ಕೊತಬಾಳದ ಬಸವ್ವಗೆ ಜನಪದ ಗೌರವ


Team Udayavani, Dec 10, 2018, 4:11 PM IST

10-december-17.gif

ರೋಣ: ತಾಲೂಕಿನ ಕೊತಬಾಳ ಗ್ರಾಮದ ಬಸವ್ವ ತಾಯಿ ಹುಲಗವ್ವ ಮಾದರ ಅವರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರದಿಂದ ಕೊಡಮಾಡುವ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೋತಬಾಳ ಗ್ರಾಮದಲ್ಲಿ ಹುಲಿಗವ್ವ ಮಾದರ ಅವರ ಒಬ್ಬಳೆ ಮಗಳಾದ ಬಸಮ್ಮ ಚಿಕ್ಕ ವಯಸ್ಸಿನಿಂದಲೂ ಜಾನಪದ ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಯಾವುದೇ ಓದು ಬರಹ ಗೊತ್ತಿಲ್ಲದಿದ್ದರೂ ಇವರ ಜಾನಪದ ಸಾಹಿತ್ಯದ ಜ್ಞಾನಕ್ಕೆ ಎಂತವರು ಸಹ ತಲೆಬಾಗುವಂತಹದಾಗಿದೆ. ತನ್ನ 12ನೇ ವಯಸ್ಸಿನಲ್ಲಿ ಜಾನಪದ ಸಾಹಿತ್ಯದ ಸೊಬಗನ್ನು ಮೈಗೊಡಿಸಿಕೊಂಡು ಬೆಳೆದ ಬಸಮ್ಮ ಅವರು ಜನಪದ ಸಾಹಿತ್ಯವನ್ನೆ ತಮ್ಮ ವೃತ್ತಿಯನ್ನಾಗಿ ಆಯ್ದುಕೊಂಡರು. ಜಿಲ್ಲೆ, ತಾಲೂಕಿನ ವಿವಿಧ ಗ್ರಾಮಗಳಾದ ಹುಲ್ಲೂರು, ಮುದೇನಗುಡಿ, ಕುರಹಟ್ಟಿ, ಮಾಡಲಗೇರಿ, ಹೊಳೆಆಲೂರು, ನವಲಗುಂದ,ನರಗುಂದ, ಬಾಗಲಕೋಟೆ ಸೇರಿದಂತೆ ಅನೇಕ ಕಡೆಗಳಲ್ಲಿ ನಡೆದ ಜನಪದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಪದ ಸಾಹಿತ್ಯದ ಸೊಬಗನ್ನು ಜನರಿಗೆ ತಲುಪಿಸುವ ಪ್ರಯತ್ನವನ್ನು ಬಸಮ್ಮ 50 ವರ್ಷಗಳಿಂದ ಮಾಡಿದ್ದಾರೆ.

ಚಿಕ್ಕ ವಯಸ್ಸಿನಿಂದಲೂ ಜಾನಪದ ಕಲೆ ಮೈಗೂಡಿಸಿಕೊಂಡಿರುವ ಬಸಮ್ಮ ಅವರಿಗೆ ಈಗ 69 ವರ್ಷ. ಆದರೂ ತಾವು ಕಲಿತ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯಬೇಕು ಎಂಬ ನಿಟ್ಟಿನಲ್ಲಿ ಇಳಿ ವಯಸ್ಸಿನಲ್ಲಿ ತಮ್ಮ ಜಾನಪದ ಸಾಹಿತ್ಯದ ಮೇಲೆ ಇರುವ ಪ್ರೀತಿ ಅಭಿಮಾನವನ್ನು ಕಿಂಚಿತ್ತು ಕಡಿಮೆ ಮಾಡಿಲ್ಲ. ಸಿನಿಮಾ, ಟಿವಿ, ಸಾಮಾಜಿಕ ಜಾಲತಾಣ ಎಂಬಿತ್ಯಾದಿ ವಸ್ತುಗಳಿಗೆ ಅಂಟಿಕೊಂಡಿರುವ ಇಂದಿನ ಯುವ ಪೀಳಿಗೆಗೆ ಸಮ್ಮ ಸಂಸ್ಕೃತಿ ಸಂಪ್ರದಾಯ ತಿಳಿಸಬೇಕು ಎಂಬುದು ಬಸಮ್ಮ ಅವರ ಆಶಯವಾಗಿದೆ. ನಮ್ಮ ಸಂಸ್ಕೃತಿ ಕಲೆ ನಮ್ಮಿಂದಲೆ ಬೆಳೆಯಬೇಕು ವಿನಹ  ಮತ್ತೊಬ್ಬರಿಂದಲ್ಲ ಎಂಬುದು ಬಸಮ್ಮ ಅವರ ಆಶಯವಾಗಿದೆ.

