ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪುರಪ್ರವೇಶ
ಸಾಂಪ್ರದಾಯಿಕವಾಗಿ ಬರಮಾಡಿಕೊಂಡ ಭಕ್ತರು
Team Udayavani, Mar 21, 2022, 3:15 PM IST
ಲಕ್ಷ್ಮೇಶ್ವರ: ಶಿರಹಟ್ಟಿಯ ಜಗದ್ಗುರು ಫಕೀರ ಸ್ವಾಮಿಗಳ ಮಠಕ್ಕೆ ಉತ್ತರಾಧಿಕಾರಿಗಳಾದ ಮೇಲೆ ಪ್ರಥಮ ಬಾರಿಗೆ ಪಟ್ಟಣಕ್ಕೆ ಆಗಮಿಸಿದ ಫಕೀರ ದಿಂಗಾಲೇಶ್ವರ ಸ್ವಾಮಿಗಳನ್ನು ಹಿಂದೂ-ಮುಸ್ಲಿಂ ಭಕ್ತರು ರವಿವಾರ ಸಂಪ್ರದಾಯಬದ್ಧವಾಗಿ ಬರಮಾಡಿಕೊಂಡರು.
ಪಟ್ಟಣದ ಗದಗ ನಾಕಾ ಬಳಿ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮಿಗಳು ಮತ್ತು ಉತ್ತರಾಧಿಕಾರಿ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳಿಗೆ ಪುಷ್ಪಾರ್ಚನೆಗೈದು ಮುತ್ತೈದೆಯರ ಪೂರ್ಣಕುಂಭ, ಆರತಿ, ಪುರವಂತರು, ಡೊಳ್ಳು, ಆನೆ, ಕುದುರೆ, ಜಾಂಜ್ ಮೇಳದೊಂದಿಗೆ ಭಕ್ತಿಯಿಂದ ಸ್ವಾಗತಿಸಲಾಯಿತು. ಅಲ್ಲಿಂದ ಸಕಲ ವಾದ್ಯ ಮೇಳದೊಂದಿಗೆ ಪಾದಯಾತ್ರೆ ಮೂಲಕ ಶ್ರೀ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಉಭಯ ಶ್ರೀಗಳನ್ನು ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ದೇವಸ್ಥಾನದ ಅರ್ಚಕರು ಸನ್ಮಾನಿಸಿ, ಗೌರವಿಸಿದರು. ಅಲ್ಲಿಂದ ದೇವಸ್ಥಾನದ ಉತ್ತರ ದ್ವಾರದಿಂದ ಅಲಂಕೃತ ಸಾರೋಟದಲ್ಲಿ ಸಾವಿರಾರು ಭಕ್ತ ಸಮೂಹದ ಜಯಘೋಷದೊಂದಿಗೆ ಮುಖ್ಯ ಮಾರ್ಗದಲ್ಲಿ ಮೆರವಣಿಗೆ ಸಾಗಿ ಭಾವೈಕ್ಯತೆಯ ಕೇಂದ್ರ ದೂದನಾನಾ ದರ್ಗಾಕ್ಕೆ ಸಾಗಿ ಬಂತು. ದಾರಿಯುದ್ದಕ್ಕೂ ಭಕ್ತರು ಉಭಯ ಶ್ರೀಗಳಿಗೆ ಹೂಮಾಲೆ, ಪುಷ್ಪಾರ್ಚನೆ ಮಾಡುವುದರ ಮೂಲಕ ಭಕ್ತಿಯಿಂದ ನಮಿಸಿದರು.
ದೂದನಾನಾ ದರ್ಗಾದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ದರ್ಗಾ ಮತ್ತು ಅಂಜುಮನ್ ಕಮಿಟಿಯವರು ಶ್ರೀಗಳಿಗೆ ಗೌರವ ಸಮರ್ಪಿಸಿದರು. ಅಲ್ಲಿಂದ ಮುಖ್ಯ ಬಜಾರ್ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸ್ಥಳೀಯ ಫಕ್ಕೀರೇಶ್ವರ ಮಠದವರೆಗೆ ಸಾಗಿ ಬಂದು ಅಲ್ಲಿ ಧರ್ಮಸಭೆ ಜರುಗಿತು.
ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ, ಉಪಾಧ್ಯಕ್ಷೆ ಮಂಜವ್ವ ನಂದೆಣ್ಣವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ, ಮುಖಂಡರಾದ ಹುಮಾಯೂನ್ ಮಾಗಡಿ, ಶಿವಣ್ಣ ನೆಲವಿಗಿ, ಚನ್ನಪ್ಪ ಜಗಲಿ, ಗುರುನಾಥ ದಾನಪ್ಪನವರ, ಎಂ.ಎಸ್.ದೊಡ್ಡಗೌಡ್ರ, ಎಸ್.ಪಿ.ಪಾಟೀಲ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಕ್ತಾರ್‌ಅಹ್ಮದ ಗದಗ, ಎ.ಜಿ. ಸೂರಣಗಿ, ಅನ್ವರಸಾಬ ಹವಾಲ್ದಾರ, ಚಂಬಣ್ಣ ಬಾಳಿಕಾಯಿ, ಎಸ್.ಕೆ. ಹವಾಲ್ದಾರ, ಭರತಣ್ಣ ಬರಿಗಾಲಿ, ಪೂರ್ಣಾಜಿ ಖರಾಟೆ, ವಿಜಯಕುಮಾರ ಮಹಾಂತಶೆಟ್ಟರ, ಎಂ.ಆರ್. ಪಾಟೀಲ, ಶ್ಯಾಮಣ್ಣ ಗಾಂಜಿ, ರಾಜಣ್ಣ ಕುಂಬಿ, ವಿಜಯಕುಮಾರ ಹತ್ತಿಕಾಳ, ಸಿದ್ದನಗೌಡ ಬಳ್ಳೊಳ್ಳಿ, ನೀಲಪ್ಪ ಹತ್ತಿ, ಸೋಮೇಶ ಉಪನಾಳ, ವಿರೂಪಾಕ್ಷ ಆದಿ, ಚಂದ್ರು ಹಂಪಣ್ಣವರ, ಜಿ.ಆರ್. ಫಕ್ಕೀರಸ್ವಾಮಿಮಠ, ಪ್ರವೀಣ ಬಾಳಿಕಾಯಿ, ಎಂ.ಕೆ. ಕಳ್ಳಿಮಠ, ಬಸವರಾಜ ಮೆಣಸಿನಕಾಯಿ, ಅಮರೇಶ ತೆಂಬದಮನಿ, ನಿಜಗುಣಿ ಗಾಂಜಿ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.