ಭಗವಾನ್ ಮಹಾವೀರ ಜಯಂತಿ ಆಚರಣೆ
ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಸರಳ ಆಚರಣೆ
Team Udayavani, Apr 7, 2020, 5:01 PM IST
ಗದಗ: ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಭಗವಾನ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಆನಂದ ಕೆ. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಮತ್ತಿತರ ಇಲಾಖೆಗಳ ಅಧಿಕಾರಿಗಳು ಇದ್ದರು.
ಗಜೇಂದ್ರಗಡ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಮಹಾವೀರರ 2618ನೇ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಕಂದಾಯ ನಿರೀಕ್ಷಕ
ಗಣೇಶ ಕೊಡಕೇರಿ, ಗ್ರಾಮ ಲೆಕ್ಕಾಧಿಕಾರಿ ಶಬ್ಬೀರ ನಿಶಾನದಾರ, ಉಮೇಶ ಅರಳಿಗಿಡದ, ಆರ್.ಎಸ್. ಜಯರಾಮ್, ಎಸ್.ಕೆ. ಗೌಡರ, ಸಾವಿತ್ರಿಬಾಯಿ ಕುಂದಗೋಳ, ರಾಜೇಶ್ವರಿ ಶೆಟ್ಟಿ, ವೈಭವಿ, ಶಾಹೀನ ಗುರಿಕಾರ, ಕಳಕಪ್ಪ ಸ್ವಾಮಿ ಇತರರಿದ್ದರು.
ಬಿಎಎಂಎಸ್ ಕಾಲೇಜಿನಲ್ಲಿ: ಪಟ್ಟಣದ ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ ಮೆಡಿಕಲ್ ಕಾಲೇಜಿನಲ್ಲಿ 24ನೇ ತೀರ್ಥಂಕ ಮಹಾವೀರರ 2618ನೇ ಜಯಂತ್ಯುತ್ಸವ ಆಚರಿಸಲಾಯಿತು. ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ದೇವಿಚಂದ ಪಾರಸಮಲ್ಲಜಿ ಜೈನ ಕುಟುಂಬದ ವತಿಯಿಂದ ಮಹಾವೀರ ಜಯಂತಿಯ ಅಂಗವಾಗಿ ನಿರ್ಗತಿಕ ಕುಟುಂಬಳಿಗೆ ಉಪಹಾರ ವಿತರಿಸಲಾಯಿತು.
ದೇವಿಚಂದ ಜೈನ ಮತ್ತು ಗ್ರಾಪಂ ಸದಸ್ಯ ತಿಮ್ಮರೆಡ್ಡಿ ಮರಡ್ಡಿ ಮಾತನಾಡಿ, ಲಾಕ್ ಡೌನ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮಹಾವೀರರ ಜಯಂತಿಯನ್ನು ನಿರ್ಗತಿಕರಿಗೆ ಮತ್ತು ಭಿಕ್ಷುಕರಿಗೆ ಉಪಾಹಾರ ನೀಡುವ ಮೂಲಕ ಆಚರಿಸಲಾಗಿದೆ. ಜೊತೆಗೆ ಕೊರೊನಾ ಭೀತಿಯಿಂದ ನಿರ್ಗತಿಕರಿಗೆ ಆಹಾರದ ತೊಂದರೆ ಇರುವುದರಿಂದ ಉಪಾಹಾರವನ್ನು ವಿತರಿಸಲಾಗಿದೆ ಎಂದರು.
ಗ್ರಾಪಂ ಉಪಾದ್ಯಕ್ಷರಾದ ರಮೇಶ ನಿರ್ವಾಣಶೆಟ್ಟರ, ಸದಸ್ಯರಾದ ಮೋಹನ ಗುತ್ತೆಮ್ಮನವರ, ಕೊಟ್ರೇಶ ಸಜ್ಜನರ ಹಾಗೂ ದೇವಿಚಂದ ಜೈನ ಕುಟುಂಬದವರಿದ್ದರು. ಮುಂಡರಗಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಹಾವೀರ ಜಯಂತಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಡಾ| ವೆಂಕಟೇಶ ನಾಯಕ ಮಹಾವೀರರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದರು. ಎಸ್.ಎಸ್. ಬಿಚ್ಚಾಲಿ, ಲಿಂಗರಾಜಗೌಡ ಪಾಟೀಲ, ಪವನ ಛೋಪ್ರಾ, ಅಡಿವೆಪ್ಪ ಛಲವಾದಿ, ಪ್ರಕಾಶ ಅಳವಂಡಿ, ಮಂಜುನಾಥ ಮುಧೋಳ, ಸಿದ್ದು ದೇಸಾಯಿ ಇತರರಿದ್ದರು.
ಮುಳಗುಂದ: ಪಟ್ಟಣ ಪಂಚಾಯತ್ ನಲ್ಲಿ ಮಹಾವೀರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಾಗರಾಜ ದೇಶಪಾಂಡೆ, ಷಣ್ಮುಖಪ್ಪ ಬಡ್ನಿ, ಬಸವರಾಜ ಹಾರೋಗೇರಿ, ವಿ.ಎಸ್.ನೀಲಗುಂದ, ಎಂ.ಎಸ್. ಬೆಂತೂರ ಸೇರಿದಂತೆ ಇತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.