ಈರುಳ್ಳಿ ಬೆಲೆ ದಿಢೀರ್ ಕುಸಿತ; ರೈತರ ಪ್ರತಿಭಟನೆ
Team Udayavani, Oct 18, 2019, 6:29 PM IST
ಗದಗ: ಸ್ಥಳೀಯ ಎಪಿಎಂಸಿಯಲ್ಲಿ ಈರುಳ್ಳಿ ದಿಢೀರ್ ಕುಸಿದಿರುವುದನ್ನು ಖಂಡಿಸಿ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿ ಒಳಗಿದ್ದ ಕೆಲ ಸಿಬ್ಬಂದಿ ದಿಗ್ಭಂಧನಕ್ಕೆ ಒಳಗಾದರು.
ಜಿಲ್ಲೆಯ ಗದಗ, ರೋಣ ಹಾಗೂ ಕೊಪ್ಪಳದಿಂದ ಸುಮಾರು ೨ ಸಾವಿರ ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ಇದರಿಂದ ಉದ್ದೇಶ ಪೂರ್ವಕವಾಗಿ ಖರೀದಿದಾರರು ಹಾಗೂ ದಲ್ಲಾಳಿಗಳು ಶಾಮೀಲಾಗಿ ಬೆಲೆ ಕಡಿಮೆ ಮಾಡಿದ್ದಾರೆ. ಇದೇ ಮಾರುಕಟ್ಟೆಯಲ್ಲಿ ಗುರುವಾರ ೨೪೦೦ ರೂ. ದರದಲ್ಲಿ ಮಾರಾಟವಾಗಿದ್ದ ಉತ್ಕೃಷ್ಠ ಗುಣಮಟ್ಟದ ಈರುಳ್ಳಿಗೆ ಇಂದು ಕೇವಲ ೧೪,೦೦ ರೂ. ನಿಗದಿಗೊಳಿಸಿದ್ದಾರೆ. ಅದೂ ನಾಲ್ಕೈದು ಕ್ವಿಂಟಾಲ್‌ಗೆ ಮಾತ್ರ. ಇನ್ನುಳಿದಂತೆ ಸಾಮಾನ್ಯ ಗಡ್ಡೆಗೆ ಕೇವಲ ೧೦೦, ೩೦೦, ೫೦೦ ಹಾಗೂ ೮೦೦ ರೂ. ದರ ಕಟ್ಟಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ, ಧಿಕ್ಕಾರ ಕೂಗಿದರು.
ಬಳಿಕ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆಯಲ್ಲಿ ರೈತರು, ವರ್ತಕರು ಹಾಗೂ ದಲ್ಲಾಳಿಗಳ ಸಮಾಲೋಚನೆ ಸಭೆ ನಡೆಸಿ, ಮರು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.