ಗದಗ: ದೇಶದ ಭವಿಷ್ಯ ರೂಪಿಸಲು ಕೈಜೋಡಿಸಿ-ಕುಲಕರ್ಣಿ
ಸುಸ್ಥಿರ ಅಭಿವೃದ್ಧಿ ಸಾಧಿಸಲು ಶಿಕ್ಷಣ ಹೆಚ್ಚು ಪ್ರಸ್ತುತವಾಗಿದೆ
Team Udayavani, Feb 8, 2024, 5:53 PM IST
ಉದಯವಾಣಿ ಸಮಾಚಾರ
ಗದಗ: ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಅರುಂಧತಿ ಕುಲಕರ್ಣಿ ಹೇಳಿದರು.
ನಗರದ ಲೋಯೋಲಾ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಆಶ್ರಯದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಯುವಕರು ಸದೃಢ ಆರೋಗ್ಯ ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕು ಎಂದರು.
ಎಚ್‌ಐವಿ ನಾಲ್ಕು ಮಾರ್ಗದಿಂದ ಹರಡುತ್ತಿದ್ದು, ಆ ನಾಲ್ಕು ಮಾರ್ಗಗಳನ್ನು ಸುರಕ್ಷಿತ ಉಪಕರಣಗಳನ್ನು ಬಳಸುವ ಮೂಲಕ ಎಚ್‌ಐವಿ ಇಂದ ದೂರ ವಿರಬೇಕು. ಎಚ್‌ಐವಿ ಸೋಂಕಿತರಿಗೆ ಶೇ. 10ರಷ್ಟು ತೂಕ ಕಡಿಮೆಯಾಗುವುದು ಹಾಗೂ ನಿರಂತರ ಬೇ ಧಿಯಾಗುವುದು, ಚರ್ಮದ ಕಾಯಿಲೆಗಳು ಕಾಣಿಸಿಕೊಳ್ಳುವುದು ಹಾಗೂ ಅವಕಾಶವಾದಿ ಸೋಂಕುಗಳು ನಿರಂತರ ಜ್ವರ ಇದ್ದರೆ ಎಚ್‌ಐವಿ ಸೋಂಕು ಇರಬಹುದೆಂದು ಶಂಕಿಸಿ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ ಚಿಕಿತ್ಸೆ ಪಡೆದುಕೊಳ್ಳಲು
ಎಂದು ಹೇಳಿದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಮಾತನಾಡಿ, ಇಂದಿನ ಯುಗದಲ್ಲಿ ಯುವಕರು ಆರೋಗ್ಯದ ಅರಿವು ಮೂಡಿಸಿ,
ಶಿಕ್ಷಣ ಪರಿವರ್ತಿಸುವುದು ಎನ್ನುವ ಘೋಷವಾಕ್ಯದೊಂದಿಗೆ ಸುಸ್ಥಿರ ಅಭಿವೃದ್ಧಿ ಸಾಧಿಸಲು ಶಿಕ್ಷಣ ಹೆಚ್ಚು ಪ್ರಸ್ತುತವಾಗಿದೆ.
ಯುವಕರು ಸನ್ನಡತೆ ಅಳವಡಿಸಿಕೊಳ್ಳಬೇಕು. ವಿಶ್ವದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದು, ಅವರು ಹೇಳುವಂತೆ ಪ್ರಯತವೆಂಬ ಚಂದ್ರನನ್ನು ಬೆಳಗಿಸಿದಂತೆ ಯಶಸ್ಸೆಂಬ ಬೆಳದಿಂಗಳು ಸಿಗುತ್ತದೆ ಎಂದರು.
ಪ್ರೌಢಶಾಲೆ ಪ್ರಾಚಾರ್ಯೆ ರೇನಿತಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಹಾಗೂ ಸನ್ನಡತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಎಚ್‌ಐವಿ ಏಡ್ಸ್ ಕುರಿತು ಬಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಪ್ರೌಢಶಾಲೆ
ಹರ್ಲಾಪೂರದ ಕೊಟ್ರೇಶ ಮುಂಡರಗಿ ಹಾಗೂ ಸಿಡಿಒ ಜೈನ ಪ್ರೌಢಶಾಲೆ ತನುಶ್ರೀ ಹುಚ್ಚಣ್ಣವರ ಪ್ರಥಮ, ಲೋಯೋಲಾ ಪ್ರೌಢಶಾಲೆ ಚಿನ್ಮಯ ಬಂಡಿ ಹಾಗೂ ಜೆಸಿ ಪ್ರೌಢಶಾಲೆ ಜೈಲಾ ಖಾಜಿ ದ್ವಿತೀಯ, ನಗರಸಭೆ ಪ್ರೌಢಶಾಲೆ ಐಶ್ವರ್ಯ ಆಲೂರ ತೃತೀಯ ಸ್ಥಾನಗಳಿಸಿದರು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.