Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Team Udayavani, Sep 30, 2024, 6:17 PM IST

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

ಗದಗ: ಜನ್ಮದಿನದ ಸಂಭ್ರಮದಲ್ಲಿರಬೇಕಿದ್ದ ಒಂಬತ್ತು ವರ್ಷದ ಬಾಲಕ ಸೋಮವಾರ (ಸೆ.30) ಶವವಾಗಿ ಪತ್ತೆಯಾಗಿದ್ದಾನೆ.

ನಗರದ ಕೊನೇರಿ ಹೊಂಡದಲ್ಲಿ ರವಿವಾರ ಕಾಲು ಜಾರಿ ಬಿದ್ದು ಕಣ್ಮರೆಯಾಗಿದ್ದ ಬಾಲಕ ಪ್ರಥಮ್ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಹೊರತೆಗೆದರು.

ಗಂಗಾಪುರ ಪೇಟೆಯ ನಿವಾಸಿಯಾದ ಪ್ರಥಮ್ ಅಶೋಕ‌ ಮಾಡೋಳ್ಳಿ‌ ರವಿವಾರ ಮಧ್ಯಾಹ್ನ ಕೊನೇರಿ ಹೊಂಡದ ಮೆಟ್ಟಿಲುಗಳ ಮೇಲೆ ಸ್ನೇಹಿತರ ಜತೆಗೆ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದ. ಇನ್ನಿಬ್ಬರು ಬಾಲಕರು ಕಿರುಚುತ್ತ ಹೊರ ಬಂದು ಜನರಿಗೆ ವಿಷಯ ತಿಳಿಸಿದ್ದರು.

ತಕ್ಷಣವೇ ಯುವಕರ ತಂಡ ಹೊಂಡಕ್ಕೆ ಜಿಗಿದು ಬಾಲಕನ ರಕ್ಷಣೆಗೆ ಪ್ರಯತ್ನಿಸಿತು. ಇವರ ಜತೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಜತೆಯಾದರು. ಆದರೆ, ಈ ಹೊಂಡದಲ್ಲಿ ಗಣಪತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸರ್ಜನೆ ಮಾಡಿದ್ದರಿಂದ ಕೆಸರು ತುಂಬಿತ್ತು. ಜತೆಗೆ ರವಿವಾರ ಸಂಜೆ ವೇಳೆಗೆ ಮಳೆ ಆರಂಭಗೊಂಡಿದ್ದರಿಂದ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ.

ಸೋಮವಾರ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನ ಮೃತದೇಹವನ್ನು ಪತ್ತೆಹಚ್ಚಿದರು.

ತಂದೆ-ತಾಯಿ ಕಳೆದುಕೊಂಡು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕ ಅಕಾಲಿಕವಾಗಿ ಸಾವನ್ನಪ್ಪಿದ್ದು ಕಂಡು ಸ್ಥಳೀಯರು ಮರುಗಿದರು. ಪ್ರಥಮ್ ಸೆ.30ರಂದು ಜನಿಸಿದ್ದು, ಆತನ ಜನ್ಮದಿನ ಆಚರಿಸಲು ಅಜ್ಜಿ ಎರಡು ದಿನ ಹಿಂದಿನಿಂದಿಲೇ ಸಂಭ್ರಮದ ಸಿದ್ಧತೆ ಆರಂಭಿಸಿದ್ದರು. ಆದರೆ, ಜನ್ಮದಿನದಂದೇ ಶವವಾಗಿ ಪತ್ತೆಯಾದ ಮೊಮ್ಮಗನನ್ನು ಕಂಡು ಅಜ್ಜಿ ಎದೆಬಡಿದುಕೊಂಡು ಅಳುತ್ತಿದ್ದ ದೃಶ್ಯ ನೋಡಿ ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗಿದವು.

ಟಾಪ್ ನ್ಯೂಸ್

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

DK SHI NEW

Kumaraswamy ರಾಜಕೀಯ ಮಾಡುವುದಕ್ಕಿಂತ 1 ಲಕ್ಷ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಿ:ಡಿಕೆಶಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Kanpur Test: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ

Bantwala1

Bantwala: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಮೂವರಿಗೆ ಗಾಯ

siddanna-2

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

ಹುಯಿಲಗೋಳ ಆರೋಗ್ಯ ಕೇಂದ್ರಕ್ಕಿಲ್ಲ ರಸ್ತೆ: ಬೀದಿದೀಪಗಳ ವ್ಯವಸ್ಥೆಯೂ ಇಲ್ಲ

7-gadag

Gadag: ತಂಗಿಯನ್ನು ಬರ್ಬರವಾಗಿ ಕೊಲೆಗೈದು ಪೊಲೀಸರಿಗೆ ಶರಣಾದ ಅಣ್ಣ

Jamadhar

Vachana Darshan: ಆರ್‌ಎಸ್‌ಎಸ್‌ನಿಂದ ಲಿಂಗಾಯತರಲ್ಲಿ ಒಡಕು ಮೂಡಿಸುವ ಹುನ್ನಾರ: ಡಾ.ಜಾಮದಾರ

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

Gadag-Betageri: ಅವಳಿ ನಗರದಲ್ಲಿ ಭಾರಿ ಮಳೆ; ಮನೆಗಳಿಗೆ ನುಗ್ಗಿದ ನೀರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Election-Bond

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

Brahmavar

Mangaluru: ಅಪರಿಚಿತ ವ್ಯಕ್ತಿ ಸಾವು

man-a

Kundapura: ಬೈಕ್‌-ಬುಲೆಟ್‌ ಢಿಕ್ಕಿ: ಮತ್ತೋರ್ವ ಸಾವು

arrested

Belgavi: ಹೊಟೇಲ್‌ನಲ್ಲಿ ಯುವಕನಿಗೆ ಚಾಕು ಇ*ರಿದ ಬಿಎಸ್‌ಎಫ್ ಯೋಧ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.