ಡಿ. 26,27ರಂದು ಬೀದರ ಜಿಲ್ಲೆಯಲ್ಲಿ ನಡೆಯಲಿರುವ ಜನಪದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರಿಗೆ ಹಾಗೂ ಇಬ್ಬರು ಜಾನಪದ ತಜ್ಞರಿಗೆ ಜಾನಪದ ಗೌರವ ಪ್ರಶಸ್ತಿ ನೀಡಲಾಗುತ್ತಿದೆ. ಅದರಲ್ಲಿ ಗದಗ ಜಿಲ್ಲೆಯಿಂದ ಬಸಮ್ಮ ಹುಲ್ಲಿಗೆವ್ವ ಮಾದರ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುಸ್ಕೃತರಿಗೆ ಸರ್ಕಾರದಿಂದ 25 ಸಾವಿರ ರೂ. ನಗದು ಸೇರಿದಂತೆ ಇತರೆ ಗೌರವ ನೀಡಿ ಸನ್ಮಾನಿಸಲಾಗುತ್ತಿದೆ. ಕೋತಬಾಳ ಗ್ರಾಮದಲ್ಲಿ ಸಾಕಷ್ಟು ಜನ ಕಲಾವಿದರು ಕಂಡು ಬರುತ್ತಾರೆ. ಆದರೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಕೋಟಿ ಕೋಟಿ ಹಣ ಖರ್ಚು ಮಾಡುತ್ತದೆ. ಆದರೆ ಇಂತಹ ಕಲಾವಿದರ ಜೀವನ ಹಾಗೂ ಅವರ ವಸತಿ ಬಗ್ಗೆ ಕಾಳಜಿ ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಕೊತಬಾಳ ಗ್ರಾಮದ ಬಸವರಾಜ ದಿಂಡೂರ ಕಲಾವಿದರ ಜೀವನದ ನೋವಿನ ಕುರಿತು ಅಳಲು ತೋಡಿಕೊಂಡಿದ್ದಾರೆ.

ನನಗೆ ಬುದ್ದಿ ಬಂದಾಗಿನಿಂದ ನಮ್ಮ ಸುತ್ತ ಮುತ್ತಲಿನ ಹೆಣ್ಣು ಮಕ್ಕಳು ಹಾಡುವ ಹಾಡು ಕೇಳಿ ತಿಳಿದು ಹಾಡಲಾರಂಭಿಸಿ ಅನೇಕ ಊರುಗಳನ್ನು ಸುತ್ತಿದ್ದೇನೆ. ನನ್ನ ತಾಯಿಗೆ ನಾನು ಒಬ್ಬಳೆ ಮಗಳು. ನನಗೆ ಮಕ್ಕಳಿಲ್ಲ. ಸರ್ಕಾರ ನನ್ನ ಮುಪ್ಪಿನಲ್ಲಿ ಗುರುತಿಸಿ ಪ್ರಶಸ್ತಿ ನೀಡದಕ್ಕೆ ತುಂಬಾ ಸಂತೋಷವಾಗಿದೆ.
.ಬಸವ್ವ ಮಾದರ, ಜಾನಪದ ಕಲಾವಿದೆ 

„ಯಚ್ಚರಗೌಡ ಗೋವಿಂದಗೌಡ್ರ 

ಟಾಪ್ ನ್ಯೂಸ್

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.