ಗದಗ:ಮುಂಗಾರು ಮಳೆ ಕೊರತೆ: ಬಿತ್ತನೆ ಕುಂಠಿತ
Team Udayavani, Jun 16, 2023, 6:47 PM IST
ಗದಗ: ಮುಂಗಾರು ಆರಂಭದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿತ್ತನೆಯಲ್ಲಿ ಭಾರಿ ಕುಂಠಿತವಾಗಿದ್ದು, 3.09 ಲಕ್ಷ ಹೆಕ್ಟೇರ್ ಬಿತ್ತನೆ ಪೈಕಿ ಈವರೆಗೆ ಕೇವಲ 13,995 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಗದಗ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆ ಹೆಸರು. ಆದ್ದರಿಂದ, ಕೃಷಿ ಇಲಾಖೆ ಕೂಡ ಹೆಸರು ಬೆಳೆಗೆ ಪ್ರಾಮುಖ್ಯತೆ ನೀಡಿ
1,25,000 ಹೆಕ್ಟೇರ್ ಬಿತ್ತನೆ ಗುರಿ ನಿಗದಿ ಮಾಡಿಕೊಂಡಿತ್ತು. ಸದ್ಯ ರೋಹಿಣಿ ಮಳೆ ಕೈಕೊಟ್ಟ ಬೆನ್ನಲ್ಲೇ ಜಿಲ್ಲೆಯಲ್ಲಿ ಈವರೆಗೆ ಕೇವಲ 13,430 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೆಸರು ಬಿತ್ತನೆಯಾಗಿದೆ.ಕೃಷಿ ಇಲಾಖೆ ಜಿಲ್ಲೆಯ ಆದ್ಯತೆ ಅನುಸಾರವಾಗಿ ಬಿತ್ತನೆ ಕ್ಷೇತ್ರದ ಗುರಿ ನಿಗದಿಪಡಿಸಿಕೊಂಡಿತ್ತು.
1.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ 565 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಉಳಿದಂತೆ 32,560 ಹೆಟಕೇರ್ ಪ್ರದೇಶದಲ್ಲಿ ಶೇಂಗಾ, 11,300 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 24,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, 4,530 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳು, 970 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳನ್ನು ಬಿತ್ತನೆ ಮಾಡಲು ಗುರಿ ನಿಗದಿಮಾಡಿಕೊಂಡಿತ್ತು. ಈವರೆಗೆ ಹೆಸರು ಮತ್ತು ಜೋಳ ಮಾತ್ರ ತುಸು ಮಟ್ಟಿಗೆ ಬಿತ್ತನೆಯಾಗಿದೆ.
ರೈತರುಪಿಎಂಕಿಸಾನ್‌ಇ-ಕೆವೈಸಿಮಾಡಿಸಿ ಗದಗ ಜಿಲ್ಲೆಯ 1,35,089 ರೈತರ ಪೈಕಿ ಈವರೆಗೆ 97,474(ಶೇ.72.14)ರಷ್ಟು ರೈತರು
ಪಿಎಂ-ಕಿಸಾನ್ ಯೋಜನೆಯ ಇ-ಕೆವೈಸಿ ಮಾಡಿಕೊಂಡಿದ್ದು, 37,635 ರೈತರು ಇ-ಕೆವೈಸಿ ಮಾಡಿಸಬೇಕಿದೆ. ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ 11,651 ರೈತರು, ಶಿರಹಟ್ಟಿ ತಾಲೂಕಿನಲ್ಲಿ 8,888, ಗದಗ ತಾಲೂಕಿನಲ್ಲಿ 6,926, ಶಿರಹಟ್ಟಿಯಲ್ಲಿ 6,137
ಮತ್ತು ಮುಂಡರಗಿ ತಾಲೂಕಿನಲ್ಲಿ 3,879 ರೈತರು ಇ-ಕೆವೈಸಿ ಮಾಡಿಸಬೇಕಿದೆ.
