ತುತ್ತಾಗಿದ್ದರಿಂದ ರಾಜ್ಯ ಸರ್ಕಾರ ನಿರ್ಮಿಸಿಕೊಟ್ಟಿರುವ ನವ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದಿಂದ ಅನೇಕ ನೀರಿನ ಯೋಜನೆಗಳು ಜಾರಿಯಾಗಿದ್ದರೂ ಅವುಗಳನ್ನು ಹಳೇ ಗ್ರಾಮಕ್ಕೆ ನೀಡಲಾಗಿದೆ.
ನವ ಗ್ರಾಮದಲ್ಲಿ ವಾಸಿಸುತ್ತಿರುವ ಸಂತ್ರಸ್ತರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಆಗಿಲ್ಲ. ಇದರಿಂದ ಬೇಸಿಗೆ ಬಂದರೆ ಸಾಕು 3-4 ಕಿ.ಮೀ. ದೂರ ಹೋಗಿ ಕುಡಿಯುವನೀರು ತರುವ ದುಸ್ಥಿತಿ ಇಲ್ಲಿನ ಸಂತ್ರಸ್ತರಿಗೆ ಬಂದಿದೆ. ಇದರಿಂದ ಕೆಲವೊಮ್ಮೆ ಇಲ್ಲಿನ ಸಂತ್ರಸ್ತರಿಗೆ ನೀರು ತುಂಬಿಸುವುದು ಒಂದು ದಿನದ ಕೆಲಸವಾಗುತ್ತದೆ. ಮನೆಯಲ್ಲಿ ಗಾಡಿಗಳು ಇದ್ದವರು ಗಾಡಿಯಲ್ಲಿ ತಮಗೆ ಬೇಕಾದಷ್ಟು ನೀರು ತರುತ್ತಾರೆ. ಮನೆಯಲ್ಲಿ ಗಾಡಿಗಳು ಇಲ್ಲದವರು ತೆಲೆ ಮೇಲೆ ಹೊತ್ತು ನೀರು ತರುವುದು ಅನಿವಾರ್ಯವಾಗಿದೆ.
1049 ಕೋಟಿಯಲ್ಲಿ ಗದಗ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ಜಾರಿಗೆ ತರುವ ಮೂಲಕ ಗ್ರಾಮೀಣ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ. ಗ್ರಾಮಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಟ್ಯಾಂಕ್ ನಿರ್ಮಾಣವಾಗಿವೆ. ಆದರೆ ಡಿಬಿಒಟಿ ಯೋಜನೆಯಲ್ಲಿ ಗ್ರಾಮದ ಎಲ್ಲಟ್ಯಾಂಕ್‌ಗಳಿಗೆ ಪೂರೈಸದೆ, ಒಂದೊಂದು ಟ್ಯಾಂಕ್‌ಗೆ ಪೂರೈಸಲಾಗುತ್ತದೆ. ಒಂದೇ ಗ್ರಾಮದಲ್ಲಿರುವ ಜನರು ಒಂದು ಭಾಗದಲ್ಲಿ ನದಿ ನೀರು ಕುಡಿಯುತ್ತಾರೆ. ಇನ್ನೊಂದು ಭಾಗದ ಜನಕ್ಕೆ ಕೊಳವೆ ಬಾವಿ ನೀರು ಪೂರೈಸುತ್ತಾರೆ. ಇದರಿಂದ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಜತೆಗೆ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
ಅಂತರ್ಜಲ ವೃದ್ಧಿ: ಹೌದು, ತಾಲೂಕಿನಾದ್ಯಂತ ನರೇಗಾ ಯೋಜನೆಯಲ್ಲಿ ಕೃಷಿ ಹೊಂಡ, ಚೆಕ್ ಡ್ಯಾಂ, ಜಲ ಮರುಪೂರ್ಣ, ಇಂಗು ಗುಂಡಿ ಸೇರಿದಂತೆಅನೇಕ ಕಾಮಗಾರಿಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುವ ನೀರನ್ನುಭೂಮಿಯಲ್ಲಿ ಇಂಗಿಸುವ ಕೆಲಸವಾಗಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿಹಲವು ವರ್ಷಗಳಿಂದ ನೀರು ಇಲ್ಲದೆ ಬತ್ತಿದ ಕೊಳವೆ ಭಾವಿಗಳಲ್ಲಿ ನೀರು ಲಭ್ಯವಾಗಿದೆ. ರೈತರು ಮತ್ತೆ ನೀರಾವರಿ ಕಾಯಕ ಮುಂದುವರಿಸಿದ್ದಾರೆ.
ನೆರೆ ಹಾವಳಿಯಿಂದಸ್ಥಳಾಂತರಗೊಂಡಗ್ರಾಮಗಳಿಗೆ ನೀರು ಪೂರೈಸಲು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮನೆ ಮನೆಗೆ ಗಂಗೆ ಯೋಜನೆಯಡಿ ಅನುದಾನ ಮಂಜೂರಾಗಿದೆ. ಅಲ್ಲದೇ, ಕಾಮಗಾರಿಯೂ ಪ್ರಗತಿಯಲ್ಲಿದೆ.ಇನ್ನು ಕೆಲವೇ ದಿನಗಳಲ್ಲಿ ಪೈಪ್‌ಲೈನ್ ಕೆಲಸ ಮುಗಿದ ತಕ್ಷಣವೇ ಎಲ್ಲ ಮನೆಗಳಿಗೆ ನೀರುಪೂರೈಸಲಾಗುತ್ತದೆ.-ಎಚ್.ಮಹಾದೇವಪ್ಪ, ಕುಡಿವ ನೀರು–ನೈರ್ಮಲ್ಯ
ಯೋಜನೆ ಅಧಿಕಾರಿ
ಸರ್ಕಾರ ಎಲ್ಲ ಸೌಲಭ್ಯ ಕೊಡುವುದಾಗಿ ಹೇಳಿನಮ್ಮನ್ನು ಹಳೇ ಊರಿನಿಂದಸ್ಥಳಾಂತರ ಮಾಡಿದ್ದಾರೆ. ನಾವು ಇಲ್ಲಿಗೆ ಬಂದು 4 ವರ್ಷಕಳೆಯಿತು. ಆದರೆ ನಮಗೆಮೂಲಭೂತ ಸೌಕರ್ಯಗಳನ್ನುನೀಡಿಲ್ಲ. ರಸ್ತೆ, ಚರಂಡಿ ಏನಾದರೂಮಾಡ್ಯಾವ್ರಿà. ಆದರ, ಕುಡಿಯಾಕ್‌ನೀರಿಲ್ಲ. ನಮ್ಮ ಹಳೇ ಊರಿಗೆ ಹೋಗಿ ತರಬೇಕರ್ರೀ.-ಹುಲ್ಲಪ್ಪ ದುರಗಪ್ಪ ಮಾದರ, ಬಿ.ಎಸ್.ಬೇಲೆರಿ ಗ್ರಾಮಸ್ಥ
–ಯಚ್ಚರಗೌಡ ಗೋವಿಂದಗೌಡ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.