ಪರೀಕ್ಷಾ ಮಂಡಳಿ ಎಡವಟ್ಟು: 26 ಅಂಕ ಕಡಿತ!
Team Udayavani, Aug 29, 2020, 6:46 PM IST
ಗದಗ: ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳ ಎಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬಳ ಅಂಕಗಳು ಕಡಿತಗೊಂಡಿವೆ. ಉತ್ತರ ಪತ್ರಿಕೆ ಹಾಗೂ ಅಂಕಪಟ್ಟಿಯಲ್ಲಿರುವ ಅಂಕಿಗಳನ್ನು ತಾಳೆ ಹಾಕಿದಾಗ 26 ಅಂಕಗಳು ಕಡಿತವಾಗಿದ್ದು ಬೆಳಕಿಗೆ ಬಂದಿದೆ. ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಬಯಸಿರುವ ವಿದ್ಯಾರ್ಥಿನಿ ಆತಂಕಕ್ಕೆ ಸಿಲುಕಿದ್ದು, ಲೋಪ ಸರಿಪಡಿಸುವಂತೆ ಶಿಕ್ಷಣ ಇಲಾಖೆಗೆ ಅಲೆಯುವಂತಾಗಿದೆ.
ಹೌದು, ತಾಲೂಕಿನ ಹುಯಿಲಗೋಳ ಗ್ರಾಮದ ಕುಸುಮಾ ಕುಸುಗಲ್ ಎಂಬ ಬಾಲಕಿ ಹುಬ್ಬಳ್ಳಿಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆ(ಆಂಗ್ಲ ಮಾಧ್ಯಮ)ಯಲ್ಲಿ ವಿದ್ಯಾರ್ಥಿನಿಯಾಗಿದ್ದಳು. ಕುಸುಮಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 476 ಅಂಕ ಪಡೆದಿದ್ದಾಳೆ. ಕನ್ನಡ ಭಾಷೆಯಲ್ಲಿ 125ಕ್ಕೆ 116, ಇಂಗ್ಲಿಷ್- 73, ಹಿಂದಿ- 96, ವಿಜ್ಞಾನ- 69, ಸಮಾಜ ವಿಜ್ಞಾನದಲ್ಲಿ 74 ಅಂಕ ಗಳಿಸಿದ್ದಾಳೆ. ಆದರೆ ಗಣಿತ ವಿಷಯದಲ್ಲಿ 48 ಅಂಕ ಬಂದಿದ್ದರಿಂದ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಬೇಸರ ಮೂಡಿಸಿತ್ತು. ಸ್ಥಳೀಯ ಸರಕಾರಿ ಶಾಲೆಯ ಶಿಕ್ಷಕರೊಬ್ಬರು ಬಾಲಕಿಗೆ ಧೈರ್ಯ ತುಂಬಿ, ಪರೀಕ್ಷಾ ಮಂಡಳಿಯಿಂದ ಗಣಿತ ವಿಷಯದ ಉತ್ತರ ಪತ್ರಿಕೆಯ ಫೋಟೋ ಕಾಪಿ ತರಿಸಿದ್ದು, 26 ಅಂಕಗಳು ಕಡಿಮೆಯಾಗಿವೆ ಎಂಬುದು ಗೊತ್ತಾಗಿದೆ.
ಪರೀಕ್ಷೆಯಲ್ಲಿ ಕುಸುಮಾ 54 ಅಂಕ ಪಡೆದಿದ್ದಾಳೆ ಎಂದು ಉತ್ತರ ಪರೀಕ್ಷೆಯಲ್ಲಿ ಉಲ್ಲೇಖೀಸಿದೆ. ಆದರೆ ಅಂಕಪಟ್ಟಿಯಲ್ಲಿ ಇಂರ್ಟನಲ್ 20, ಎಕ್ಸಟ್ರನಲ್ 28 ಸೇರಿದಂತೆ ಒಟ್ಟು 48 ಅಂಕಗಳನ್ನು ತಪ್ಪಾಗಿ ನಮೋದಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಗ್ರಾಮೀಣ ಮತ್ತು ಶರಹ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿಗೆ ಭೇಟಿ ನೀಡಿದರೂ, ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ
ಗಣಿತ ವಿಷಯದಲ್ಲಿ ಬರಬೇಕಿದ್ದ 74 ಅಂಕಗಳ ಪೈಕಿ 48 ಬಂದಿದ್ದು, 26 ಅಂಕಗಳು ಕಡಿಮೆಯಾಗಿವೆ. ಹಾವೇರಿ ಜಿಲ್ಲೆಯ ಕರ್ಜಗಿ ಮೊರಾರ್ಜಿ ದೇಸಾಯಿ ವಸತಿ ಸಹಿತ ಪಿಯು ಕಾಲೇಜಿನ ಕಾಮರ್ಸ್ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಮಾರ್ಕ್ಸ್ ಕಾರ್ಡ್‌ನಲ್ಲಿ ತಪ್ಪಾಗಿ ಅಂಕ ಮುದ್ರಿಸಿದ್ದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. -ಕುಸುಮಾ ಕುಸುಗಲ್, ವಿದ್ಯಾರ್ಥಿನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.