ಗದಗ: ಮನೆ ಆರೋಗ್ಯಕರ ವಾತಾವರಣಕ್ಕೆ ಗೋವು ಪೂರಕ
Team Udayavani, Jun 12, 2023, 3:10 PM IST
ಗದಗ: ಭಾರತೀಯ ಆಧ್ಯಾತ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಡೆಯುವ ಪ್ರತಿಯೊಂದು ಆಧ್ಯಾತ್ಮಿಕ ಕಾರ್ಯಗಳಲ್ಲಿ ನಮ್ಮ ಪೂರ್ವಜರ
ಕಾರ್ಯ ಚಟುವಟಿಕೆ ವೈಜ್ಞಾನಿಕತೆಯಿಂದ ಕೂಡಿದ ಸಂಸ್ಕೃತಿ, ಸಂಪ್ರದಾಯಗಳ ಜ್ಞಾನವನ್ನು ನೀಡಲಾಗುತ್ತಿದೆ ಎಂದು ಬೆಳ್ಳಟ್ಟಿ-ಕೊಕ್ಕರಗುಂದಿಯ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಸ್ವಾಮೀಜಿ ಹೇಳಿದರು.
ತಾಲೂಕಿನ ಹರ್ಲಾಪುರ ಗ್ರಾಮದ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕೊಟ್ಟೂರೇಶ್ವರ ಪುರಾಣ ಮಂಗಲ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರು ಗೋವುಗಳನ್ನು ಹೆಚ್ಚು ಸಾಕುತ್ತಿದ್ದರು. ಕಾರಣ ಅದರ ಪ್ರತಿಯೊಂದು ಚಲನ ವಲನ ಮನುಷ್ಯನಿಗೆ ಉಪಯುಕ್ತವಾಗುವುದರ ಜೊತೆಗೆ ತನ್ನ ಮನೆಯ
ಆರೋಗ್ಯಕರ ವಾತವಾರಣಕ್ಕೆ ಪೂರಕವಾಗಿತ್ತು ಎಂದರು.
ಆಕಳಿನ ಹಾಲಿನ ಉತ್ಪನ್ನಗಳು ಬೆಳೆಯುವ ಮಕ್ಕಳಿಗೆ ಸಕಾರಾತ್ಮಕವಾಗಿರುತ್ತಿತ್ತು. ಅದರ ಜೊತೆಗೆ ಆಕಳಿನ ಸಗಣಿಯಿಂದ ವಿಭೂತಿ, ಮತ್ತು ಅದರ ಮೂತ್ರವಂತೂ ಅಮೃತಕ್ಕೆ ಸಮಾನವಾಗಿದ್ದು, ಇಂದಿಗೂ ಸಹ ಮೂತ್ರವು ಮನುಷ್ಯನ ಆರೋಗ್ಯಕ್ಕೆ ಉತ್ತಮ ಔಷ ಧಿಯಾಗಿದೆ. ಮನುಷ್ಯ ಇಂದಿನ ಒತ್ತಡದ ಬದುಕಿನಲ್ಲಿ ವಿಕೃತನಾಗುತ್ತಿದ್ದು ಮಠಗಳಲ್ಲಿಯ ಗುರುಗಳ ಸಂಪರ್ಕವನ್ನು ಹೊಂದಿ ಸರಳ ಜೀವನ ನಡೆಸಬೇಕು ಎಂದು ಹೇಳಿದರು.
