![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 4, 2019, 5:17 PM IST
ಲಕ್ಷ್ಮೇಶ್ವರ: ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಹರಿದು ಬರುವ ಕುಡಿಯುವ ನೀರಿನ ಸರಬರಾಜಿನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಕಳೆದ 8-10 ದಿನಗಳಿಂದ ಜನತೆಗೆ ಕುಡಿಯುವ ನೀರು ಸ್ಥಗಿತಗೊಂಡಿದೆ.
ತುಂಗಭದ್ರಾ ನದಿಯ ಪಾತ್ರವೇವುಂಡಿಯಲ್ಲಿನ ಜಾಕ್‌ವೆಲ್ ಮೂಲಕ ಮಾರ್ಗದ ಸೂರಣಗಿ ಹತ್ತಿರದ ಶುದ್ಧೀಕರಣಘಟಕದಲ್ಲಿ ನೀರು ಶುದ್ಧೀಕರಣಗೊಳ್ಳುತ್ತದೆ ಶುದ್ಧೀಕರಣ ಘಟಕದಲ್ಲಿನ ಕಿ.ವ್ಯಾ ಸಾಮರ್ಥ್ಯ ಟಿಸಿ ಸುಟ್ಟಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ ಇದರಿಂದ ಪಟ್ಟಣವಷ್ಟೇಅಲ್ಲದೆ ಮಾರ್ಗದ ಐದಾರು ಹಳ್ಳಿಗಳಜನರಿಗೂ ನದಿ ನೀರು ಮರೀಚಿಕೆಯಾಗಿದ್ದು ಜನತೆ ಅನಿವಾರ್ಯವಾಗಿ ಸವುಳು ನೀರಿಗೆ ಮೊರೆ ಹೋಗಿದ್ದಾರೆ.
ಈ ಕುರಿತು ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ ಪ್ರತಿಕ್ರಿಯಿಸಿ, ನದಿಯಲ್ಲಿ ಅಪಾರ ಪ್ರಮಾಣ ನೀರಿರುವ ಕಾಲದಲ್ಲಿಯೂ ಜನತೆ ಸವುಳುನೀರು ಕುಡಿಯುವ ಪರಿಸ್ಥಿತಿ ನಿರ್ಮಾಣಕ್ಕೆ ಅಧಿಕಾರಿಗಳ ನಡುವಿನ ಶಿಥಲ ಸಮರ ಮತ್ತು ನಿರ್ಲಕ್ಷವೇ ಕಾರಣವಾಗಿದೆ. ನೀರು ಸರಬರಾಜು ಮಾಡುವ ಮೋಟರ್ ಟಿಸಿ ದುರಸ್ತಿ ಮಾಡಿಕೊಡುವ ಗುತ್ತಿಗೆದಾರರಿಗೆ ಸರಿಯಾಗಿ ಹಣ ಪಾವತಿಸದಿದ್ದರಿಂದ ಅವರು ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಪ್ರತಿಕ್ರಿಯಿಸಿ ಮೋಟರ್ ಟಿಸಿ ದುರಸ್ತಿ ಮಾಡುವ ಗುತ್ತಿಗೆದಾರರ ಪೇಮೆಂಟ್ ಮಾಡುವಲ್ಲಿ ಕೆಲ ತಾಂತ್ರಿಕ ತೊಂದರೆಯಾಗಿದೆ ನದಿ ನೀರು ಸ್ಥಗಿತವಾಗಿದ್ದರೂ ಸ್ಥಳೀಯವಾಗಿ ಲಭ್ಯವಿರುವ ಬೋರ್‌ವೆಲ್‌ಗಳ ಮೂಲಕ ಮನೆ ಮತ್ತು ಸಾರ್ವಜನಿಕ ನಲ್ಲಿಗಳಿಂದನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಸುಟ್ಟಿರುವ ಟಿಸಿ ದುರಸ್ತಿಗೆ ಕೊಟ್ಟಿದ್ದು ಇನ್ನೆರಡು ದಿನಗಳಲ್ಲಿ ನದಿ ನೀರು ಸರಬರಾಜಾಗಲಿದೆ ಎನ್ನುತ್ತಾರೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.