ಗ್ರಂಥಾಲಯ ಸಾಮಗ್ರಿಗಳಿಗೆ ಧೂಳು-ಭಾಗ್ಯ


Team Udayavani, Oct 30, 2019, 12:56 PM IST

gadaga-tdy-1

ಗದಗ: ಗ್ರಾಮೀಣ ಸಾರ್ವಜನಿಕ ಗ್ರಂಥಾಲಯಗಳು ಸಮಸ್ಯೆಗಳ ಆಗರವಾಗಿವೆ. ಒಂದೆಡೆ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ ಜನರಿಂದ ದೂರವಾಗುತ್ತಿವೆ. ಮತ್ತೂಂದೆಡೆ

ಸರಕಾರ ಒದಗಿಸಿದ ವಿವಿಧ ಸಾಮಗ್ರಿಗಳನ್ನು ಗ್ರಾಮೀಣ ಗ್ರಂಥಾಲಯಕ್ಕೆ ಸಾಗಿಸಲು ವೆಚ್ಚ ಭರಿಸಲಾಗದೇ, ಲಕ್ಷಾಂತರ ರೂ. ಮೌಲ್ಯದ ರ್ಯಾಕ್‌, ಅತ್ಯಾಧುನಿಕ ಕುರ್ಚಿ ಹಾಗೂ ಟೇಬಲ್‌ಗ‌ಳು ಮೂಲೆಯಲ್ಲೇ ಧೂಳು ತಿನ್ನುತ್ತಿವೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳ ಪೈಕಿ ಹಲವು ವಾಚನಾಲಯಗಳಲ್ಲಿ ಓದುಗರಿಗೆ ಕೂಡ್ರಲು ಕುರ್ಚಿ-ಮೇಜುಗಳಿಲ್ಲ. ಸೂಕ್ತ ರ್ಯಾಕ್‌ಗಳಿಲ್ಲದೇ, ಪುಸ್ತಕಗಳು ಇಲಿ-ಹೆಗ್ಗಣಗಳಿಗೆ ತುತ್ತಾಗುತ್ತಿವೆ ಎಂಬ ಕೊರಗು ಗ್ರಂಥಾಲಯ ಮೇಲ್ವಿಚಾರಕರನ್ನು ಕಾಡುತ್ತಿದೆ.

ಹಿಂದಿನ ಖರ್ಚೇ ಮರಳಿಲ್ಲ: ಜಿಲ್ಲೆಯಲ್ಲಿ ಒಟ್ಟು 107 ಗ್ರಾಮಗಳಲ್ಲಿ ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಕೆಲ ವರ್ಷಗಳಿಂದ ಇವುಗಳಿಗೆ ಪೀಠೊಪ ಕರಗಳು ಪೂರೈಕೆಯಾಗಿಲ್ಲ. ಈ ಹಿಂದೆ ಒದಗಿಸಿದ್ದ ರ್ಯಾಕ್‌ಗಳು ತುಕ್ಕು ಹಿಡಿದಿದ್ದು, ಕುರ್ಚಿಗಳು ಹಾಳಾಗಿವೆ. ಕೆಲ ಗ್ರಂಥಾಲಯ ಸಹಾಯಕರು ತಮ್ಮ ಸ್ವಂತ ಖರ್ಚಿನಲ್ಲೇ ದುರಸ್ತಿಗೊಳಿಸಿದ್ದಾರೆ. ಆ ಖರ್ಚೆ ಇನ್ನೂ ಮರಳಿಲ್ಲ.

ರ್ಯಾಕ್‌ ಸಾಗಿಸುವುದೇ ಸಮಸ್ಯೆ: ಈ ಸಮಸ್ಯೆ ನಿವಾರಿಸಲು ಗ್ರಂಥಾಲಯ ಇಲಾಖೆ ಮೂಲಕ ಕಳೆದ ವರ್ಷ 100 ಕಬ್ಬಿಣದ ರ್ಯಾಕ್‌(ಕಪಾಟು)ಗಳು, ಕುಷನ್‌ ಚೇರ್‌ ಮತ್ತು ಕಬ್ಬಿಣದ ಟೇಬಲ್‌ಗ‌ಳನ್ನು ಒದಗಿಸಿದೆ. ಆದರೆ, ಅವುಗಳನ್ನು ಜಿಲ್ಲಾ ಗ್ರಂಥಾಲಯದಿಂದ ತಮ್ಮ ಗ್ರಾಮಗಳಿಗೆ ಸಾಗಿಸುವುದೇ ಸವಾಲಿನ ಕೆಲಸವಾಗಿದೆ. ಗದಗ ತಾಲೂಕು ಹೊರತಾಗಿ ಇನ್ನುಳಿದ ಯಾವುದೇ ತಾಲೂಕಿನ ಹಳ್ಳಿಗೆ ಸಾಗಿಸಬೇಕೆಂದರೂ, ಕನಿಷ್ಠ ಒಂದೂವರೆ ಸಾವಿರ ರೂ. ಗಾಡಿ ಬಾಡಿಗೆ ತೆರಬೇಕಾಗುತ್ತದೆ. ಈ ಬಗ್ಗೆ ಕೇಳಿದರೆ, ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಅದು ನಮ್ಮ ಜವಾಬ್ದಾರಿಯಲ್ಲ ಎನ್ನುತ್ತಿದ್ದಾರೆ. ನಮಗೆ ಬರುವ 7 ಸಾವಿರ ರೂ. ಗೌರವಧನದಲ್ಲಿ ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಎಂಬುದು ಗ್ರಾಮೀಣ ಗ್ರಂಥಪಾಲಕರ ಅಸಹಾಯಕ ಮಾತು.

ಈಗಾಗಲೇ ಗ್ರಾಮೀಣ ಗ್ರಂಥಾಲಯಗಳನ್ನು ಗ್ರಾಪಂ ಸುಪರ್ದಿಗೆ ವಹಿಸಲಾಗಿದ್ದು, ಆಯಾ ಗ್ರಂಥಾಲಯಗಳಿಗೆ ಗ್ರಂಥ, ಪೀಠೊಪಕರಣಗಳನ್ನು ಒದಗಿಸಲಾಗುತ್ತದೆ. ಅವುಗಳನ್ನು ಅವರೇ ಕೊಂಡೊಯ್ಯಬೇಕು ಎಂಬುದು ಗ್ರಂಥಾಲಯ ಇಲಾಖೆ ಅಧಿಕಾರಿಗಳ ವಾದ. ಒಟ್ಟಾರೆ, ಪೀಠೊಪಕರಣ ವೆಚ್ಚದಲ್ಲಿ ಗ್ರಂಥಾಲಯ ಇಲಾಖೆ ಹಾಗೂ ಗ್ರಾಮೀಣ ಗ್ರಂಥಪಾಲಕರ ನಡುವಿನ ಹಗ್ಗಜಗ್ಗಾಟ ನಡೆದಿದೆ. ಪರಿಣಾಮ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತಾಗಿದೆ ಗ್ರಾಮೀಣ ಗ್ರಂಥಾಲಯಗಳ ಸ್ಥಿತಿ.

 

-ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

‌UP: ಫಸ್ಟ್‌ ನೈಟ್‌ ದಿನ ಬಿಯರ್‌, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

18-gadaga

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.