ಬೆಂಗಳೂರು ಮಿರಾಂಡ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಎಸ್.ಎನ್. ಕಾತರಕಿ ಮಾತನಾಡಿ, ಮಹಾತ್ಮರು, ಯುಗ ಪುರುಷರು, ತಪಸ್ವಿಗಳು ಎನಿಸಿಕೊಂಡ ಪ್ರತಿ ವ್ಯಕ್ತಿ ಬಾಲ್ಯ ಜೀವನವನ್ನು ಅವಲೋಕಿಸಿದಾಗಲೇ ಅವರ ದಿವ್ಯ ಶಕ್ತಿ ಗೊತ್ತಾಗುತ್ತದೆ. ಕೆಲವರು ಹುಟ್ಟಿನಿಂದಲೇ ತಿಳಿದರೆ ಇನ್ನೂ ಕೆಲವರು ಹುಟ್ಟಿದ ಮೇಲೆ ಅವರ ಶಕ್ತಿ ಈ ಸಮಾಜಕ್ಕೆ ಅರಿವು ಬರುತ್ತದೆ. ಈ ದಿಸೆಯಲ್ಲಿ ಹಠಯೋಗಿ ಕೊಟ್ಟೂರೇಶ್ವರರ ಶಕ್ತಿ ಹುಟ್ಟಿದ ಮೇಲೆ ಗೊತ್ತಾಗಿದ್ದು, ಕೊಪ್ಪಳದ ಗವಿಮಠ, ಕಪೋತಗಿರಿಯಲ್ಲಿ ಶಿವಧ್ಯಾನದ ತಪಸ್ಸು ಮಾಡಿದ ನಂತರ ಹರ್ಲಾಪುರದ ಹಡಪದವರ ಮನೆಯಿಂದ ಅವರ ಜೀವನ ಆರಂಭವಾಗಿ ಹಠಯೋಗದಿಂದ ಪವಾಡಗಳನ್ನು ಸೃಷ್ಟಿಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡರು.
ಅವರ ಹಾದಿಯಲ್ಲಿಯೇ ಇಂದಿನ ಕೊಟ್ಟೂರೇಶ್ವರ ಶ್ರೀಗಳು ತಮ್ಮ ವಾಕ್ ಸಿದ್ಧಿಯಿಂದ ಆಧುನಿಕ ಜಗತ್ತಿಗೆ ಹೊಂದುವಂಥ ಜ್ಞಾನವನ್ನು ನೀಡುತ್ತ ಈ ಭಾಗದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯರು, ಡಾ| ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿದರು. ಇದೇ ಸಂದರ್ಭದಲ್ಲಿ ಕೋವಿಡ್ ಹರಡಿರುವ ಸಂದರ್ಭದಲ್ಲಿ ಗ್ರಾಮದ ವೈದ್ಯ ಡಾ|ಎಸ್ .ವಿ. ಸರ್ವಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ “ದೀನರ ಧನ್ವಂತರಿ’ ಎಂಬ ಬಿರುದು ನೀಡಿ ಗೌರವಿಸಲಾಯಿತು.
ದೇಣಿಗೆ ನೀಡಿದ ವಿವಿಧ ಮಹನೀಯರನ್ನು ಸನ್ಮಾನಿಸಲಾಯಿತು. ಡಾ| ಕೊಟ್ಟೂರೇಶ್ವರ ಶ್ರೀಗಳ ತುಲಾಭಾರ ಕಾರ್ಯಕ್ರಮ ನಡೆಯಿತು. ಶಶಿಧರ ಶಾಸ್ತ್ರೀಗಳು ಹಿರೇಮಠ ಅವರು ಕೊಟ್ಟೂರೇಶ್ವರ ಪುರಾಣವನ್ನು ಮಂಗಲ ಮಾಡಿದರು. ಕೆ.ಬಿ. ವೀರಾಪೂರ ಸಂಗೀತ ಸೇವೆ ನೀಡಿದರು.
ವಸಂತಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಸುಮಂಗಲಾ ಚಟ್ರಿ, ಉಪಾಧ್ಯಕ್ಷೆ ರೇಣುಕಾ ವಡ್ಡರ. ಮಲ್ಲೇಶ ಹುಲಕೋಟಿ ಇದ್ದರು.
ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರು ನಿರೂಪಿಸಿದರು. ಕೆ.ಎಂ. ಮಜ್ಜಿಗುಡ್ಡ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.