ಫಕೀರೇಶ್ವರ ರಥೋತ್ಸವ
Team Udayavani, May 19, 2019, 11:55 AM IST
ಶಿರಹಟ್ಟಿ: ಇಲ್ಲಿನ ಶ್ರೀ ಜ| ಫಕೀರೇಶ್ವರರ ಮಹಾರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಸಹಸ್ರಾರು ಭಕ್ತರ ಹರಹರ ಮಹಾದೇವ ಎಂಬ ಜಯಘೋಷಗಳ ನಡುವೆ ತೇರನ್ನು ಎಳೆಯಲಾಯಿತು.
ಬೆಳಗ್ಗೆ 8ಕ್ಕೆ ಜ| ಫಕೀರ ಸಿದ್ಧರಾಮ ಸ್ವಾಮೀಜಿ ಶ್ರೀ ಮಠದ ಪೀಠಪರಂಪರೆಯಂತೆ ಹರಿಪುರ ಗ್ರಾಮವನ್ನು ಬಿಟ್ಟು ಶಿರಹಟ್ಟಿಗೆ ಪುರಪ್ರವೇಶ ಮಾಡಿದ್ದು, ಬೃಹತ್ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಡೊಳ್ಳಿನ ಮಜಲು, ಝಾಂಜ್ ಮೇಳ, ನಂದಿ ಧ್ವಜ ಹಾಗೂ ಆನೆ, ನಗಾರಿ ನಾದ ಗಮನ ಸೆಳೆಯಿತು. ಪಟ್ಟಣದ ಮ್ಯಾಗೇರಿ ಓಣಿಯಲ್ಲಿರುವ ಕರ್ತೃ ಫಕೀರೇಶ್ವರರ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಅಲ್ಲಿಂದ ಮಠಕ್ಕೆ ಬಂದು ಕರ್ತೃ ಫಕ್ಕಿರೇಶ್ವರರ ಪೂಜೆ ಹಾಗೂ ಇನ್ನಿತ್ಯಾದಿ ನಿಯಮಗಳನ್ನು ಕೈಗೊಂಡು ಶೆಟ್ಟರ ಓಣಿಯಲ್ಲಿನ ಬೋರಶೆಟ್ಟರವರ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ನಂತರ ಮೆರವಣಿಗೆ ಮೂಲಕ ಸಂಜೆ 4.30ಕ್ಕೆ ಮಠಕ್ಕೆ ಆಗಮಿಸಿ ಕೆಲ ಧಾರ್ಮಿಕ ವಿಧಿವಿಧಾನ ಕೈಗೊಂಡು ಲಕ್ಷ್ಮೀ ಪೂಜೆ ಕೈಗೊಂಡು ರಥದ ಕಡೆಗೆ ಸಾಗಿ ಬಂದರು. ನಂತರ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.