ಶಾಂತಿ-ಸಾಮರಸ್ಯದ ಸಂಕೇತ ಈದ್ ಮಿಲಾದ್
ವಿಶ್ವ ಬಂಧುತ್ವದ ಅಮರ ಸಂದೇಶ ಸಾರಿದ ಹಜರತ್ ಮಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಇಂದು
Team Udayavani, Oct 9, 2022, 3:03 PM IST
ಗಜೇಂದ್ರಗಡ: ಆಧ್ಯಾತ್ಮಿಕತೆಯ ಸನ್ಮಾರ್ಗದ ಮೂಲಕ ಸಮಾಜದಲ್ಲಿನ ಮೌಡ್ಯತೆ, ಕಂದಾಚಾರ ತೊಲಗಿಸಿ ವಿಶ್ವ ಭ್ರಾತೃತ್ವ ಹಾಗೂ ಮಾನವೀಯ ಮೌಲ್ಯಗಳ ಬೀಜಮಂತ್ರದ ಪ್ರತಿಪಾದನೆಯೊಂದಿಗೆ ಮುಸ್ಲಿಂ ಧರ್ಮ ಸಂಸ್ಥಾಪಿಸಿ, ಭಾವೈಕ್ಯತೆಯ ಹರಿಕಾರರೆನಿಸಿದ ಪ್ರವಾದಿ ಹಜರತ್ ಮಹಮ್ಮದ ಪೈಗಂಬರ್ (ಸ.ಅ) ಅವರ ಜನ್ಮದಿನವನ್ನು ಪಟ್ಟಣ ಸೇರಿದಂತೆ ವಿಶ್ವಾದ್ಯಂತ ಮುಸಲ್ಮಾನರು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಸಂಭ್ರಮದಿಂದ ಆಚರಿಸುತ್ತಾರೆ.
ಮಾನವನ ದೈನಂದಿನ ಜೀವನದ ಶಿಷ್ಟಾಚಾರಗಳಲ್ಲಿ ವ್ಯತ್ಯಾಸ ಕಂಡಾಗ ಸೃಷ್ಟಿಕರ್ತನು ಸೂಫಿ ಶರಣ, ಸಂತರಂತಹ ಮಹಾತ್ಮರನ್ನು ಸೃಷ್ಟಿಸಿ ಮಾನವನ ಸಕಲ ಭೌತಿಕ ಪರಿಶುದ್ಧತೆಗೆ ಅಗತ್ಯಗಳನ್ನು ಪೂರೈಸುತ್ತಾನೆಂಬುದು ನಂಬಿಕೆ. ಅಂತಹ ಮಹಾನ್ ಶರಣರ ಸಾಲಿನಲ್ಲಿರುವ ಪ್ರವಾದಿ ಎಂದೇ ಕರೆಯಿಸಿಕೊಂಡು ಅಂಧತ್ವದಲ್ಲಿ ಬೆಂದಿದ್ದ ಮುಸ್ಲಿಂ ಸಮುದಾಯದ ಕಣ್ಣು ತೆರೆಯಿಸಿ ಆಧ್ಯಾತ್ಮ ಮತ್ತು ಧಾರ್ಮಿಕತೆಯ ಮಾರ್ಗದೆಡೆಗೆ ಕರೆದೊಯ್ದ ಮಹಾನ್ ಚೇತನ ಹಜರತ್ ಮಹಮ್ಮದ್ ಪೈಗಂಬರ್.
ಪ್ರವಾದಿ ಜನನ: ಕ್ರಿ.ಶ. 571ರ ರಬಿ ಉಲ್ ಅವ್ವಲ್ ಮಾಸದ 12ನೇ ದಿನವಾದ ಸೋಮವಾರದಂದು ಅರಬ್ ರಾಷ್ಟ್ರದ ಮಕ್ಕಾ ಪಟ್ಟಣದಲ್ಲಿ ಜನಿಸಿದರೆಂಬ ಇತಿಹಾಸವಿದೆ. ಆದ್ದರಿಂದ, ಸಹಜವಾಗಿಯೇ ಈ ದಿನದ ಜತೆ ಆ ಮಾಸದಲ್ಲಿ ಮುಸಲ್ಮಾನ್ ಬಾಂಧವರು ಮೌಲೂದ್ ಷರೀಫ್ ಈದ್ ಮಿಲಾದ್ ಮತ್ತು ಈದ್ ಮಿಲಾದುನ್ನಬಿ ಅಲ್ಲದೇ, ಅರಬ್ಬಿ ಭಾಷೆಯಲ್ಲಿ “ಮಿಲಾದ್’ ಎಂದರೆ ಹುಟ್ಟುವ ಸಮಯ. “ನಬಿ’ ಎಂದರೆ ಪೈಗಂಬರ್ ಅಥವಾ ದೇವದೂತ. “ಮಿಲಾದುನ್ನಬಿ’ ಎಂದರೆ ಪೈಗಂಬರರು ಜನಿಸಿದ ದಿನವೆಂಬ ಅರ್ಥ.
ಇಸ್ಲಾಂ ಎಂಬ ಅಭಿದಾನ ಶಾಂತಿ ಮತ್ತು ಅನುಸರಣೆಯನ್ನು ಸೂಚಿಸುತ್ತದೆ. ಇಸ್ಲಾಂ ಧರ್ಮದ ಅನುಗ್ರಹ ಮಾನವೀಯತೆಯ ಐಕ್ಯತೆಯಾಗಿದೆ. ಜಾಗತಿಕ ಶಾಂತಿ, ಮಾನವ ಸಹೋದರತೆ ಮತ್ತು ವಿಶ್ವ ಬಂಧುತ್ವದ ಅಮರ ಸಂದೇಶವನ್ನು ನೀಡಿ ಮನು ಕುಲಕ್ಕೆ ಶಾಂತಿ, ಸನ್ಮಾರ್ಗ ತೋರಿದ ಮಹಮ್ಮದ ಪೈಗಂಬರರ ತತ್ವ ಇಂದಿಗೂ ಅಮರ.
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.