ಕೃಷಿ ಹೊಂಡ-ಚೆಕ್ ಡ್ಯಾಂಗಳು ಭರ್ತಿ
•ಮಳೆಗೆ ತುಂಬಿದ ಜಲ ಮೂಲ•ಅನ್ನದಾತನ ಮೊಗದಲ್ಲಿ ಮಂದಹಾಸ •ಕೃಷಿ ಕಾರ್ಯ ಚುರುಕು
Team Udayavani, Jun 29, 2019, 9:52 AM IST
ಗಜೇಂದ್ರಗಡ: ಗೋಗೇರಿ ಗ್ರಾಮ ಹೊರ ವಲಯದಲ್ಲಿ ಸುರಿದ ಮಳೆಗೆ ಚೆಕ್ ಡ್ಯಾಂ ತುಂಬಿರುವುದು.
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಸುರಿದ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಮತ್ತು ಪಕ್ಕದಲ್ಲಿ ನಿರ್ಮಿಸಿರುವ ಕೃಷಿ ಹೊಂಡ ಹಾಗೂ ಚೆಕ್ ಡ್ಯಾಂಗಳು ತುಂಬಿವೆ. ಇದು ರೈತ ಸಮುದಾಯದಲ್ಲಿ ಹೊಸ ಭರವಸೆ ಮೂಡಿಸಿದೆ.
ಗಜೇಂದ್ರಗಡ ತಾಲೂಕಿನಲ್ಲಿ ನದಿ ಮೂಲಗಳು ಇಲ್ಲದ ಪರಿಣಾಮ ಮಳೆಯೇ ಆಶ್ರಯವಾಗಿದೆ. ಈ ಮಳೆ ಕೈಕೊಟ್ಟರೆ ಮುಂಗಾರು ಸಂಪೂರ್ಣ ನಾಶವಾಗುತ್ತದೆ. ಇನ್ನು 1200ಕ್ಕೂ ಹೆಚ್ಚು ಅಡಿ ಅಳಕ್ಕೆ ಇಳಿದ ಅಂತರ್ಜಲಕ್ಕೆ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ನೀರು ಸಿಕ್ಕರೂ 6-7 ತಿಂಗಳಲ್ಲೇ ಮತ್ತೆ ಒಣಗಿದ ಉದಾಹರಣೆಗಳು ಸಾಕಷ್ಟು. ಇದು ರೈತರಲ್ಲಿ ನಿರಾಸೆಯ ಕಾರ್ಮೋಡ ಮತ್ತಷ್ಟು ಕವಿಯುವಂತೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕಿನ ಜನತೆಗೆ ಈಚೆಗೆ ಸುರಿದ ಮಳೆಯಿಂದಾಗಿ ನಿಟ್ಟುಸಿರು ಬಿಡುವುದಲ್ಲದೇ ರೈತರಿಗೆ ವರವಾದ ಕೃಷಿ ಹೊಂಡ ಮತ್ತು ಚೆಕ್ ಡ್ಯಾಂಗಳು ಮೈದುಂಬಿಕೊಂಡಿರುವುದು ಅನ್ನದಾತನ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿವೆ.
ರೈತರ ಜಮೀನಿನಲ್ಲಿ ನಿರ್ಮಿಸಿರುವ ಕೃಷಿ ಹೊಂಡಗಳು ಸಂಪೂರ್ಣವಾಗಿ ತುಂಬಿದ್ದು, ನೀರು ಶೇಖರಣೆಯಾಗಿದೆ. ಜೊತೆಗೆ ಜಮೀನಿನ ಪಕ್ಕದಲ್ಲಿ ನಿರ್ಮಿಸಲಾದ ಚೆಕ್‌ಡ್ಯಾಂಗಳಲ್ಲಿಯೂ ನೀರು ಸಂಗ್ರಹವಾಗಿದ್ದು, ಎಲ್ಲಿ ನೋಡಿದರೂ ಚೆಕ್ ಡ್ಯಾಂಗಳು ತುಂಬಿದ ದೃಶ್ಯ ಕಂಡ ಅನ್ನದಾತರು ಸಂತುಷ್ಟರಾಗುತ್ತಿದ್ದಾರೆ.
ವರವಾದ ಚೆಕ್ ಡ್ಯಾಂ ನಿರ್ಮಾಣ: ಹಿಂದಿನ ಶಾಸಕರ ಅಧಿಕಾರವಧಿಯಲ್ಲಿ ರೋಣ ಮತಕ್ಷೇತ್ರದಲ್ಲಿ 76ಕ್ಕೂ ಅಧಿಕ ಚೆಕ್ ಡ್ಯಾಂಗಳು ನಿರ್ಮಿಸಲಾಗಿದ್ದು, ಗಜೇಂದ್ರಗಡ ಭಾಗದಲ್ಲಿ 14 ಚೆಕ್ ಡ್ಯಾಂ, 4 ಬ್ಯಾರೇಜ್ ಮತ್ತು 1 ಬ್ರೀಜ್ ನಿರ್ಮಾಣ ಮಾಡಿದ್ದು, ಇದೀಗ ಮಳೆಗಾಲ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿಡುವ ಮೂಲಕ ರೈತರಿಗೆ ಅನುಕೂಲಕರವಾಗಿದೆ.
ತಾಲೂಕಿನಲ್ಲಿ ಮಳೆರಾಯನ ಆಗಮನ ಶುರುವಾಗಿದ್ದು, ಈಚೆಗೆ ಸುರಿದ ಮಳೆಗೆ ಬಹುತೇಕ ಚೆಕ್ ಡ್ಯಾಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಈವರೆಗೂ ಬಾಗೀನ ಅರ್ಪಿಸದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಣ್ಣ ನೀರಾವರಿ ಇಲಾಖೆಯಿಂದ 1 ಕೋಟಿ, 50 ಲಕ್ಷ ರೂ. ಹೀಗೆ ಒಂದೊಂದು ಚೆಕ್ ಡ್ಯಾಂ, ಬ್ಯಾರೆಜ್‌ಗೆ ವೆಚ್ಚ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಕೋಟ್ಯಂತರ ರೂ. ಅನುದಾನ ವ್ಯಯಿಸಿ ಹತ್ತಾರು ಚೆಕ್ ಡ್ಯಾಂ ನಿರ್ಮಿಸಿರುವುದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಇದೊಂದು ಅಡಿಪಾಯವಾಗಿದೆ ಎನ್ನುವುದು ಕೃಷಿ ತಜ್ಞರ ಮಾತು.
ಗೋಗೇರಿ, ರಾಜೂರ, ಕುಂಟೋಜಿ, ರಾಮಾಪುರ, ಸೂಡಿ, ದ್ಯಾಮುಣಸಿ, ಗುಳಗುಳಿ, ಇಟಗಿ, ನಿಡಗುಂದಿ, ಅಬ್ಬಿಗೇರಿ, ಮುಶಿಗೇರಿ, ಲಕ್ಕಲಕಟ್ಟಿ, ಹೊಸಳ್ಳಿ ಪಂಚಾಯಿತಿ ಸೇರಿದಂತೆ ಅನೇಕ ಕಡೆ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗಿದೆ. ದ್ಯಾಮುಣಸಿ ಬಳಿಸೇತುವೆ ನಿರ್ಮಾಣವನ್ನು ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ಕೈಗೊಳ್ಳಲಾಗಿದೆ.
•ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.