ಆದ್ದರಿಂದ ಜಿಲ್ಲೆಯಲ್ಲಿ ಈವರೆಗೆ ಇ-ಕೆವೈಸಿ ಮಾಡಿಸದ ರೈತರು ತಿಂಗಳೊಳಗಾಗಿ ಗ್ರಾಮ ಒನ್, ರೈತ ಸಂಪರ್ಕ ಕೇಂದ್ರ ಹಾಗೂ ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ಇ-ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ಪಿಎಂ-ಕಿಸಾನ್ ಯೋಜನೆಯ 1ನೇ ಕಂತಿನ ಹಣವು ರೈತರ ಖಾತೆಗೆ ಜಮೆ ಆಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಮೇ ತಿಂಗಳ ಅಂತ್ಯದಲ್ಲಿ ಸೈಕ್ಲೋನ್ ಎಫೆಕ್ಟ್ನಿಂದಾಗಿ ಮುಂಗಾರು ಆರಂಭಕ್ಕೆ ತೊಂದರೆಯಾಗಿದೆ. ಇನ್ನೂ ಮೂರ್‍ನಾಲ್ಕು ದಿನಗಳ ನಂತರ ಮಳೆಯಾಗುವ ಸಂಭವವಿದ್ದು, ರೈತರು ಒಣಭೂಮಿಯನ್ನು ಬಿತ್ತನೆ ಮಾಡಬಾರದು. ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ಮುಂಗಾರು ಮಳೆ ತಡವಾಗಿದ್ದರಿಂದ ಕೃಷಿ ತಜ್ಞರ ಹಾಗೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬಿತ್ತಿದ ಬೆಳೆ ಕೈಗೆ ಬರದೆ ಆರ್ಥಿಕ ಸಂಕಷ್ಟಕ್ಕೆ ಎದುರಿಸಬೇಕಾಗುತ್ತದೆ.
ತಾರಾಮಣಿ ಜಿ.ಎಚ್., ಜಂಟಿ ಕೃಷಿ ನಿರ್ದೇಶಕರು, ಗದಗ
941 ಕ್ವಿಂಟಲ್ ಬಿತ್ತನೆ ಬೀಜ ವಿತರಣೆ
2023-24ನೇ ಸಾಳಿನ ಮುಂಗಾರು ಹಂಗಾಮಿನಲ್ಲಿ 4,226 ಕ್ವಿಂಟಲ್ ಮೆಕ್ಕೆಜೋಳ ಬೇಡಿಕೆ ಪೈಕಿ 2,756 ಕ್ವಿಂಟಲ್ ದಾಸ್ತಾನಿದ್ದು, 504 ಕ್ವಿಂಟಲ್ ವಿತರಣೆಯಾಗಿದೆ. 1,853 ಕ್ವಿಂಟಲ್ ಹೆಸರು ಬೇಡಿಕೆ ಪೈಕಿ 579 ಕ್ವಿಂಟಲ್ ದಾಸ್ತಾನಿದ್ದು, 406 ಕ್ವಿಂಟಲ್ ವಿತರಣೆಯಾಗಿದೆ. ತೊದರಿ 25.9 ಕ್ವಿಂಟಲ್, ಶೇಂಗಾ 1.20 ಕ್ವಿಂಟಲ್, ಸಜ್ಜೆ 1.50 ಕ್ವಿಂಟಲ್ ಸೇರಿ 9,217 ಕ್ವಿಂಟಲ್ ಮುಂಗಾರು ಹಂಗಾಮಿನ ಬೀಜದ ಬೇಡಿಕೆಗನುಗುಣವಾಗಿ 3,761 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, ಆ ಪೈಕಿ ಈವರೆಗೆ 941.54 ಕ್ವಿಂಟಲ್ ವಿತರಣೆಯಾಗಿದೆ
ಶೇ. 46ರಷ್ಟು ಮಳೆ ಕುಂಠಿತ
2023ರ ಜನವರಿ ಆರಂಭದಿಂದ ಈವರೆಗೆ 148.5 ಎಂಎಂ ಮಳೆಯಾಗಬೇಕಿತ್ತು. ಈವರೆಗೆ ಕೇವಲ 79.6 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ. 46ರಷ್ಟು ಮಳೆ ಕುಂಠಿತಗೊಂಡಿದೆ. ಗದಗ ತಾಲೂಕಿನಲ್ಲಿ ಶೇ. 53ರಷ್ಟು, ಮುಂಡರಗಿ ತಾಲೂಕಿನಲ್ಲಿ ಶೇ. 48ರಷ್ಟು, ನರಗುಂದ ತಾಲೂಕಿನಲ್ಲಿ ಶೇ. 37ರಷ್ಟು, ರೋಣ ತಾಲೂಕಿನಲ್ಲಿ ಶೇ. 39ರಷ್ಟು, ಶಿರಹಟ್ಟಿ ತಾಲೂಕಿನಲ್ಲಿ ಶೇ. 62ರಷ್ಟು, ಗಜೇಂದ್ರಗಡ ತಾಲೂಕಿನಲ್ಲಿ ಶೇ. 47ರಷ್ಟು ಹಾಗೂ ಲಕ್ಷ್ಮೇ ಶ್ವರ ತಾಲೂಕಿನಲ್ಲಿ ಶೇ. 57ರಷ್ಟು ಮಳೆ ಕುಂಠಿತಗೊಂಡಿದೆ.
ಅರುಣಕುಮಾರ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.