ಗವಾಯಿಗಳು ಗಂಧರ್ವ ಲೋಕದಿಂದ ಅವತರಿಸಿದ ಗಾನ ಗಂಧರ್ವರು
ಹುಬ್ಬಳ್ಳಿ ಮೂರುಸಾವಿರ ಮಠದ ಜ| ಡಾ| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಅಭಿಮತ
Team Udayavani, Jun 20, 2022, 5:53 PM IST
ಗದಗ: ಭಾರತೀಯರು ಪುರಾಣ ನಂಬುವಂತೆ, ಪುರಾಣದಲ್ಲಿ 14 ಲೋಕಗಳು ಇರುವಂತೆ, ಅದರಲ್ಲಿರುವ ಗಂಧರ್ವ ಲೋಕದಿಂದ ಉಭಯ ಶ್ರೀಗಳು ಅವತರಿಸಿ ಬಂದು ಸಾವಿರಾರು ಅಂಧ-ಅನಾಥರಿಗೆ ಆಶ್ರಯದಾತರಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜ| ಡಾ| ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಪಂ| ಪಂಚಾಕ್ಷರ ಗವಾಯಿಗಳ 78ನೇ ಹಾಗೂ ಪದ್ಮ ಭೂಷಣ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ 12ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಧರ್ಮೋತ್ತೇಜಕ ಮಹಾಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ನಾಡಿನ ಕಲಾ ಪ್ರಪಂಚವನ್ನು ಬದಲು ಮಾಡಿದ ಉಭಯ ಶ್ರೀಗಳನ್ನು ಭಕ್ತರು ಮನೆ, ಮನದಲ್ಲಿ ದೇವರಂತೆ ಪೂಜಿಸುತ್ತಿದ್ದಾರೆ. ಪುಣ್ಯಾಶ್ರಮದಿಂದ ಕಲಿತು ಹೋದ ಸಾವಿರಾರು ಶಿಷ್ಯರು ದೇಶಾದ್ಯಂತ ಮಹಾನ ವಿದ್ವಾಂಸರಾಗಿದ್ದಾರೆ. ಅಂತಹ ಶ್ರೇಷ್ಠ ಸೇವೆಯನ್ನು ವೀರೇಶ್ವರ ಪುಣ್ಯಾಶ್ರಮ ಮಾಡುತ್ತಿದೆ ಎಂದರು.
ಬಾಲೇಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಸ್ವಾರ್ಥ ಬಯಸದ, ಜಾತಿ-ಮತ ನೋಡದೆ ಶಿಕ್ಷಣ ನೀಡಿ ಉಭಯ ಶ್ರೀಗಳು ಮಹಾತ್ಮರೆನಿಸಿದ್ದಾರೆ.ಗುರುಗಳಿಗೆ ಕಣ್ಣನ್ನು ನೀಡದಿದ್ದರೂ ಸಂಗೀತ ಶಿಕ್ಷಣದ ಕಣ್ಣನ್ನು ನೀಡಿ ಅಸಂಖ್ಯಾತ ಭಕ್ತರಿಗೆ ಬದುಕು ಕೊಡುವ ಮೂಲಕ ದೇವರು ಮಾಡಿದ ದೋಷವನ್ನು ಉಭಯ ಶ್ರೀಗಳು ಪರಿಪೂರ್ಣಗೊಳಿಸಿದ್ದಾರೆ ಎಂದರು.
ಹಾನಗಲ್ ಗುರು ಕುಮಾರೇಶ್ವರರು ಪಂಚಾಕ್ಷರ ಗವಾಯಿಗಳಿಗೆ ಶಿಕ್ಷಣ ನೀಡಲು ಮಧ್ಯಪ್ರದೇಶದ ಮುಸ್ಲಿಂ ಧರ್ಮದ ವಿದ್ವಾಂಸರಿಂದ ಅವರ 3 ಕಠಿಣ ಬೇಡಿಕೆಗಳನ್ನು ಒಪ್ಪಿ ಸಂಗೀತ ಶಿಕ್ಷಣ ಕೊಡಿಸಿದ್ದಾರೆ. 2 ರೂ.ಗೆ ಒಂದು ತೊಲೆ ಬಂಗಾರ ಸಿಗುವ ಸಂದರ್ಭದಲ್ಲಿ ತಿಂಗಳಿಗೆ 200 ರೂ. ಗೌರವಧನ, ವಾರದಲ್ಲಿ ಮೂರು ಬಾರಿ ಮಾಂಸಾಹಾರವನ್ನು ಹೊರಗಡೆ ಸೇವಿಸಿ ಸ್ನಾನ ಮಾಡಿಕೊಂಡು ಬರಲು ಅವಕಾಶ ಮತ್ತು ಶಿವಯೋಗ ಮಂದಿರದಲ್ಲಿ ನಮಾಜ್ ಮಾಡಲು ಮಸೀದಿ ನಿರ್ಮಿಸಿ ಪಂಚಾಕ್ಷರ ಗವಾಯಿಗಳವರಿಗೆ ಸಂಗೀತ ಶಿಕ್ಷಣ ಕೊಡಿಸಲು ಹಾನಗಲ್ ಶ್ರೀಗಳು ಮಾಡಿರುವ ತ್ಯಾಗ ದೊಡ್ಡದು. ಅದರಂತೆ ಪಂಚಾಕ್ಷರ ಗವಾಯಿಗಳು ಎಲ್ಲರನ್ನೂ ಗೌರವಿಸಿದರೆ, ಹಾನಗಲ್ ಶ್ರೀಗಳನ್ನು ಪೂಜಿಸುತ್ತಿದ್ದರು ಎಂದು ಹೇಳಿದರು.
ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿ, ಎಲ್ಲ ಮಳೆಯ ನೀರು ಮುತ್ತುಗಳಾಗಲು ಸಾಧ್ಯವಿಲ್ಲ. ಸ್ವಾತಿ ಮಳೆಯ ನೀರು ಚಿಪ್ಪಿನೊಳಗೆ ಸೇರಿದರೆ ಮುತ್ತಾಗುತ್ತದೆ. ಅದರಂತೆ ಪುಣ್ಯಾಶ್ರಮವನ್ನು ಸ್ಥಾಪಿಸಿ ಅಂಧ-ಅನಾಥರ ಭವಿಷ್ಯ ರೂಪಿಸಿ ದಾಖಲೆ ಬರೆದಿದ್ದಾರೆ. ದೇಶದಲ್ಲಿಯೇ ವೀರೇಶ್ವರ ಪುಣ್ಯಾಶ್ರಮ ಅದ್ಭುತವಾಗಿದೆ ಎಂದರು.
ಇಳಕಲ್ ಮಹಾಂತ ಶ್ರೀಗಳು ಮಾತನಾಡಿ, ಉಭಯ ಶ್ರೀಗಳಿಗೆ ಗುರುವಿನ ಕೃಪೆಯಿದೆ. ಪಂಚಾಕ್ಷರಿ ಗವಾಯಿ ಗಳನ್ನು ಶಿವಯೋಗ ಮಂದಿರದಿಂದ ಬೀಳ್ಕೊಡುವಾಗ ಹಾನಗಲ್ ಶ್ರೀಗಳು ಅಂತರಂಗದಿಂದ ಕಣ್ಣೀರು ಹರಿಸಿದ್ದರು. ಅಂಧರು ಭಿಕ್ಷೆ ಬೇಡುವುದನ್ನು ತಪ್ಪಿಸಿ ಅವರಿಗೆ ಸಂಗೀತ ಶಿಕ್ಷಣ ನೀಡಿ, ಲಕ್ಷ ಲಕ್ಷ ರೂ.ಗಳನ್ನು ಗಳಿಸುವಂತೆ ಮಾಡಿದ್ದಾರೆ ಎಂದು ಹೇಳಿದರು.
ಗಂಗಾವತಿಯ ಡಾ| ಕೊಟ್ಟೂರ ಶ್ರೀಗಳು, ರಾಚಯ್ಯ ದೇವರು ಹಿಪ್ಪರಗಿ, ಕೆಳದಿ ಮೃತ್ಯುಂಜಯ ಶ್ರೀಗಳು, ಹೆಬ್ಟಾಳ ಶ್ರೀಗಳು ನೇತೃತ್ವ ವಹಿಸಿ ದ್ದರು. ಪಂಚಾಕ್ಷರಯ್ಯ ಹಿಡ್ಕಿಮಠ, ಕಾಂತೀಲಾಲ ಬನ್ಸಾಲಿ ಇದ್ದರು. ವೀರೇಶ್ವರ ಪುಣ್ಯಾಶ್ರಮದ ಪ್ರತಿಷ್ಠಿತ ಕುಮಾರಶ್ರೀ ಪ್ರಶಸ್ತಿಯನ್ನು ಜೈನಾಪುರದ ಲಾಲ ಲಿಂಗೇಶ್ವರ ಶರಣರು, ಸೊರಗಾಂವ ಹಣಮಂತ ಮೈತ್ರಿ, ಹಾಲ್ವಿಯ ಮೌನೇಶ ಕುಮಾರ ಪತ್ತಾರ ಅವರಿಗೆ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.